ʼಟ್ವಿಂಕಲ್- ಟ್ವಿಂಕಲ್ʼ ಕಲಿಕೆಗೆ 2.5 ಲಕ್ಷ ರುಪಾಯಿ ಶುಲ್ಕ: ದುಬಾರಿ ಮೊತ್ತ ಪಡೆಯುವ ಖಾಸಗಿ ಶಾಲೆಗಳ ವಿರುದ್ಧಆಕ್ರೋಶ
Viral News: ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಬಗ್ಗೆ ದೂರುಗಳು ಕೂಡ ಕೇಳಿ ಬರುತ್ತಿವೆ. ಈ ನಡುವೆ ಪೋಷಕರು ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕಿಂಡರ್‌ಗಾರ್ಟನ್‌ಗೆ 2.5 ಲಕ್ಷ ರುಪಾಯಿಗಿಂತ ಹೆಚ್ಚು ಶುಲ್ಕವನ್ನು ವಿಧಿಸಿರುವ ಬಗ್ಗೆ ಸೋಷಿಯಲ್ ಮೀಡಿಯಾದ ಪೋಸ್ಟ್ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಏ. 21: ಇತ್ತೀಚೆಗೆ ಪೋಷಕರು ಮಕ್ಕಳ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಮಧ್ಯಮ ವರ್ಗದವರು ಕೂಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಹೆಚ್ಚಿನ ಹಣವನ್ನು ವ್ಯಯಿಸುತ್ತಿದ್ದಾರೆ. ಅದರಲ್ಲೂ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಈ ನಡುವೆ ಪೋಷಕರು ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಮಕ್ಕಳಿಗೆ ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕಿಂಡರ್‌ಗಾರ್ಟನ್‌ಗೆ 2.5 ಲಕ್ಷ ರುಪಾಯಿಗಿಂತ ಹೆಚ್ಚು ಶುಲ್ಕವನ್ನು ವಿಧಿಸಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ (Viral News) ಆಗಿದೆ.
ವರ್ಷಕ್ಕೆ 2.5 ಲಕ್ಷ ರುಪಾಯಿಗಿಂತ ಹೆಚ್ಚಿನ ಮೊತ್ತವನ್ನು ಮಕ್ಕಳ ಕಿಂಡರ್‌ಗಾರ್ಟನ್ ಶುಲ್ಕ ಕಟ್ಟಿರುವ ಬಗ್ಗೆ ಆನ್‌ಲೈನ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಲವರು ಭಾರತದಲ್ಲಿ ಆರಂಭಿಕ ಶಿಕ್ಷಣದ ವೆಚ್ಚವನ್ನು ಪ್ರಶ್ನಿಸಿದ್ದಾರೆ. ಕೇವಲ ಎಲ್‌ಕೆಜಿ ಅಥವಾ ಯುಕೆಜಿಗಾಗಿ ಒಂದು ವರ್ಷಕ್ಕೆ 2.5 ಲಕ್ಷ ರುಪಾಯಿಗಿಂತ ಅಧಿಕ ಶುಲ್ಕದ ಪಟ್ಟಿಯೊಂದು ಕಂಡು ಬಂದಿದೆ.
2.5 lakh fees for learning Twinkle Twinkle 😂🤣 pic.twitter.com/yEucagf88C
— Sakshi (@Sakshi50038) April 19, 2026
ಸಾಕ್ಷಿ ಎಂಬ ಬಳಕೆದಾರರು ಪೋಸ್ಟ್ ಹಂಚಿಕೊಂಡಿದ್ದು ಶಾಲೆಯ ಶುಲ್ಕದ ವಿವರವನ್ನು ಲಗತ್ತಿಸಿ "ಟ್ವಿಂಕಲ್ ಟ್ವಿಂಕಲ್ ಕಲಿಯಲು 2.5 ಲಕ್ಷ ರುಪಾಯಿ ಶುಲ್ಕ" ಎಂಬ ಕ್ಯಾಪ್ಶನ್‌ನೊಂದಿಗೆ ಶೇರ್ ಮಾಡಿದ್ದಾರೆ. ಅದರಲ್ಲಿ ಪ್ರವೇಶ ಶುಲ್ಕ15,000 ರುಪಾಯಿ, ವಾರ್ಷಿಕ ಶಾಲಾ ಶುಲ್ಕ 2,24,718 ರುಪಾಯಿ, ಸೆಕ್ಯೂರಿಟಿ ಡೆಪಾಸಿಟ್ 33,000 ರುಪಾಯಿ ಅಂದಾಜು 2.72 ಲಕ್ಷ ರುಪಾಯಿ ಎಂದು ಬರೆಯಲಾಗಿದೆ.
ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಆದಾಗ್ಯೂ, ಇದು ಸಾರಿಗೆ, ಶೂ, ಸಾಕ್ಸ್, ಕೆಫೆಟೇರಿಯಾ ಶುಲ್ಕಗಳು ಮತ್ತು ಇತರ ಇತರ ವೆಚ್ಚಗಳನ್ನು ಒಳಗೊಂಡಿಲ್ಲ. ಅಂದರೆ ಒಟ್ಟಾರೆ ವೆಚ್ಚವು ಇನ್ನೂ ಹೆಚ್ಚಿರಬಹುದು. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಶಾಲೆಗಳಲ್ಲಿ ಇಂತಹ ಶುಲ್ಕ ರಚನೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ ಎಂದು ಅನೇಕ ಬಳಕೆದಾರರು ಬರೆದಿದ್ದಾರೆ. ನೆಟ್ಟಿಗರೊಬ್ಬರು ಭಾರತೀಯ ಪೋಷಕರು ಮೂರ್ಖರು. ಅವರು ಕುರುಡಾಗಿ ಪಾವತಿಸುತ್ತಾರೆ ಎಂದಿದ್ದಾರೆ.