ರೈಲು ಪ್ರಯಾಣದುದ್ದಕ್ಕೂ ಲೈಂಗಿಕ ಕಿರುಕುಳ: ಪೋಸ್ಟ್ ಶೇರ್ ಮಾಡಿ ಬೇಸರ ಹೊರಹಾಕಿದ ಯುವತಿ
Viral Video: ಸಾರ್ವಜನಿಕ ಸ್ಥಳದಲ್ಲಿ, ಪ್ರಯಾಣ ಸ್ಥಳದಲ್ಲಿ ಮಹಿಳೆಯರು ಭಯದಿಂದಲೇ ಸಂಚಾರ ಮಾಡಬೇಕಾದ ಸಂದರ್ಭ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಸಹ ಪ್ರಯಾಣಿಕರು ಕಿರುಕುಳ ನೀಡಿದ ಘಟನೆಯೊಂದು ನಡೆದಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ತಾನು ಪ್ರಯಾಣದುದ್ದಕ್ಕೂ ಕಿರುಕುಳವನ್ನು ಅನುಭವಿಸುತ್ತಲೇ ಬಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಹಾರದ ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ -
ಬಿಹಾರ,ಜು.5: ದಿನನಿತ್ಯ ಒಂದಾದರೂ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಿರುಕುಳ ಪ್ರಕರಣಗಳು ವರದಿಯಾಗುತ್ತಲೇ ಇವೆ. ಸಾರ್ವಜನಿಕ ಸ್ಥಳದಲ್ಲಿ, ಪ್ರಯಾಣ ಸ್ಥಳದಲ್ಲಿ ಮಹಿಳೆ ಯರು ಭಯದಿಂದಲೇ ಸಂಚಾರ ಮಾಡಬೇಕಾದ ಸಂದರ್ಭ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಸಹ ಪ್ರಯಾಣಿಕರು ಕಿರುಕುಳ ನೀಡಿದ ಘಟನೆಯೊಂದು ನಡೆದಿದೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ತಾನು ಪ್ರಯಾಣದುದ್ದಕ್ಕೂ ಕಿರುಕುಳವನ್ನು ಅನುಭವಿಸುತ್ತಲೇ ಬಂದಿದ್ದೇನೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ತನ್ನ ಅನುಭವವನ್ನು ಹಂಚಿಕೊಂಡ (Viral News) ಆಕೆ ಒಂಟಿಯಾಗಿ ಪ್ರಯಾಣಿಸುವಾಗ ಎದುರಿಸಿದ ಅತ್ಯಂತ ದುಃಖಕರ ಕ್ಷಣಗಳಲ್ಲಿ ಈ ಪ್ರಯಾಣ ಒಂದು ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿಯೇ ಕಿರುಕುಳ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದೀಗ ಸಾರ್ವಜನಿಕ ಸಾರಿಗೆಯಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಜುಲೈ 3 ರಂದು ಯುವತಿಯೂ ಬಿಹಾರದ ಸಿವಾನ್ ನಿಂದ ಪಾಟ್ಲಿಪುತ್ರಕ್ಕೆ ಪ್ರಯಾಣ ಮಾಡುತ್ತಿದ್ದರು. ಪ್ರಯಾಣದ ಸಮಯದಲ್ಲಿ ಯುವತಿಯೂ ಮೇಲಿನ ಬರ್ತ್‌ಗೆ ಹತ್ತಿ ನಿದ್ರೆಗೆ ಜಾರಿದ್ದರು. ಆದರೆ ರೈಲು ಛಪ್ರಾ ತಲುಪಿದಾಗ, ಹಲವಾರು ವೃದ್ಧ ಪುರುಷರು ರೈಲು ಹತ್ತಿದ್ದು ಕೆಳಗಿನ ಆಸನಗಳಲ್ಲಿ ಕುಳಿತಿದ್ದರು.
ವಿಡಿಯೋ ನೋಡಿ:
ಅವಳು ವಿಶ್ರಾಂತಿ ಪಡೆಯುತ್ತಿದ್ದಾಗ ಒಬ್ಬ ವೃದ್ಧ ತನ್ನ ಕಡೆಗೆ ಪದೇ ಪದೇ ಕೈ ಚಾಚಿ ಅವಳನ್ನು ಮುಟ್ಟಿದ್ದಾನೆ. ತಾನು ಅವರನ್ನು 'ಅಂಕಲ್, ದಯವಿಟ್ಟು ನಿಮ್ಮ ಕೈಯನ್ನು ಕೆಳಗೆ ಇರಿಸಿ' ಎಂದು ವಿನಮ್ರವಾಗಿ ಕೇಳಿದೆ, ಆದರೆ ಆತ ನಿರ್ಲಕ್ಷಿಸಿದ್ದೂ ವಿನಂತಿಸಿದರೂ ಆತ ಕೇಳದೆ ಕಿರುಕುಳ ಮುಂದುವರಿಸಿದ್ದಾನೆ ಎಂದರು.
ಆ ವ್ಯಕ್ತಿಯಿಂದ ದೂರ ಸರಿಯಲು ಯುವತಿ ಯತ್ನಿಸಿದಾಗ, ಅಲ್ಲಿಯೇ ಇದ್ದ ಮತ್ತೊಬ್ಬ ವೃದ್ಧನೂ ಆಕೆಯನ್ನು ಪದೇ ಪದೇ ಮುಟ್ಟಿದ್ದಾನೆ. ಇದರಿಂದ ಆತಂಕಕ್ಕೆ ಒಳಗಾಗಿ ಯುವತಿ ಆ ಬೋಗಿಯನ್ನು ಬಿಟ್ಟು ಹೊರನಡೆದಿದ್ದಾರೆ. ಇನ್ನೊಂದು ಪ್ರಯಾಣದಲ್ಲಿ ಜನರಲ್ ಬೋಗಿಯಲ್ಲಿ ಜನದಟ್ಟಣೆ ಹೆಚ್ಚಿದ್ದರಿಂದ ಆಕೆ ಎಸಿ ಬೋಗಿಯ ಪ್ರವೇಶ ದ್ವಾರದ ಬಳಿ ಕುಳಿತಿದ್ದಾರೆ. ಆದರೆ ಅಲ್ಲಿಗೆ ಬಂದ ಅಪರಿಚಿತ ಯುವಕನೊಬ್ಬ ತನಗೆ ಪರೀಕ್ಷಾ ಕೇಂದ್ರದೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಿಕೊಂಡು ಹಣದ ಆಮಿಷವೊಡ್ಡಿ ಆಕೆಯ ಫೋನ್ ನಂಬರ್ ಕೇಳಿ ಪೀಡಿಸಿದ್ದಾನೆ. ಆಕೆ ನಿರಾಕರಿಸಿದರೂ ನಂಬರ್ ಗಾಗಿ ಒತ್ತಾಯಿಸಿದ್ದಾನೆ. ನಂತರ ಆತ ದಿಘ್ವಾರಾ ನಿಲ್ದಾಣದಲ್ಲಿ ಇಳಿದ ಬಳಿಕವಷ್ಟೇ ಯುವತಿ ಬಚಾವ್ ಆಗಿದ್ದಾರೆ.
ರೈಲುಗಳಲ್ಲಿ ಪ್ರಯಾಣಿಸುವಾಗ "ಹುಡುಗಿಯರು ಸುರಕ್ಷಿತರಾಗಿದ್ದಾರೆಯೇ? ಇಂದಿನ ಕೆಲವು ಪುರುಷರು ಯಾವ ರೀತಿಯ ಮನಸ್ಥಿತಿಯನ್ನು ಹೊಂದಿದ್ದಾರೆ?" ಎಂದು ಬರೆದು ಯುವತಿ ಈ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳಿ. ನೀವು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಅವರು ಬೇರೆ ಯವರೊಂದಿಗೆ ಮತ್ತೆ ಪ್ರಯತ್ನಿಸುತ್ತಾರೆ. ಈ ರೀತಿಯ ಜನರು ಎಲ್ಲೆಡೆ ಇದ್ದಾರೆ ಎಂದು ಕಿಡಿಕಾರಿದ್ದಾರೆ.