ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ನೋವೆಲ್ಲ ಗಂಗೆಯಲ್ಲಿ ತೇಲಿ ಹೋಯ್ತು": ವಾರಣಾಸಿ ಪ್ರವಾಸದ ಬಳಿಕ ಸ್ಪ್ಯಾನಿಷ್ ಮಹಿಳೆ ಭಾವುಕ

Viral News: ಭಾರತಕ್ಕೆ ಭೇಟಿ ನೀಡಿದ ವಿದೇಶಿಗರು ಇಲ್ಲಿನ ಆಚಾರ- ವಿಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ. ಇಲ್ಲಿನ ಇತಿಹಾಸ ಮತ್ತು ಸಂಪ್ರದಾಯಗಳು ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತವೆ. ಇದೀಗ ಧಾರ್ಮಿಕ ನಗರ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ ಸ್ಪ್ಯಾನಿಷ್ ಮಹಿಳೆ ಆಂಡ್ರಿಯಾ ಪಾಸ್ಪರ್ ತಮಗಾದ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ವಾರಣಾಸಿಯ ಆಧ್ಯಾತ್ಮಿಕ ಶಕ್ತಿ ಕೊಂಡಾಡಿದ ವಿದೇಶಿ ಮಹಿಳೆ

ವಾರಾಣಸಿಯ ಆಧ್ಯಾತ್ಮಿಕ ಶಕ್ತಿ ಕೊಂಡಾಡಿದ ವಿದೇಶಿ ಮಹಿಳೆ -

Profile
Pushpa Kumari Sep 11, 2026 11:18 PM

ಲಖನೌ, ಸೆ.11: ಭಾರತಕ್ಕೆ ಭೇಟಿ ನೀಡಿದ ವಿದೇಶಿಗರು ಇಲ್ಲಿನ ಆಚಾರ- ವಿಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ. ಇಲ್ಲಿನ ಇತಿಹಾಸ ಮತ್ತು ಸಂಪ್ರದಾಯಗಳು ವಿದೇಶಿಗರನ್ನು ಸೂಜಿಗಲಗಲಿನಂಯತೆ ಸೆಳೆಯುತ್ತವೆ. ಇದೀಗ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ ಸ್ಪ್ಯಾನಿಷ್‌ನ ಆಂಡ್ರಿಯಾ ಪಾಸ್ಪರ್ ಎಂಬ ಮಹಿಳೆ ತಮಗಾದ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿದ್ದಾರೆ. ತಾನು ಭೇಟಿ ನೀಡಿದ ಪ್ರವಾಸಿ ಸ್ಥಳಗಳಲ್ಲಿ ವಾರಣಾಸಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ತಮ್ಮ ಜೀವನ ಬಹಳಷ್ಟು ಕಷ್ಟದಲ್ಲಿದೆ ಎಂದಾಗ ವಾರಣಾಸಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು ಎಂದು ತಿಳಿಸಿದ ಆಂಡ್ರಿಯಾ, ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಕ್ಷಣವನ್ನು ನೆನೆದು ಭಾವುಕರಾಗಿದ್ದಾರೆ. ತಾನು ಅತ್ಯಂತ ಸವಾಲಿನ ಕ್ಷಣದಲ್ಲಿದ್ದಾಗ ಗಂಗಾ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿದೆ. ಇಂದು ಗಂಗಾ ಮಾತೆ ತನ್ನನ್ನು ಅಪ್ಪಿಕೊಂಡಂತೆ ಭಾಸವಾಗಿದೆ. ತನ್ನೆಲ್ಲ ಕಣ್ಣೀರು ಮತ್ತು ಕಷ್ಟಗಳನ್ನು ಆ ನದಿಗೆ ಅರ್ಪಿಸಿದಂತೆ ಅನಿಸಿ ಹಗುರವಾಗಿರುವುದಾಗಿ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ:

ಈ ಪವಿತ್ರ ನದಿ ತಲೆಮಾರುಗಳಿಂದ ಆಧ್ಯಾತ್ಮಿಕತೆಗೆ ಹೆಸರುವಾಸಿ. ಇಲ್ಲಿನ ಶಕ್ತಿಯನ್ನು ಕೇವಲ ಪುಸ್ತಕಗಳನ್ನು ಓದಿ ಅಥವಾ ಆಚರಣೆಗಳಲ್ಲಿ ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಇಲ್ಲಿಯೇ ಬಂದು ಅನುಭವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ

ವಾರಣಾಸಿ ಜೀವನ ಮತ್ತು ಮರಣ ಒಂದೇ ನೀರಿನ ಮುಂದೆ ಸಹಬಾಳ್ವೆ ನಡೆಸುವ ನಗರವಾಗಿದೆ. ಇಲ್ಲಿ ಪ್ರತಿದಿನ ದಹನಗಳನ್ನು ನಡೆಸಲಾಗುತ್ತಿದ್ದು ಚಿತಾಭಸ್ಮವು ಗಂಗೆಗೆ ಮರಳುತ್ತದೆ. ಮೃತರ ಚಿತಾಭಸ್ಮವನ್ನು ಗಂಗೆಯಲ್ಲಿ ವಿಸರ್ಜಿಸಿ ಮೋಕ್ಷ ಪಡೆಯುವ ನಂಬಿಕೆಯೂ ಇಲ್ಲಿದೆ ಎಂದಿದ್ದಾರೆ.

​ಆಂಡ್ರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ "ಭಾರತವನ್ನು ಕೇವಲ ಕಣ್ಣುಗಳಿಂದ ನೋಡದೇ ಆತ್ಮದಿಂದ ಅನುಭವಿಸಬೇಕು" ಎಂದು ಬರೆದುಕೊಂಡಿದ್ದಾರೆ. ಅನೇಕ ನೆಟ್ಟಿಗರು ಅವರ ಮಾತುಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಬಳಕೆದಾರರೊಬ್ಬರು ಇಲ್ಲಿನ ಶಕ್ತಿಯ ಬಗ್ಗೆ ತಾನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ.