ಎರಡು ದಿನಗಳಲ್ಲಿ 2 ಅತ್ಯಾಚಾರ, ಒಂದು ಕೊಲೆ; ಮಾಜಿ IRS ಅಧಿಕಾರಿ ಮಗಳನ್ನು ಕೊಂದ ಮನೆಕೆಲಸದವ!
Crime News: 22 ವರ್ಷದ ಎಂಜಿನಿಯರಿಂಗ್ ಪದವೀಧರೆ ಮತ್ತು ಯುಪಿಎಸ್‌ಸಿ ಆಕಾಂಕ್ಷಿಯೊಬ್ಬರು ಆಗ್ನೇಯ ದೆಹಲಿಯ ಕೈಲಾಶ್ ಪೂರ್ವದಲ್ಲಿರುವ ತಮ್ಮ ಮನೆಯಲ್ಲಿ ಕೊಲೆಯಾಗಿ ಪತ್ತೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವಾರಕಾ ಪ್ರದೇಶದ ಹೋಟೆಲ್ ಒಂದರಿಂದ 19 ವರ್ಷದ ಮಾಜಿ ಮನೆಕೆಲಸದಾತ ರಾಹುಲ್ ಎಂಬಾತನನ್ನು ಬಂಧಿಸಲಾಗಿದೆ.
ಕೊಲೆ ಆರೋಪಿ ರಾಹುಲ್ -
ನವದೆಹಲಿ, ಏ.23: 22 ವರ್ಷದ ಎಂಜಿನಿಯರಿಂಗ್ ಪದವೀಧರೆ ಮತ್ತು ಯುಪಿಎಸ್‌ಸಿ ಆಕಾಂಕ್ಷಿಯೊಬ್ಬರು ಆಗ್ನೇಯ ದೆಹಲಿಯ (Delhi) ಕೈಲಾಶ್ ಪೂರ್ವದಲ್ಲಿರುವ ತಮ್ಮ ಮನೆಯಲ್ಲಿ ಕೊಲೆಯಾಗಿ (murder) ಪತ್ತೆಯಾಗಿದ್ದಾರೆ. ಭಾರತೀಯ ಕಂದಾಯ ಸೇವಾ ಅಧಿಕಾರಿಯ ಪುತ್ರಿಯಾಗಿರುವ ಯುವತಿಯ ಮೃತದೇಹವನ್ನು ಆಕೆಯ ಕುಟುಂಬ ಪತ್ತೆ ಮಾಡಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೊಬೈಲ್ ಫೋನ್ (Crime News) ಚಾರ್ಜರ್ ಕೇಬಲ್‌ನಿಂದ ಕತ್ತು ಹಿಸುಕುವ ಮೊದಲು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವಾರಕಾ ಪ್ರದೇಶದ ಹೋಟೆಲ್ ಒಂದರಿಂದ 19 ವರ್ಷದ ಮಾಜಿ ಮನೆಕೆಲಸದಾತ ರಾಹುಲ್ ಎಂಬಾತನನ್ನು ಬಂಧಿಸಲಾಗಿದೆ. ಇತರ ಕೆಲಸಗಾರರಿಂದ ಹಣವನ್ನು ಸಾಲ ಪಡೆದು ಅದನ್ನು ಎಂದಿಗೂ ಮರುಪಾವತಿಸದ ಕಾರಣ ಅವನನ್ನು ಒಂದು ತಿಂಗಳ ಹಿಂದೆ ಮನೆ ಕೆಲಸದಿಂದ ವಜಾಗೊಳಿಸಲಾಗಿತ್ತು. ಘಟನೆ ವರದಿಯಾದ ನಂತರ ಪೊಲೀಸರು ಅವನ ಚಲನವಲನಗಳನ್ನು ಪತ್ತೆಹಚ್ಚಿ, ಸ್ಥಳೀಯ ಹೋಟೆಲ್‌ನಲ್ಲಿ ಬಂಧಿಸಲಾಯಿತು.
ಇಲ್ಲಿದೆ ಆರೋಪಿ ನಡೆದುಕೊಂಡು ಹೋಗುತ್ತಿರುವ ದೃಶ್ಯದ ವಿಡಿಯೊ:
CCTV Footage Of Suspect | Month After Being Fired, Help Rapes, Kills IRS Officer's Daughter In Delhi https://t.co/0ZzThTWZ7R pic.twitter.com/JIakc80ZPm
— NDTV (@ndtv) April 22, 2026
ಘಟನೆಯ ತನಿಖೆ ನಡೆಸುತ್ತಿರುವಾಗ, ಆರೋಪಿಯ ಬಗ್ಗೆ ಪೊಲೀಸರಿಗೆ ಕೆಲ ವಿವರಗಳು ಸಿಕ್ಕವು. ದೆಹಲಿಯಲ್ಲಿ ಅಪರಾಧ ಮಾಡುವ ಕೆಲವೇ ಗಂಟೆಗಳ ಮೊದಲು, ರಾಹುಲ್ ಅಲ್ವಾರ್‌ನ ತನ್ನ ಹಳ್ಳಿಯಲ್ಲಿ ಇನ್ನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
Body Found: ದೇವನಹಳ್ಳಿಯ ಐಫೋನ್ ಫ್ಯಾಕ್ಟರಿ ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ
ಅಲ್ವಾರ್‌ನ ಸಂತ್ರಸ್ತ ಮಹಿಳೆ ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ. ರಾಹುಲ್ ಸಂತ್ರಸ್ತಳ ಪತಿಯ ಸ್ನೇಹಿತನಾಗಿದ್ದ. ಅವರು ಆಗಾಗ ಒಟ್ಟಿಗೆ ಲುಡೋ ಆಡುತ್ತಿದ್ದರು ಎಂದು ವರದಿಯಾಗಿದೆ. ಈ ಕುಟುಂಬವು ಈ ಹಿಂದೆ ಸಂತ್ರಸ್ತೆಯ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿತ್ತು. ಎರಡೂ ಕುಟುಂಬಗಳ ನಡುವೆ ಈಗಾಗಲೇ ಉತ್ತಮ ಬಾಂಧವ್ಯವಿತ್ತು.
ಅಲ್ವಾರ್‌ನಲ್ಲಿ ನಡೆದ ಲೈಂಗಿಕ ದೌರ್ಜನ್ಯದ ನಂತರ, ಆರೋಪಿ ರಾಹುಲ್ ದೆಹಲಿಗೆ ತೆರಳಿದ್ದಾನೆ. ಅಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ್ದಾನೆ. ಕೊಲೆಯ ಹಿಂದಿನ ಉದ್ದೇಶ ಇನ್ನೂ ತನಿಖೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಸದಿಂದ ವಜಾಗೊಳಿಸಿದ ನಂತರ ಕೋಪಗೊಂಡು ಈ ಕೃತ್ಯ ಎಸಗಿರಬಹುದೇ ಎಂದು ಪೊಲೀಸರು ಶಂಕಿಸಿದ್ದು, ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಇನ್ನು, 24 ಗಂಟೆಗಳ ಅವಧಿಯಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ 19 ವರ್ಷದ ಮಾಜಿ ಮನೆಕೆಲಸದಾತ ರಾಹುಲ್ ಮೀನಾ, ತನ್ನ ಅಪರಾಧಗಳನ್ನು ಮುಂಚಿತವಾಗಿ ಯೋಜಿಸಿದ್ದಂತೆ ತೋರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜಸ್ಥಾನದ ಅಲ್ವಾರ್‌ನಲ್ಲಿ ಸ್ನೇಹಿತನ ಹೆಂಡತಿ ಮೇಲೆ ಅತ್ಯಾಚಾರ ಎಸಗಿದ ಆತ ದೆಹಲಿಗೆ ತೆರಳಿದ್ದಾನೆ. ಅಲ್ಲಿ 22 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಬೆಳಗ್ಗೆ 6.39ಕ್ಕೆ ಮನೆಗೆ ಪ್ರವೇಶಿಸಿದ ಆರೋಪಿಯು ಬೆಳಗ್ಗೆ 7.20ಕ್ಕೆ ಹೊರಟುಹೋದ. 41 ನಿಮಿಷಗಳ ಕಾಲ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಮೊಬೈಲ್ ಫೋನ್ ಚಾರ್ಜರ್ ಕೇಬಲ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.