ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral News: 'ಛಾವಾ' ಸಿನಿಮಾ ನೋಡಲು ಸಂಭಾಜಿ ವೇಷದಲ್ಲಿ ಕುದುರೆ ಏರಿ ಬಂದ ಅಭಿಮಾನಿ: ವಿಡಿಯೊ ಇಲ್ಲಿದೆ

ಬಹು ನಿರೀಕ್ಷಿತ ಸಿನಿಮಾ 'ಛಾವಾ' ವಿಶ್ವದಾದ್ಯಂತ ರಿಲೀಸ್ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಚರಿತ್ರೆಯನ್ನು ಈ ಸಿನಿಮಾ ಮೂಲಕ ಹೇಳಲಾಗಿದ್ದು, ಪ್ರೇಕ್ಷಕರು ಭಾವುಕರಾಗಿದ್ದಾರೆ. ಈ ಮಧ್ಯೆ ವಿಕಿ ಕೌಶಲ್‌ ಅಭಿಮಾನಿಯೊಬ್ಬ ʼಛಾವಾʼ ಸಿನಿಮಾ ನೋಡಲು ಸಂಭಾಜಿ ಮಹಾರಾಜರ ವೇಷ ಧರಿಸಿ ಕುದುರೆ ಮೇಲೆ ಚಿತ್ರಮಂದಿರದೊಳಗೆ ಬಂದಿದ್ದಾನೆ. ಇದೀಗ ಆ ಸುದ್ದಿ ಸಾಕಷ್ಟು ವೈರಲ್‌ ಆಗಿದೆ.

ʼಛಾವಾʼ ಸಿನಿಮಾ ನೋಡಲು ಕುದುರೆ ಏರಿ ಬಂದ ಅಭಿಮಾನಿ

ಛತ್ರಪತಿ ಸಂಭಾಜಿ ಮಹಾರಾಜರ ವೇಷದಲ್ಲಿ ಚಿತ್ರಮಂದಿರದೊಳಗೆ ಕುದುರೆ ಮೇಲೆ ಬಂದ ವ್ಯಕ್ತಿ

Profile Deekshith Nair Feb 18, 2025 2:06 PM

ಮುಂಬೈ: ವಿಕಿ ಕೌಶಲ್‌ ಅವರ ಬಹು ನಿರೀಕ್ಷಿತ ಸಿನಿಮಾ 'ಛಾವಾ' (Chhaava) ವಿಶ್ವದಾದ್ಯಂತ ರಿಲೀಸ್ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಛತ್ರಪತಿ ಸಂಭಾಜಿ ಮಹಾರಾಜ್(Sambhaji Maharaj) ಅವರ ಚರಿತ್ರೆಯನ್ನು ಈ ಸಿನಿಮಾ ಮೂಲಕ ಹೇಳಲಾಗಿದ್ದು, ಪ್ರೇಕ್ಷಕರು ಸಿನಿಮಾ ನೋಡಿ ಸಾಕಷ್ಟು ಭಾವುಕರಾಗಿದ್ದಾರೆ. ಸಿನಿಮಾದ ಕಥಾ ಹಂದರ, ಸಂಭಾಷಣೆ, ಸಾಹಿತ್ಯ ಮತ್ತು ಸಂಗೀತವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಈ ಮಧ್ಯೆ ಅಭಿಮಾನಿಯೊಬ್ಬ ʼಛಾವಾʼ ಸಿನಿಮಾ ನೋಡಲು ಸಂಭಾಜಿ ಮಹಾರಾಜರ ವೇಷ ಧರಿಸಿ ಕುದುರೆ ಮೇಲೆ ಚಿತ್ರಮಂದಿರದೊಳಗೆ ಬಂದಿದ್ದಾನೆ. ಇದೀಗ ಆ ಸುದ್ದಿ ಸಾಕಷ್ಟು ವೈರಲ್‌ (Viral News) ಆಗಿದೆ.

ಲಕ್ಷ್ಮಣ್ ಉಟೇಕರ್ ನಿರ್ದೇಶನದ ʼಛಾವಾʼ ಚಿತ್ರವು ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನ ಚರಿತ್ರೆಯಾಗಿದ್ದು, ವಿಕ್ಕಿ ಸಂಭಾಜಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದ್ದು, ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ ನಾಗ್ಪುರದ ಅಭಿಮಾನಿಯೊಬ್ಬ ಮರಾಠ ದೊರೆಯಂತೆ ವೇಷ ಧರಿಸಿ ಕುದುರೆಯ ಮೇಲೆ ಥಿಯೇಟರ್‌ಗೆ ಬಂದಿದ್ದಾರೆ. ಪರದೆ ಮೇಲೆ ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದಾನೆ. ಒಂದಷ್ಟು ಮಂದಿ ಡೋಲ್‌ ನುಡಿಸುತ್ತಾ ಅವನನ್ನು ಸ್ವಾಗತಿಸಿದ್ದಾರೆ. ಇದೀಗ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ʼಛಾವಾʼ ಚಿತ್ರದಲ್ಲಿ ವಿಕ್ಕಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿದರೆ, ರಶ್ಮಿಕಾ ಮಂದಣ್ಣ ಅವರ ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷಯ್ ಖನ್ನಾ ಔರಂಗಜೇಬ್ ಪಾತ್ರದಲ್ಲಿ ಮತ್ತು ಡಯಾನಾ ಪೆಂಟಿ ಅವರ ಮಗಳು ಜಿನತ್-ಉನ್-ನಿಸಾ ಬೇಗಂ ಪಾತ್ರದ ಮೂಲಕ ಪರದೆಯ ಮೂಲಕ ಕಾಣಿಸಿಕೊಂಡಿದ್ದಾರೆ. ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಈ ಚಿತ್ರವು 140 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ:Tesla: ಮೋದಿ- ಮಸ್ಕ್‌ ಭೇಟಿಯ ಬೆನ್ನಲ್ಲೇ ಭಾರತದಲ್ಲಿ ಟೆಸ್ಲಾ ನೇಮಕಾತಿ ಆರಂಭ

3 ದಿನಗಳಲ್ಲೇ 100 ಕೋಟಿ ರೂ. ಕ್ಲಬ್‌ ಸೇರಿದ ʼಛಾವಾʼ

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಲಕ್ಕಿ ಚಾರ್ಮ್‌ ಎನಿಸಿಕೊಂಡಿದ್ದಾರೆ. ಕಳೆದ ವರ್ಷ 'ಪುಷ್ಪ 2' ಚಿತ್ರದ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಅವರು ಇದೀಗ ಬಾಲಿವುಡ್‌ನಲ್ಲೂ ತಮ್ಮ ಜೈತ್ರಯಾತ್ರೆಯನ್ನು ಮುಂದುವರಿಸಿದ್ದಾರೆ. ಫೆ. 14ರಂದು ರಿಲೀಸ್‌ ಆಗಿರುವ ಐತಿಹಾಸಿಕ ಚಿತ್ರ ʼಛಾವಾʼ 3 ದಿನಗಳಲ್ಲೇ 100 ಕೋಟಿ ರೂ. ಕ್ಲಬ್‌ ಸೇರಿದೆ. ಆ ಮೂಲಕ ಈ ವರ್ಷದ ಬಾಲಿವುಡ್‌ನ ಮೊದಲ ಸೂಪರ್‌ ಹಿಟ್‌ ಚಿತ್ರ ಎನಿಸಿಕೊಂಡಿದೆ. ಸಂಭಾಜಿ ಮಹಾರಾಜರ ಜೀವನದ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಅದ್ಧೂರಿ ಮೇಕಿಂಗ್‌ನಿಂದಲೇ ಗಮನ ಸೆಳೆಯುತ್ತಿದೆ.

4 ದಿನಗಳ ಕಲೆಕ್ಷನ್‌ ಎಷ್ಟು?

ರಿಲೀಸ್‌ ಆದ 4 ದಿನಗಳಲ್ಲಿ ʼಛಾವಾʼ ಬರೋಬ್ಬರಿ 145 ಕೋಟಿ ರೂ. ಗಳಿಸಿದೆ. ಮೊದಲ ಭಾನುವಾರ ಚಿತ್ರದ ಕಲೆಕ್ಷನ್‌ ಬರೋಬ್ಬರಿ 50 ಕೋಟಿ ರೂ. ರಿಲೀಸ್‌ ಆದ ಮೊದಲ ದಿನ 33 ಕೋಟಿ ರೂ. ಬಾಚಿಕೊಂಡಿದ್ದ 'ಛಾವಾ' ಚಿತ್ರದ ಕಲೆಕ್ಷನ್‌ 2ನೇ ದಿನ ಮತ್ತಷ್ಟು ಹೆಚ್ಚಾಗಿತ್ತು. ಶನಿವಾರ ಬೊಕ್ಕಸಕ್ಕೆ ಹರಿದು ಬಂದಿದ್ದು ಬರೋಬ್ಬರಿ 37 ಕೋಟಿ ರೂ. ಇನ್ನು 3ನೇ ದಿನವಾದ ಭಾನುವಾರ 49.63 ಕೋಟಿ ರೂ. ಗಳಿಸಿದೆ. ಇನ್ನು ಸೋಮವಾರ 24 ಕೋಟಿ ರೂ. ಕಲೆಕ್ಷನ್‌ ಮಾಡಿದೆ.