ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ಉದ್ಯಮಿಯಿಂದ ಪರಿಸರ ಪ್ರೇಮಿ ಬಿಟ್ಟು ತಬಾಹಿಗೆ ಆರ್ಥಿಕ ನೆರವು: ನೆಟ್ಟಿಗರ ಶ್ಲಾಘನೆ!

Viral News: ದೇಶಾದ್ಯಂತ ಜಲಮೂಲಗಳನ್ನು ಸ್ವಚ್ಛ ಗೊಳಿಸುವ ಕಾಯಕದಲ್ಲಿ ಬಿಟ್ಟು ತಬಾಹಿ ಎನ್ನುವ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಮಧ್ಯ ಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ  ತಮ್ಮ ಸ್ನೇಹಿತರೊಂದಿಗೆ ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಲು ಇಳಿದ ಅವರು, ಕಾಲ ಕ್ರಮೇಣ ದೇಶಾದ್ಯಂತ ವಿಸ್ತರಣೆ ಮಾಡಿದ್ದಾರೆ

ಪರಿಸರ ಕಾಯಕದಲ್ಲಿರುವ ಬಿಟ್ಟು ತಬಾಹಿಗೆ ಬೆಂಗಳೂರು ಉದ್ಯಮಿಯಿಂದ ನೆರವು

ಪರಿಸರ ಕಾಯಕದಲ್ಲಿರುವ ಬಿಟ್ಟು ತಬಾಹಿಗೆ ಬೆಂಗಳೂರು ಉದ್ಯಮಿಯಿಂದ ಆರ್ಥಿಕ ನೆರವು -

Profile
Pushpa Kumari Sep 27, 2026 3:32 PM

ಬೆಂಗಳೂರು,ಸೆ.27: ದೇಶಾದ್ಯಂತ ಜಲಮೂಲಗಳನ್ನು ಸ್ವಚ್ಛ ಗೊಳಿಸುವ ಕಾಯಕದಲ್ಲಿ ಬಿಟ್ಟು ತಬಾಹಿ (Bittu Tabahi) ಎನ್ನುವ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಮಧ್ಯ ಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ  ತಮ್ಮ ಸ್ನೇಹಿತರೊಂದಿಗೆ ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಲು ಇಳಿದ ಅವರು, ಕಾಲ ಕ್ರಮೇಣ ದೇಶಾದ್ಯಂತ ವಿಸ್ತರಣೆ ಮಾಡಿದ್ದಾರೆ. ಇವರ ಸ್ವಚ್ಛತಾ ಅಭಿಯಾನಕ್ಕೆ ಇದೀಗ ಬೆಂಗಳೂರಿನ ಉದ್ಯಮಿ ಸಿದ್ಧಾರ್ಥ್ ಡಿಯಾಲಾನಿ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.

ಬಿಟ್ಟು ತಬಾಹಿಯ ಪರಿಸರ ಕಾಳಜಿ ನೋಡಿ ಫಿದಾ ಆದ ಅವರು  ವೈಯಕ್ತಿಕ ಹಣಕಾಸಿನ ನೆರವು ನೀಡುವುದಾಗಿ ಹೇಳಿದ್ದಾರೆ.ಈ ಹಿಂದೆ ಇವರ ಪ್ರಯತ್ನಕ್ಕೆ 'ದಿ ಓಷನ್ ಕ್ಲೀನಪ್' ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಬೋಯಾನ್ ಸ್ಲಾಟ್ ಅವರ ಮೆಚ್ಚುಗೆ ವ್ಯಕ್ತಪಡಿಸಿ ಅವರ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕೂಡ ನೀಡಿದ್ದರು.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ ಉದ್ಯಮಿ ಸಿದ್ಧಾರ್ಥ್ ಜಲಮೂಲಗಳನ್ನು ಸ್ವಚ್ಛಗೊಳಿಸುವ ಅವರ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದಲ್ಲಿ ಸ್ವಚ್ಛತೆಗಾಗಿ ಇನ್ನಷ್ಟು ಕೆಲಸ ಮಾಡಲು ಈ ಕಾಯಕ ತಮಗೆ ಸ್ಫೂರ್ತಿ ನೀಡಿವೆ. ಬಿಟ್ಟು ಅವರಿಗೆ ಆರ್ಥಿಕ ಸಹಾಯ ನೀಡಲು ಬಯಸುವುದಾಗಿ ಮತ್ತು ಕೈಗೊಂಡಿರುವ ಕೆಲಸದ ವ್ಯಾಪ್ತಿಯನ್ನು ವಿಸ್ತರಿಸಲು ಸಹಾಯ ಮಾಡಲು ಸಿದ್ಧರಿರುವುದಾಗಿ ಡಯಲಾನಿ ಹೇಳಿದ್ದಾರೆ‌.

ಸದ್ಯ ಉದ್ಯಮಿಯ ಈ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ."ಕೊನೆಗೂ ನಮ್ಮ ದೇಶದ ಉದ್ಯಮಿಯೊಬ್ಬರು ಸ್ಥಳೀಯವಾಗಿ ಶ್ರಮಿ ಸುತ್ತಿರುವ ಯುವಕನಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

Viral Video: ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಜೀವದ ಹಂಗು ತೊರೆದು ಕಾಪಾಡಿದ ಅರಣ್ಯಾಧಿಕಾರಿಗಳು

ಆದರೆ ಅವರು ಇಡೀ ಭಾರತವನ್ನೇ ಸ್ವಚ್ಛಗೊಳಿಸಬಲ್ಲರು. ಆದರೆ ನಮ್ಮ ನಾಗರಿಕ ಪ್ರಜ್ಞೆಯಿಲ್ಲದ ಜನರು ಅವರಿಗೆ ಜೀವ ಮಾನವಿಡೀ ಕೆಲಸ ನೀಡುತ್ತಲೇ ಇರುತ್ತಾರೆ. ಪರಿಸರ ಕಾಪಾಡಿಕೊಳ್ಳಲು ನಾವೆಂದಾದರೂ ಪ್ರಯತ್ನಿಸುತ್ತೇವೆಯೇ ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಉಂಟಾಗುತ್ತಿವೆ.ಎಷ್ಟೇ ಸ್ವಚ್ಛಗೊಳಿಸಿದರೂ ಜನರು ಮತ್ತೆ ಕಸ ಹಾಕುವುದನ್ನು ನಿಲ್ಲಿಸದಿದ್ದರೆ ಈ ಶ್ರಮ ವ್ಯರ್ಥ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.