ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದ ಸರ್ಕಾರಿ ಆಸ್ಪತ್ರೆಯ ಸೇವೆಯನ್ನು ಕಂಡು ದಂಗಾದ ವಿದೇಶಿ ಪ್ರವಾಸಿಗ! ವಿಡಿಯೋ ನೋಡಿ

Viral Video: ಜರ್ಮನಿಯ ಪ್ರವಾಸಿಯೊಬ್ಬರು ಭಾರತದಲ್ಲಿ ಸಿಗುವ ಸೌಲಭ್ಯದ ಬಗ್ಗೆ ಕೊಂಡಾಡಿದ್ದಾರೆ. ಗುಜರಾತ್‌ನ ಸೂರತ್‌ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ರೇಬೀಸ್ ಲಸಿಕೆ ಪಡೆದಿರುವುದಾಗಿ ಪ್ರವಾಸಿ ಬಹಿರಂಗಪಡಿಸಿದ್ದು ಈ ಸೌಲಭ್ಯ ಬಗ್ಗೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಭಾರತದ ಸರ್ಕಾರಿ ಆಸ್ಪತ್ರೆಯ ಸೇವೆಗೆ ಆಶ್ಚರ್ಯ ವ್ಯಕ್ತ ಪಡಿಸಿದ ಪ್ರವಾಸಿಗ!

ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ರೇಬೀಸ್ ಲಸಿಕೆ -

Profile
Pushpa Kumari Apr 11, 2026 9:02 PM

ಸೂರತ್,ಎ.11: ಭಾರತದ ಸಂಸ್ಕೃತಿ ಇಲ್ಲಿನ ಆಚರಣೆಯ ಬಗ್ಗೆ ಆಕರ್ಷಿತರಾದ ಅನೇಕ ವಿದೇಶಿಗರು ಇದ್ದಾರೆ. ಇಲ್ಲಿನ ಐತಿಹಾಸಿಕ ಸ್ಥಳ, ಆಹಾರದ ರುಚಿಗೆ ಫಿದಾ ಆದ ಪ್ರವಾಸಿಗರು ಇದ್ದಾರೆ. ಈ ನಡುವೆ ಜರ್ಮನಿಯ (German) ಪ್ರವಾಸಿಯೊಬ್ಬರು ಭಾರತದಲ್ಲಿ ಸಿಗುವ ಸೌಲಭ್ಯದ ಬಗ್ಗೆ ಕೊಂಡಾಡಿ ದ್ದಾರೆ. ಗುಜರಾತ್‌ನ ಸೂರತ್‌ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ರೇಬೀಸ್ ಲಸಿಕೆ ಪಡೆದಿರುವುದಾಗಿ ಪ್ರವಾಸಿ ಬಹಿರಂಗಪಡಿಸಿದ್ದು ಈ ಸೌಲಭ್ಯ ಬಗ್ಗೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಜರ್ಮನಿಯ ಪ್ರವಾಸಿಯೊಬ್ಬರಿಗೆ ಸೂರತ್ ನಲ್ಲಿದ್ದಾಗ ಬೀದಿ ನಾಯಿಯೊಂದು ಕಚ್ಚಿದೆ. ಈ ಸೋಂಕಿನ ಬಗ್ಗೆ ಕಳವಳಗೊಂಡ ಅವರು ವೈದ್ಯಕೀಯ ಚಿಕಿತ್ಸೆಗಾಗಿ ತಕ್ಷಣವೇ ವೆಸು ಪ್ರದೇಶದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಆ ವ್ಯಕ್ತಿಗೆ ತ್ವರಿತ ಚಿಕಿತ್ಸೆ ನೀಡಲಾಗಿದ್ದು ಯಾವುದೇ ಶುಲ್ಕ ವಿಧಿಸದೆ ರೇಬೀಸ್ ಲಸಿಕೆ ನೀಡಲಾಯಿತು ಎಂದು ಹೇಳಿದರು.

ವಿಡಿಯೋ ನೋಡಿ:

ಆಸ್ಪತ್ರೆಯಲ್ಲಿ ತಮಗಾದ ಅನುಭವವನ್ನು ಡೇವಿಡ್ ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ. ಪೂರ್ಣ ಲಸಿಕೆ ವೇಳಾಪಟ್ಟಿಯ ಭಾಗವಾಗಿ ನಾಲ್ಕು ಹೆಚ್ಚುವರಿ ಡೋಸ್‌ ಗಳನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಇಂಡೋ-ಜರ್ಮನ್ ವೈಬ್ಸ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಬಹಳಷ್ಟು ವೈರಲ್ ಆಗಿದೆ. ಅಮೆರಿಕದಂತಹ ಅಭಿವೃದ್ಧಿ ರಾಷ್ಟ್ರಗಳಲ್ಲಿ ರೇಬಿಸ್ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಭರಿಸಬೇಕಾಗುತ್ತದೆ. ಅಂತಹದರಲ್ಲಿ ಭಾರತದ ಸಾರ್ವಜನಿಕ ಆಸ್ವತ್ರೆಯೂ ವಿದೇಶಿ ಪ್ರವಾಸಿಗೂ ಉಚಿತವಾಗಿ, ಚಿಕಿತ್ಸೆ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಸರ್ಕಾರವು ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ಮೂಲಕ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ.