Viral Video: ಬ್ರ್ಯಾಂಡೆಡ್ ಬ್ಯಾಗ್ ಬಿಟ್ಟು ಈ ವಿದೇಶಿ ಬೆಡಗಿಯರು ಮಾಡಿದ್ದೇನು ನೋಡಿ; ವಿಡಿಯೊ ವೈರಲ್
ಪಾನ್ ಮಸಾಲಾ ಬ್ರ್ಯಾಂಡ್ ವಿಮಲ್ ಬ್ಯಾಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ವಿದೇಶಿ ಪ್ರವಾಸಿಗರಿಬ್ಬರು ವಿಮಲ್ ಬ್ಯಾಗ್‌ಗಳನ್ನು ಸ್ಟೈಲ್ ಆಗಿ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.


ಇತ್ತೀಚೆಗೆ ಟಿಕ್ ಟಾಕ್ ಬಳಕೆದಾರರೊಬ್ಬರು ಅಮೆರಿಕದಲ್ಲಿ ಬಟ್ಟೆ ಶಾಪಿಂಗ್ ಮಾಡುವಾಗ ಬಾಸ್ಮತಿ ಅಕ್ಕಿಯ ಚೀಲದಿಂದ ತಯಾರಿಸಿದ ಜಾಕೆಟ್‌ವೊಂದನ್ನು ನೋಡಿ ಸಿಕ್ಕಾಪಟ್ಟೆ ಶಾಕ್ ಆಗಿದ್ದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಪಾನ್ ಮಸಾಲಾ ಬ್ರ್ಯಾಂಡ್ ವಿಮಲ್ ಬ್ಯಾಗ್ ಸರದಿ. ಸಾಮಾನ್ಯವಾಗಿ ಎಲ್ಲರೂ ಬ್ರ್ಯಾಂಡೆಡ್ ಬ್ಯಾಗ್‌ಗಳನ್ನು ಹಿಡಿದುಕೊಂಡು ಓಡಾಡುವುದಕ್ಕೆ ಇಷ್ಟಪಡುತ್ತಾರೆ. ಆದರೆ ವಿದೇಶಿ ಪ್ರವಾಸಿಗರಿಬ್ಬರು ವಿಮಲ್ ಬ್ಯಾಗ್‌ಗಳನ್ನು ಸ್ಟೈಲ್ ಆಗಿ ಹಿಡಿದುಕೊಂಡು ರಸ್ತೆಯಲ್ಲಿ ಹೋಗಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಇಬ್ಬರೂ ವಿದೇಶಿ ಹುಡುಗಿಯರು ತಮ್ಮ ಕೈಯಲ್ಲಿ ವಿಮಲ್ ಬ್ಯಾಗ್‌ಗಳನ್ನು ಹಿಡಿದುಕೊಂಡು ಹೋಗುವುದು ಸೆರೆಯಾಗಿದೆ. ಈ ವಿಡಿಯೊ ಈಗ ಎಲ್ಲರ ಗಮನಸೆಳೆದು ಈಗಾಗಲೇ 25 ಮಿಲಿಯನ್ ವ್ಯೂವ್ಸ್ ಗಳಿಸಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ವೈರಲ್ ವಿಡಿಯೊಕ್ಕೆ ಅನೇಕರು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಒಬ್ಬ ನೆಟ್ಟಿಗರು "ನಾನು ಕೂಡ ಈ ಬ್ಯಾಗ್ ಅನ್ನು ಕಚೇರಿಗೆ ತೆಗೆದುಕೊಂಡು ಹೋಗಲು ಬಯಸುತ್ತೇನೆ"ಎಂದು ಬರೆದಿದ್ದಾರೆ. ಇನ್ನೊಬ್ಬರು, "ಈ ವಿದೇಶಿ ಹುಡುಗಿಯರಿಗೆ ಮೋಸ ಆಗಿದೆ. ದಯವಿಟ್ಟು ಯಾರಾದರೂ ಅವರು ಯಾವ ಬ್ಯಾಗ್ ಹಿಡಿದುಕೊಂಡಿದ್ದಾರೆ ಎಂದು ಹೇಳಿ" ಎಂದು ಬರೆದಿದ್ದಾರೆ. ಇನ್ನೊಬ್ಬರು "ಇವರು ಭಾರತೀಯ ಪೌರತ್ವಕ್ಕೆ ಅರ್ಹರು" ಎಂದು ಬರೆದಿದ್ದಾರೆ. ಮಗದೊಬ್ಬರು, ʼʼನೀವು ಬ್ರ್ಯಾಂಡ್‌ನ ಅಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿರುವ ಅಜಯ್ ದೇವಗನ್ ಅವರ ಅತಿಥಿಗಳೇ?ʼʼ ಎಂದು ಕೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕೆನಡಾಕ್ಕಿಂತ ಭಾರತ ಬೆಸ್ಟ್ ಎಂದ ಅಲ್ಲಿನ ಕಂಟೆಂಟ್ ಕ್ರಿಯೇಟರ್; ಕಾರಣವೇನು ಗೊತ್ತಾ?
ಭಾರತದಲ್ಲಿ ಈ ಬ್ಯಾಗ್‍ಗಳಿಗೆ 100 ರೂ.ಗಿಂತ ಕಡಿಮೆ ಬೆಲೆ ಇದ್ದು, ಕೆಲವು ಅಂಗಡಿಗಳು ಅವುಗಳನ್ನು ಉಚಿತವಾಗಿಯೂ ನೀಡುತ್ತವೆ. ಆದರೆ ಇಂತಹ ವಿಮಲ್ ಬ್ಯಾಗ್‍ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.