ಶಾಲಾ ಶೌಚಾಲಯದಲ್ಲೇ ವಿದ್ಯಾರ್ಥಿನಿಯರ ಕಿತ್ತಾಟ: ಕಪಾಳ ಮೋಕ್ಷ ಮಾಡಿದ ವಿಡಿಯೊ ವೈರಲ್!
Viral Video: ಇತ್ತೀಚಿನ ದಿನದಲ್ಲಿ ಮಕ್ಕಳ ವರ್ತನೆಗಳು ದಾರಿ ತಪ್ಪುತ್ತಿವೆ. ಶಿಕ್ಷಕರ ಮೇಲೆ ಹಲ್ಲೆ ನಡೆಸುವ ವಿದ್ಯಾರ್ಥಿಗಳು, ಪೋಷಕರ ಮಾತು ಕೇಳದ ಮಕ್ಕಳು ಹೀಗೆ ಅನೇಕ ಘಟನೆಗಳು ಸುತ್ತ ಮುತ್ತಲು ನಡೆಯುತ್ತಿರುತ್ತವೆ. ಇದೀಗ ಶಾಲೆಯ ಶೌಚಾಲಯದೊಳಗೆ ಇಬ್ಬರು ಬಾಲಕಿಯರ ನಡುವೆ ತೀವ್ರ ವಾಗ್ವಾದ ಉಂಟಾಗಿದ್ದು ಪರಸ್ಪರ ಕೆನ್ನೆಗೆ ಬಾರಿಸಿಕೊಂಡಿರುವ ವಿಡಿಯೊ ವೈರಲ್ ಆಗಿದೆ. ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲಾ ಶೌಚಾಲಯದಲ್ಲೇ ವಿದ್ಯಾರ್ಥಿನಿಯರ ಕಿತ್ತಾಟ -
ನವದೆಹಲಿ,ಏ.23: ಮಕ್ಕಳಿಗೆ ಕಲಿಕೆಯಲ್ಲಿ ಮಾರ್ಕ್ಸ್ ಎಷ್ಟು ಪ್ರಾಮುಖ್ಯವೋ ಮಕ್ಕಳ ವರ್ತನೆ, ಶಿಸ್ತು ಅಷ್ಟೇ ಮುಖ್ಯವಾಗುತ್ತದೆ. ಇತ್ತೀಚಿನ ದಿನದಲ್ಲಿ ಮಕ್ಕಳ ವರ್ತನೆಗಳು ದಾರಿ ತಪ್ಪುತ್ತಿವೆ. ಶಿಕ್ಷಕರ ಮೇಲೆ ಹಲ್ಲೆ ನಡೆಸುವ ವಿದ್ಯಾರ್ಥಿಗಳು, ಪೋಷಕರ ಮಾತು ಕೇಳದ ಮಕ್ಕಳು ಹೀಗೆ ಅನೇಕ ಘಟನೆಗಳು ಸುತ್ತ ಮುತ್ತಲು ನಡೆಯುತ್ತಿರುತ್ತವೆ. ಇದೀಗ ಶಾಲೆಯ ಶೌಚಾಲಯದೊಳಗೆ ಇಬ್ಬರು ಬಾಲಕಿಯರ ನಡುವೆ ತೀವ್ರ ವಾಗ್ವಾದ ಉಂಟಾಗಿದ್ದು ಪರಸ್ಪರ ಕೆನ್ನೆಗೆ ಬಾರಿಸಿಕೊಂಡಿರುವ ವಿಡಿಯೊ ವೈರಲ್ (Viral Video) ಆಗಿದೆ. ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶೌಚಾಲಯದೊಳಗೆ ಇಬ್ಬರು ಶಾಲಾ ಬಾಲಕಿಯರ ನಡುವೆ ಮೊದಲಿಗೆ ಮಾತಿನ ಚಕಮಕಿ ನಡೆದಿದ್ದು ಇದು ತಾರಕಕ್ಕೆ ಏರಿದೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ನಡವಳಿಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಇಬ್ಬರು ವಿದ್ಯಾರ್ಥಿನಿಯರು ಶೌಚಾಲಯ ಒಳಗೆ ಜಗಳ ಮಾಡಿಕೊಂಡಿದ್ದು ಅಸಭ್ಯವಾಗಿ ವರ್ತಿಸಿದ್ದಾರೆ. ಇಂದು ಮಕ್ಕಳಿಗೆ 90% ಅಂಕಗಳಿಸಲು ಉತ್ತೇಜಿಸುವುದು ಅಲ್ಲ. ಸರಿಯಾದ ಶಿಸ್ತು, ಪರಸ್ಪರ ಗೌರವ ನೀಡುವ ಮೌಲ್ಯವನ್ನು ಕಲಿಸಿಕೊಡಬೇಕು ಎಂದು ವಿಡಿಯೊ ನೋಡಿದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋ ನೋಡಿ:
Old-Gold Kalesh b/w Two Girls inside College: pic.twitter.com/rBLLfGqm7w
— Ghar Ke Kalesh (@gharkekalesh) April 22, 2026
ಈ ಘಟನೆಯು ನೀಲಿ ಪೋಲೋ ಟಿ-ಶರ್ಟ್ ಧರಿಸಿದ ಹುಡುಗಿ ಇನ್ನೊಬ್ಬ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ನಿನ್ನ ಹೆಸರೇನು? ಎಂದು ಕೇಳಿದ್ದು ಇನ್ನೊಬ್ಬಳು ಅವಳ ಪ್ರತಿಕ್ರಿಯೆಯೂ ಸಹ ಸಾಕಷ್ಟು ಆಕ್ರಮಣಕಾರಿಯಾಗಿದೆ, "ತೇರೆ ಬಾಪ್ ಕೋ ಪತಾ ಹೈ." ನಿನ್ನ ತಂದೆಗೆ ಗೊತ್ತು ಎಂದು ಹೇಳುತ್ತಾಳೆ. ಇದರಿಂದ ಕೆರಳಿದ ವಿದ್ಯಾರ್ಥಿ ಆಕೆಯ ಕೆನ್ನೆಗೆ ಬಾರಿಸಿದ್ದಾಳೆ.ಈ ಹೇಳಿಕೆಯು ತಕ್ಷಣವೇ ಉದ್ವಿಗ್ನತೆಯನ್ನು ಹೆಚ್ಚಿಸುವಂತೆ ಕಾಣುತ್ತದೆ.
Viral Video: ರೋಲ್ಸ್ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ ಇನ್ಫ್ಲುಯೆನ್ಸರ್
ವಿದ್ಯಾರ್ಥಿನಿಯರು ಪರಸ್ಪರರ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲು ಶುರು ಮಾಡುತ್ತಾರೆ. ಸೆಕೆಂಡುಗಳಲ್ಲಿ, ಪರಿಸ್ಥಿತಿ ದೈಹಿಕವಾಗಿ ಬದಲಾಗುತ್ತದೆ. ಜಗಳ ಮುಂದುವರೆದು ನೀನು ಪತ್ಪರ್ಗಂಜ್‌ನಲ್ಲಿ ವಾಸಿಸುತ್ತಿದ್ದಿ..ಸರಿ? ನಿಮ್ಮ ಸಹೋದರ ಯಾವಾಗಲೂ ಹೊರಗೆ ಸುತ್ತುತ್ತಾನೆ ಅಲ್ಲವೇ? ಎಂದಿದ್ದಾಳೆ. ಅಣ್ಣನ ಬಗ್ಗೆ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಹುಡುಗಿ, ಮತ್ತೊಮ್ಮೆ ಕೆನ್ನೆಗೆ ಬಾರಿಸಿದ್ದಾಳೆ.
ಈ ವಿವಾದವು, ಇಬ್ಬರೂ ಪರಸ್ಪರರ ಕುಟುಂಬಗಳನ್ನು ಗುರಿಯಾಗಿಸಿಕೊಳ್ಳುತ್ತಲೇ ಇದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವಾರು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಜೋಕ್ ಮಾಡಿ ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಈಗಿನ ಮಕ್ಕಳಿಗೆ ಶಿಸ್ತಿನ ಪಾಠ ಮುಖ್ಯ ಎಂದಿದ್ದಾರೆ. ಮತ್ತೊಬ್ಬರು ಇಂತಹ ಮಕ್ಕಳ ಬಗ್ಗೆ ಪೋಷಕರು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಬರೆದಿದ್ದಾರೆ.