ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಚಿಮುಲ್ ನಿರ್ದೇಶಕ ಹುಜುಗೂರು ರಾಮಣ್ಣ ವಿರುದ್ಧ, ಭರಣಿ ವೆಂಕಟೇಶ್ ಮೋಹನ್‌ ರೆಡ್ಡಿ ತೀವ್ರ ವಾಗ್ದಾಳಿ

ರಾಮಣ್ಣ ಅವರೇ ಯಲುವಹಳ್ಳಿ ರಮೇಶ್ ಅವರ ಬಸ್ಸಿನಲ್ಲಿ ಯರ‍್ಯಾರು ಬಂದು ಇಳಿದರು ಅಂತ ನಿಮಗೆ ಗೊತ್ತಿಲ್ಲವೇ? ನಿಮ್ಮ ಜೆಡಿಎಸ್ ಅಭ್ಯರ್ಥಿಗಳು,  ಮುಖಂಡರೇ ಬಂದು ಇಳಿದರು. ಹಾಗಾದರೆ ನಿಮ್ಮ ಪಕ್ಷದ ಅಸ್ತಿತ್ವ ಎಲ್ಲಿಗೋಯಿತು? ಹಾಗದರೆ ನಿಮ್ಮ ಅಭ್ಯರ್ಥಿಯನ್ನು ವಾಪಸ್ಸು ಪಡೆದು ಒಳಗೊಳಗೇ ಒಳ ಒಪ್ಪಂದ ಮಾಡಿಕೊಂಡಿರೇನು?

ಜೆಡಿಎಸ್ ಶಾಸಕ ಸಂಸದರ ನಡುವೆ ನಮ್ಮನ್ನು ಎಳೆದು ತಂದರೆ ಗೌರವ ಉಳಿಯುವುದಿಲ್ಲ

ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷಿಯಲ್ಲಿ ಜೆಡಿಎಸ್ ಮುಖಂಡರ ವಿರುದ್ಧ ಕಾಂಗ್ರೆಸ್ ಮುಖಂಡರು ಹರಿಹಾಯ್ದರು. -

Profile
Ashok Nayak Apr 11, 2026 9:54 PM

ಚಿಕ್ಕಬಳ್ಳಾಪುರ: ಮಾಧ್ಯಮದ ಎದುರು ಮತನಾಡುವಾಗ ನಿಮ್ಮ ಶಿಡ್ಲಘಟ್ಟ ಕ್ಷೇತ್ರದ ಶಾಸಕರು ಮತ್ತು ಸಂಸದರ ವಿಚಾರ ಮಾತನಾಡಬೇಕೇ ವಿನಃ ನನ್ನ ಮತ್ತು ಮೋಹನ್‌ ರೆಡ್ಡಿ ವಿಚಾರಗಳನ್ನು ಎಳೆದು ತರುವುದು ನಿಮ್ಮ ಹಿರಿತನಕ್ಕೆ ಶೋಭಿಸುವುದಿಲ್ಲ ಹುಷಾರ್ ಎಂಬ ಎಚ್ಚರಿಕೆಯನ್ನು ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್‌ ರೆಡ್ಡಿ ನೀಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಭರಣಿ ವೆಂಕಟೇಶ್ ಇತ್ತೀಚಿಗೆ ಇದೇ ಪತ್ರಿಕಾ ಭವನದಲ್ಲಿ ಶಿಡ್ಲಘಟ್ಟ ಜೆಡಿಎಸ್ ಮುಖಂಡರು ಕರೆದಿದ್ದ ಸುದ್ದಿಗೋಷ್ಟಿಯ ವಿಚಾರದ ಬಗ್ಗೆ ಮಾತನಾಡಿದ ಅವರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ರೈತರ ಪ್ರತಿಭಟನೆ ವೇಳೆ ಬೆಂಬಲ ಸೂಚಿಸಿ ಸಂಸದ ಡಾ.ಕೆ.ಸುಧಾಕರ್ ನಿಮ್ಮ ಶಿಡ್ಲಘಟ್ಟ ಶಾಸಕರ ಕುರಿತು ಮಾತನಾಡಿದ್ದಾರೆ ಎಂಬ ವಿಚಾರದ ಬಗ್ಗೆ ನಿಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಏನು ಬೇಕಾದರೂ ಮಾತನಾಡಿ ಕೊಳ್ಳಿ, ಅದಕ್ಕೂ ನಮಗೂ ಯಾವ ಸಂಬಂಧವೂ ಇಲ್ಲ.ಈ ಕೆಲಸ ಮಾಡುವ ಬದಲು ನಮ್ಮ ಬಗ್ಗೆ ಏಕೆ ಮಾತನಾಡುತ್ತಿರಿ? ಮೋಹನ್‌ರೆಡ್ಡಿ ವಿರುದ್ಧ ಸೋತ ಹತಾಶೆಯಲ್ಲಿ, ನನ್ನ ಗೆಲುವನ್ನು ಅರಗಿಸಿ ಕೊಳ್ಳಲಾಗದೆ ಅಡ್ಜೆಸ್ಟ್ಮೆಂಟ್ ರಾಜಕಾರಣದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: Chikkaballapur News: ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿದ್ದ ವಿದ್ಯಾರ್ಥಿನಿ ಉತ್ತಮ ಸಾಧನೆ

ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯಲ್ಲಿ ನಿಮ್ಮ ಪಕ್ಷ ಅಭ್ಯರ್ಥಿಯ ನಾಮಪತ್ರ ವಾಪಸ್ಸು ತೆಗೆಸಿ ತೋಪಡಾ ನಾಗರಾಜ್ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಲಾಯಿತು. ಆಗ ತಾವು ಕಾಂಗ್ರೆಸ್‌ಗೆ ಮತ ನೀಡಿದ್ದೀರಿ ಎಂದರೆ ನಿಮ್ಮ ಪಕ್ಷನಿಷ್ಟೆ ಎಲ್ಲಿಗೆ ಹೋಯಿತು, ನಿಮ್ಮದು ಒಳ ಒಪ್ಪಂದವಾ? ಚಿಮುಲ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಿದ್ದೇಕೆ.ಕೊನೇ ಕ್ಷಣದಲ್ಲಿ ಅಭ್ಯರ್ಥಿ ವಾಪಸ್ಸು ಪಡೆದಿದ್ದು ಯಾಕೆ? ಎಂಬುದನ್ನು ಜನತೆಗೆ ತಿಳಿಸಿ ಎಂದ ಅವರು 7 ವರ್ಷ ನಿರ್ದೇಶಕನಾಗಿ ಕೆಲಸ ಮಾಡಿದ್ದರಿಂದ ಭರಣಿ ವೆಂಕಟೇಶ್‌ರನ್ನು 24 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ.

ರಾಮಣ್ಣ ಅವರೇ ಯಲುವಹಳ್ಳಿ ರಮೇಶ್ ಅವರ ಬಸ್ಸಿನಲ್ಲಿ ಯರ‍್ಯಾರು ಬಂದು ಇಳಿದರು ಅಂತ ನಿಮಗೆ ಗೊತ್ತಿಲ್ಲವೇ? ನಿಮ್ಮ ಜೆಡಿಎಸ್ ಅಭ್ಯರ್ಥಿಗಳು,  ಮುಖಂಡರೇ ಬಂದು ಇಳಿದರು. ಹಾಗಾದರೆ ನಿಮ್ಮ ಪಕ್ಷದ ಅಸ್ತಿತ್ವ ಎಲ್ಲಿಗೋಯಿತು? ಹಾಗದರೆ ನಿಮ್ಮ ಅಭ್ಯರ್ಥಿಯನ್ನು ವಾಪಸ್ಸು ಪಡೆದು ಒಳಗೊಳಗೇ ಒಳ ಒಪ್ಪಂದ ಮಾಡಿಕೊಂಡಿರೇನು? ಎಂದು ಪ್ರಶ್ನಿಸಿದರು.

cbpm1mohanreddy

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ, ನಿಮ್ಮ ಆಂತರಿಕ ಸಮಸ್ಯೆಗಳು, ಆರೋಪ-ಪ್ರತ್ಯಾರೋಪಗಳನ್ನು ನಿಮ್ಮ ತಾಲ್ಲೂಕಿನ ಮಟ್ಟಕ್ಕೆ ಮಾತ್ರ ಸೀಮಿತ ಗೊಳಿಸಿಕೊಂಡಿದ್ದರೆ ನಾನು ಮಾತನಾಡುವ ಅಗತ್ಯವೇ ಇರಲಿಲ್ಲ.ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವು ಸಂಸದ ಸುಧಾಕರ್ ಅವರ ಜತೆ ಕೈಜೋಡಿಸಿ ಗೆಲುವು ಸಾಧಸಿದ್ದಾರೆ ಎಂದು ಹೇಳಿದ್ದಾರೆ. ನಾವು ಅಂತಹ ನಾಮರ್ಧಕೆಲಸ ಮಾಡುವುದಿಲ್ಲ.ಅಂತಹ ಹೀನ ಮಟ್ಟಕ್ಕೆ ಇಳಿಯುವುದೇ ಇಲ್ಲ.

ಸಂಸದರು ನಮ್ಮ ಸಂಬಂಧಿಕರೇ ಆಗಿರಬಹುದು. ಈವರೆಗೆ ಅವರ ಮನೆಬಾಗಿಲು ತುಳಿದವರಲ್ಲ. ನಮಗೆ ಉಸ್ತುವಾರಿ ಸಚಿವರು ಒಂದು ಜವಾಬ್ದಾರಿ ಕೆಲಸ ಕೊಟ್ಟಿದ್ದಾರೆ.ನಾವು ಪಕ್ಷನಿಷ್ಠರು, ಪಕ್ಷದ ಸಿದ್ದಾಂತದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ.ಯಾರ ಮನೆಬಾಗಿಲಿಗೂ ಹೋಗಿಲ್ಲ. ಪ್ರಮಾಣ ಮಾಡಿ ಹೇಳುತ್ತೇನೆ. ನಿಮಗೆ ತಾಕತ್ತು ಇದ್ದರೆ ರಾಮಣ್ಣ ಭೋಗನಂದೀಶ್ವರ ದೇವಾಲಯದಲ್ಲಿ ಪ್ರಮಾಣ ಮಾಡ ಬನ್ನಿ ಎಂದು ಪಂಥಾಹ್ವಾನ ನೀಡಿದರು.

ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುವ ಅನಿವಾರ್ಯತೆ ಅವಶ್ಯ ಕತೆ ನಮಗಿಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತದಾರರ ಬೆಂಬಲದಿಂದ ಭಾರೀ ಬಹುಮತ ದಿಂದ ಗೆದ್ದಿದ್ದೇವೆ ವಿನಃ ಅದು ಯಾವುದೇ ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ಅಲ್ಲ. ಸುಮ್ಮನೆ ಬಾಯಿಗೆ ಬಂದAತೆ ಮಾತನಾಡಬೇಡಿ. ಇಲ್ಲವಾದರೆ ನಿಮ್ಮ ಕುರಿತು ಸಹ ಸಂಪೂರ್ಣವಾಗಿ ಬಹಿರಂಗಪಡಿಸಲು ನಾವು ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

7 ವರ್ಷಗಳ ಹಿಂದೆ ಗುಡಿಯಪ್ಪ ಅಣ್ಣ ಅವರನ್ನು ಸೋಲಿಸಲು ದ್ಯಾವಪ್ಪ ಅವರನ್ನೆ ಗೆಲ್ಲಿಸಲು ಜೆಡಿಎಸ್ ಬಳಗವೆಲ್ಲ ಗುಂಪುಗೂಡಿಕೊಂಡು ಒಳೊಪ್ಪಂದ ಮಾಡಿಕೊಂಡಿದ್ದು ಯಾರು ಎಂಬುದು ಜನತೆಗೆ ತಿಳಿದಿದೆ.ಇಂತಹ ಇತಿಹಾಸ ಇರುವ ನಿಮಗೆ ಮಾನಮರ್ಯಾದೆ ಇರಬೇಕು. ನಾವು ಅಡ್ಜೆಸ್ಟ್ಮೆಂಟ್ ಪಾಲಿಟಿಕ್ಸ್ನಂತಹ ಹಲ್ಕಾ ಕೆಲಸ ಮಾಡುವುದಿಲ್ಲ. ನಮ್ಮ ಉಸ್ತುವಾರಿ ಸಚಿವರ ಬೆಂಬಲದಲ್ಲಿ ಅವರ ಆಣತಿಯಂತೆ ನಾವು ಕೆಲಸ ಮಾಡುತ್ತಿದ್ದೇವೆ.ಇಡೀ ಜಿಲ್ಲೆಯಲ್ಲಿ ಹೈನೋ ದ್ಯಮ ಕ್ಷೇತ್ರದಿಂದ ನನ್ನನ್ನು ಗೆಲ್ಲುಸುವಂತೆ ಕೇಳಿದೆ. 5 ವರ್ಷದ ಹಿಂದೆ ನನಗೆ ಸೋಲಾಗಿದೆ. ಈಬಾರಿ ಸಹಾಯ ಮಾಡಿ ಎಂದು ಮನವಿ ಮಾಡಿದ್ದೆ.

ಸುಬ್ಬಾರೆಡ್ಡಿ, ಪುಟ್ಟಸ್ವಾಮಿಗೌಡ, ಶಿವಶಂಕರರೆಡ್ಡಿ, ಪುಟ್ಟು ಆಂಜಿನಪ್ಪ, ರಾಜೀವ್‌ಗೌಡ, ಶಶಿಧರ್ ಮುನಿಯಪ್ಪ,ಇವರೊಟ್ಟಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಹಮತದಲ್ಲಿ ಅತಿ ಹೆಚ್ಚು ಮತಗಳ ಅಂತರದಿAದ ಗೆಲುವು ಸಾಧಿಸುವಂತೆ ಮಾಡಿದ್ದಾರೆ.ನಿಮ್ಮ ಓಟನ್ನೇ ನಂಬಿ ಕೂತಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಮ್ಮ ನಾಯಕರಿಗೆ ನೀವು ಶರಣಾಗತಿಯಾಗಿ.ನಿಮ್ಮ ಶಾಸಕರು ಕೊಟ್ಟರೆ ವರ, ಇಟ್ಟರೆ ಶಾಪ ಎನ್ನುತ್ತೀರಲ್ಲ. ಅವರೇನು? ಋಷಿಮುನಿಯಲ್ಲ. ನನ್ನ ವಿರುದ್ಧ ಸಚಿವರಿಗೆ ನಿಮ್ಮ ಶಾಸಕರು ಪೋನ್‌ಕರೆ ಹುಜುಗೂರು ರಾಮಣ್ಣಗೆ ಸಹಾಯ ಮಾಡುವಂತೆ ಕೇಳಿಲ್ಲವೇ? ನಮ್ಮ ನಾಯಕರಾದ ಸಚಿವರು ಮೋಹನ್‌ರೆಡ್ಡಿ ನನ್ನ ಅಭ್ಯರ್ಥಿ ಅವರು ಗಲ್ಲುತ್ತಾರೋ? ಸೋಲುತ್ತಾರೋ, ಅವರು ಸುಧಾಕರ್ ಜತೆಗೆ ಹೋಗುತ್ತಾರೋ ನನ್ನ ಜತೆ ಇರುತ್ತಾರೋ ನನ್ನ ನಿಷ್ಟೆ ಬದಲಿಲ್ಲ ಎಂದು ಹೇಳಿದ್ದಾರೆ. ಬೇಕಾದರೆ ನಿಮ್ಮ ನಾಯಕರನ್ನು ಕೇಳಿಕೊಳ್ಳಿ. ಸುಮ್ಮನೆ ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಖಬರ್‌ದಾರ್. ನೀವು ದೊಡ್ಡವರು ಅಂತ ಗೌರವ ಕೊಡುತ್ತೇನೆ. ಅದನ್ನು ಉಳಿಸಿಕೊಳ್ಳಿ ಎಂದ ಹರಿಹಾಯ್ದರು.

ಸುದ್ದಿ ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಯರಾಮ್, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರಾದ ಮೋಹನ್‌ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಮಂಚೇನಹಳ್ಳಿ ಪ್ರಕಾಶ್,ನಗರಸಭಾ ಮಾಜಿ ಸ್ಥಾಯಿ ಸಮಿತಿ ಸದಸ್ಯ ಮಿಲ್ಟನ್ ವೆಂಕಟೇಶ್, ಮುಖಂಡರಾದ ನುಗಿತಹಳ್ಳಿ ರವಿ ಮತ್ತಿತರರು ಇದ್ದರು.