ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಈತನನ್ನು ತಕ್ಷಣವೇ ಬಂಧಿಸಿ': ನೆರೆಮನೆಯ ವಿಡಿಯೋ ಮಾಡಲು ಅಪಾಯಕಾರಿ ಸಾಹಸಕ್ಕೆ ಮುಂದಾದ ವೃದ್ಧ!

Viral Video: ವೃದ್ಧನೊಬ್ಬ ಪಕ್ಕದ ಮನೆಯ ವಿಡಿಯೊ ಚಿತ್ರೀಕರಣ ಮಾಡಲು ಅಪಾರ್ಟ್‌ಮೆಂಟ್‌ನ ಕಿಟಕಿಯ ಕಿರಿದಾದ ಅಂಚಿನ ಮೇಲೆ ಕುಳಿತು ರೆಕಾರ್ಡ್ ಮಾಡಲು ಮುಂದಾಗಿದ್ದಾನೆ. ತನ್ನ ಜೀವವನ್ನೆ ಅಪಾಯಕ್ಕೆ ತಳ್ಳಿಕೊಂಡಿರುವ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಈ ವೃದ್ಧ ವ್ಯಕ್ತಿಗೆ ಇಂತಹ ಸಾಹಸ ಬೇಕೇ? ಎಂದು ಹಲವಾರು ಟೀಕೆ ಮಾಡಿದ್ದಾರೆ...

ನೆರೆ ಮನೆಯ ವಿಡಿಯೊ ಮಾಡಲು ಪ್ರಾಣವನ್ನೇ ಪಣಕ್ಕಿಟ್ಟ ವೃದ್ಧ; ವಿಡಿಯೊ ವೈರಲ್

ವಿಡಿಯೊ ಮಾಡಲು ಪ್ರಾಣವನ್ನೇ ಪಣಕ್ಕಿಟ್ಟ ವೃದ್ಧ -

Profile
Pushpa Kumari May 31, 2026 2:53 PM

ನವದೆಹಲಿ,ಮೇ 31: ಇತ್ತೀಚೆಗೆ ಮೊಬೈಲ್ ಗೀಳು ಅನ್ನೋದು ಹೆಚ್ಚಾಗಿ ಬಿಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು, ಲೈಕ್ಸ್ ಪಡೆಯಬೇಕು ಎನ್ನುವ ಉದ್ದೇಶದಿಂದ ಕೆಲವರು ಪ್ರಾಣವನ್ನು ಲೆಕ್ಕಿಸದೇ ಅಪಾಯಕಾರಿ ಸಹಾಸಕ್ಕೆ ಮುಂದಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ವೃದ್ಧನೊಬ್ಬ ಪಕ್ಕದ ಮನೆಯ ವಿಡಿಯೊ ಚಿತ್ರೀಕರಣ ಮಾಡಲು ಅಪಾರ್ಟ್‌ಮೆಂಟ್‌ನ ಕಿಟಕಿಯ ಕಿರಿದಾದ ಅಂಚಿನ ಮೇಲೆ ಕುಳಿತು ರೆಕಾರ್ಡ್ ಮಾಡಲು ಮುಂದಾಗಿದ್ದಾನೆ. ತನ್ನ ಜೀವವನ್ನೆ ಅಪಾಯಕ್ಕೆ ತಳ್ಳಿಕೊಂಡಿರುವ ಈ ದೃಶ್ಯ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಈ ವೃದ್ಧ ವ್ಯಕ್ತಿಗೆ ಇಂತಹ ಸಾಹಸ ಬೇಕೇ? ಎಂದು ಹಲವಾರು ಟೀಕೆ ಮಾಡಿದ್ದಾರೆ.

ವೃದ್ಧನೊಬ್ಬ ಎತ್ತರದ ಅಪಾರ್ಟ್‌ಮೆಂಟ್‌ನ ಕಿರಿದಾದ ಕಿಟಕಿಯ ಅಂಚಿನಲ್ಲಿ ಕುಳಿತು ತನ್ನ ಫೋನ್ ಅನ್ನು ಪಕ್ಕದ ಬಾಲ್ಕನಿಯ ಕಡೆಗೆ ತೋರಿಸುತ್ತಿರುವ ದೃಶ್ಯ ಕಂಡು ಬಂದಿದೆ. ಈ ವಿಡಿಯೊವು ವಸತಿ ಪ್ರದೇಶದಲ್ಲಿ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಆನ್‌ಲೈನ್‌ ನಲ್ಲಿ ಚರ್ಚೆ ಯನ್ನು ಹುಟ್ಟುಹಾಕಿದೆ. ಇತರರ ಖಾಸಗಿ ತನಕ್ಕೆ ತೊಂದರೆ ಉಂಟು ಮಾಡುವುದಲ್ಲದೆ ಆತನ ಪ್ರಾಣದ ಬಗ್ಗೆಯೂ ಯೋಚನೆಯಿಲ್ಲ ಎಂದು ಹಲವಾರು ಕಿಡಿಕಾರಿದ್ದಾರೆ.

ವಿಡಿಯೋ ನೋಡಿ:

ಹತ್ತಿರದ ಕಟ್ಟಡದಿಂದ ಚಿತ್ರೀಕರಣ ಮಾಡುತ್ತಿರುವ ವ್ಯಕ್ತಿಯೊಬ್ಬರು ಎತ್ತರದ ಅಪಾರ್ಟ್‌ಮೆಂಟ್‌ನ ಹೊರಭಾಗದಲ್ಲಿ ಇದನ್ನು ಗಮನಿಸಿದ್ದಾರೆ. ಒಬ್ಬ ವೃದ್ಧ ವ್ಯಕ್ತಿ ತನ್ನ ಅಪಾರ್ಟ್‌ ಮೆಂಟ್ ಕಿಟಕಿಯ ಹೊರಗಿನ ಕಿರಿದಾದ ಅಂಚಿನಲ್ಲಿ ಕುಳಿತಿದ್ದು, ಪಕ್ಕದ ಬಾಲ್ಕನಿಯ ಕಡೆ ಫೋನ್ ಹಿಡಿದಿರುವಂತೆ ಕಾಣುತ್ತಿ ರುವುದನ್ನು ತೋರಿಸಲಾಗಿದೆ. ಫ್ಲ್ಯಾಟ್‌ನ ಕಿಟಕಿಯ ಗೋಡೆಯ ಅಂಚಿನಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ವೃದ್ಧನೊಬ್ಬ ಕುಳಿತಿದ್ದಾನೆ..

Virat-Anushka : ಪ್ರೇಮಾನಂದ್‌ ಮಹಾರಾಜರ ಆಶ್ರಮಕ್ಕೆ ತೆರಳಿದ ವಿರುಷ್ಕಾ ದಂಪತಿ!

ಆ ವ್ಯಕ್ತಿ ಕಿರಿದಾದ ಅಂಚಿನಲ್ಲಿ ಸಮತೋಲನ ಕಾಯ್ದುಕೊಂಡು ಕೈಯಲ್ಲಿ ಮೊಬೈಲ್ ಫೋನ್ ಹಿಡಿದಿರುವಂತೆ ತೋರುತ್ತದೆ. ಚಿತ್ರೀಕರಣ ಮಾಡುತ್ತಿರುವ ವ್ಯಕ್ತಿಯು ಕ್ಯಾಮೆರಾವನ್ನು ಹಲವಾರು ಸೆಕೆಂಡುಗಳ ಕಾಲ ತನ್ನ ಮೇಲೆ ಕೇಂದ್ರೀಕರಿಸಿದ್ದಾನೆ.

​ಈ ವಿಡಿಯೋ ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡಿದ್ದು, ಗೌಪ್ಯತೆ ಎಚ್ಚರಿಕೆ... ವೃದ್ಧ ವ್ಯಕ್ತಿ ನೆರೆಹೊರೆಯವರ ಬಾಲ್ಕನಿಯಲ್ಲಿ ನುಸುಳುತ್ತ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡುತ್ತಿದ್ದಾನೆ.ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಬಳಕೆದಾರರೊಬ್ಬರು ಆ ವ್ಯಕ್ತಿಯ ಕೃತ್ಯಗಳನ್ನು ಟೀಕಿಸಿದ್ದಾರೆ. ಈ ಬೋಳು ಕೂದಲಿನ ಚಿಕ್ಕಪ್ಪಂದಿರು ಸಮಾಜಕ್ಕೆ ಮಾರಕ ಎಂದು ಬರೆದಿದ್ದಾರೆ.ಮತ್ತೊಬ್ಬರು ಇವನನ್ನು ತಕ್ಷಣವೇ ಪೊಲೀಸರು ಬಂಧಿಸಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.