ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ಬೀದಿಯಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ: ವೈರಲ್ ವಿಡಿಯೊದ ಅಸಲಿಯತ್ತೇನು?

Viral Video: ಇತ್ತೀಚೆಗೆ ರಾಜಸ್ಥಾನದ ಜಲ್ ಮಹಲ್‌ನಲ್ಲಿ ವಿದೇಶಿ ಮಹಿಳೆಯೊಬ್ಬರಿಗೆ ಪುರುಷರ ಗುಂಪೊಂದು ಕಿರುಕುಳ ಎಸಗಿ ಅನುಮತಿ ಇಲ್ಲದೆ ಹೆಗಲ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಈ ನಡುವೆ ದೆಹಲಿಯಲ್ಲಿ ವಿದೇಶಿ ಮಹಿಳೆಯರಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ, ಇದರಿಂದ ಮಹಿಳೆಯರು ಭಯ ಪಡದೆ ಅವನನ್ನು ಅಟ್ಟಾಡಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿಯ ಅಸಲಿಯತ್ತೇನು?

ಕಿರುಕುಳ ನೀಡಿದ ವ್ಯಕ್ತಿಯನ್ನು ಬೆನ್ನಟ್ಟಿದ ವಿದೇಶಿ ಮಹಿಳೆಯರು

ದೆಹಲಿ ಬೀದಿಯಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳದ ಆರೋಪ -

Profile
Pushpa Kumari Apr 3, 2026 8:29 PM

ದೆಹಲಿ, ಏ. 3: ಇತ್ತೀಚೆಗೆ ಭಾರತದ ಪ್ರವಾಸಿ ಸ್ಥಳದಲ್ಲಿ ವಿದೇಶಿ ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡುತ್ತಿರುವ ಘಟನೆಗಳು ಪದೇ ಪದೆ ವರದಿಯಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ರಾಜಸ್ಥಾನದ ಜಲ್ ಮಹಲ್‌ನಲ್ಲಿ ವಿದೇಶಿ ಮಹಿಳೆಯೊಬ್ಬರಿಗೆ ಪುರುಷರ ಗುಂಪೊಂದು ಕಿರುಕುಳ ಎಸಗಿ ಅನುಮತಿ ಇಲ್ಲದೆ ಹೆಗಲ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ನಡುವೆ ದೆಹಲಿಯಲ್ಲಿ ವಿದೇಶಿ ಮಹಿಳೆಯರಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದ. ಇದರಿಂದ ಮಹಿಳೆಯರು ಭಯ ಪಡದೆ ಅವನನ್ನು ಎದುರಿಸಿ ಅಟ್ಟಾಡಿಸಿದ್ದಾರೆ ಎನ್ನುವ ಸುದ್ದಿ ವೈರಲ್ (Viral News) ಆಗಿದೆ.

ದೆಹಲಿ ಬೀದಿಯಲ್ಲಿ ಮೂವರು ವಿದೇಶಿ ಮಹಿಳೆಯರಿಗೆ ಪುರುಷನೊಬ್ಬ ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗಿದೆ. ಆದರೆ ಈ ಸಂದರ್ಭದಲ್ಲಿ ಮಹಿಳೆಯರು ಹೆದರದೆ ಆತನನ್ನೇ ಬೆನ್ನಟ್ಟಿದ್ದಾರೆ. ವೈರಲ್ ವಿಡಿಯೊ ರಾತ್ರಿ ನಡೆದ ಘಟನೆಯನ್ನು ತೋರಿಸುತ್ತದೆ. ಜನನಿಬಿಡ ರಸ್ತೆಯಲ್ಲಿ ಸಾಲುಗಟ್ಟಿ ನಿಂತ ಕಾರು, ಗುಂಪು ಘರ್ಷಣೆ, ಈ ನಡುವೆ ಒಬ್ಬ ಪುರುಷನನ್ನು ಬೆನ್ನಟ್ಟುತ್ತಿರುವುದು ಕಂಡು ಬಂದಿದೆ. ವರ್ಣರಂಜಿತ ಬಟ್ಟೆಗಳನ್ನು ಧರಿಸಿದ ಮಹಿಳೆಯರು ಓರ್ವ ಪುರುಷನನ್ನು ಓಡಿಸಿಕೊಂಡು ಹೋಗಿದ್ದಾರೆ.

ವಿಡಿಯೊ ನೋಡಿ:



ಅಸಲಿಗೆ ಇದು ತಪ್ಪು ಮಾಹಿತಿಯನ್ನು ನೀಡುವ ವಿಡಿಯೊ ಎಂದು ನೆಟ್ಟಿಗರು ತಿಳಿಸಿದ್ದಾರೆ. ಈ ವಿಡಿಯೊವನ್ನು ಪೋಸ್ಟ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ತಪ್ಪು ಮಾಹಿತಿ ನೀಡಿದೆ ಎನ್ನುವ ಸ್ಪಷ್ಟನೆ ಹೊರ ಬಿದ್ದಿದೆ. ಅನೇಕರು ಇದನ್ನು ಸುಳ್ಳು ಸುದ್ದಿ ಎಂದು ಕರೆದಿದ್ದಾರೆ. ವಿಡಿಯೊದಲ್ಲಿರುವ ವ್ಯಕ್ತಿಗಳು ವಿದೇಶಿ ಮಹಿಳೆಯರಲ್ಲ, ಬದಲಾಗಿ ಸ್ಥಳೀಯ ಟ್ರಾನ್ಸ್‌ಜೆಂಡರ್ ಎಂದು ನೆಟ್ಟಿಗರು ವಾದಿಸಿದ್ದಾರೆ.

ಅಕ್ಷಯ್‌ ಖನ್ನಾ ವೈರಲ್‌ ಡ್ಯಾನ್ಸ್‌ಗೆ ದೆಹಲಿ ಪೊಲೀಸರು ಫಿದಾ; ಜಾಗೃತಿ ಮೂಡಿಸಲು ಏನ್‌ ಮಾಡಿದ್ರು ಗೊತ್ತಾ?

"ಅವರು ಟ್ರಾಫಿಕ್‌ನಲ್ಲಿ ಹಣ ಸಂಗ್ರಹಿಸುವ ಟ್ರಾನ್ಸ್‌ಜೆಂಡರ್‌ಗಳುʼʼ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು, ʼʼತಪ್ಪು ಮಾಹಿತಿ ಹರಡುತ್ತಿರುವ ಹ್ಯಾಂಡಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕುʼʼ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ. ಆದರೆ ಇದರ ಸತ್ಯಾಂಶ ಏನು ಎಂದು ತಿಳಿದು ಬಂದಿಲ್ಲ.