ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ 22 ವರ್ಷದ ಯುವತಿಯ ತಿಂಗಳ ಖರ್ಚು ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ! ವಿಡಿಯೋ ನೋಡಿ

ಇತ್ತೀಚೆಗೆ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡವರು ಹಲವಾರು ಇದ್ದಾರೆ‌. ಆದರೆ ಇಲ್ಲಿ ಉದ್ಯೋಗದ ಅವಕಾಶ ಹೆಚ್ಚಿದ್ದರೂ ಜೀವನ ವೆಚ್ಚ ನಿಭಾಯಿಸೋದು ಕಷ್ಟ‌. ರೂಮ್ ಬಾಡಿಗೆ, ಕರೆಂಟ್, ವಾಟರ್ ಬಿಲ್ ಹೀಗೆ ದುಡಿದ ಅರ್ಧದಷ್ಟು ಹಣ ಇದಕ್ಕೆ ವ್ಯಯಿಸ ಬೇಕು..ಇದಕ್ಕೆ ಸಾಕ್ಷಿ ಎಂಬಂತೆ ಇದೀಗ 22 ವರ್ಷದ ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ದುಬಾರಿ ವೆಚ್ಚದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರಿನ 22 ವರ್ಷದ ಯುವತಿಯ ತಿಂಗಳ ಖರ್ಚು ಕೇಳಿ ಶಾಕ್ ಆದ ನೆಟ್ಟಿಗರು

ಬೆಂಗಳೂರಿನ ಯುವತಿಯ ತಿಂಗಳ ಖರ್ಚು 31,000 ರೂ -

Profile
Pushpa Kumari Feb 20, 2026 6:50 PM

ಬೆಂಗಳೂರು, ಫೆಬ್ರವರಿ. 20: ಇತ್ತೀಚೆಗೆ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಬದುಕು ಕಟ್ಟಿ ಕೊಂಡವರು ಹಲವಾರು ಇದ್ದಾರೆ‌. ಆದರೆ ಇಲ್ಲಿ ಉದ್ಯೋಗದ ಅವಕಾಶ ಹೆಚ್ಚಿದ್ದರೂ ಜೀವನ ವೆಚ್ಚ ನಿಭಾಯಿಸೋದು ಕಷ್ಟ‌. ರೂಮ್ ಬಾಡಿಗೆ, ಕರೆಂಟ್, ವಾಟರ್ ಬಿಲ್ ಹೀಗೆ ದುಡಿದ ಅರ್ಧದಷ್ಟು ಹಣ ಇದಕ್ಕೆ ವ್ಯಯಿಸ ಬೇಕಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ 22 ವರ್ಷದ ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ದುಬಾರಿ ವೆಚ್ಚದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Viral Video) ಬರೆದುಕೊಂಡಿದ್ದಾರೆ.

"ಬೆಂಗಳೂರಿನಲ್ಲಿ ವಾಸಿಸುವ ಒಂದು ತಿಂಗಳಲ್ಲಿ ನಾನು ಖರ್ಚು ಮಾಡುವ ಹಣ ಇದು" ಎಂಬ ಶೀರ್ಷಿಕೆಯೊಂದಿಗೆ ಬೆಂಗಳೂರಿನಲ್ಲಿ ವಾಸಿಸಲು ನಿಜವಾಗಿಯೂ ಎಷ್ಟು ವೆಚ್ಚವಾಗುತ್ತದೆ? ಎಂದು ಅವರು ತಿಳಿಸಿದ್ದಾರೆ. ಸನ್ಯಾ ಎಂಬ ಯುವತಿ ತನ್ನ ಸ್ನೇಹಿತರೊಂದಿಗೆ 3BHK ಫ್ಲ್ಯಾಟ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಅವರು ತಿಂಗಳಿಗೆ ಒಟ್ಟು ವೆಚ್ಚ 31,000 ರೂ.ಖರ್ಚು ಮಾಡುತ್ತಿದ್ದಾರೆ

ವಿಡಿಯೋ ನೋಡಿ:

ಮನೆ ಬಾಡಿಗೆ ಒಬ್ಬರಿಗೆ 14,000, ನಿರ್ವಹಣೆ ಮತ್ತು ನೀರಿನ ಶುಲ್ಕಗಳು ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 1,700 ರೂ.ಗಳು ದಿನಸಿ ವೆಚ್ಚಗಳು‌ 1,500 ರೂ.,ಅಡುಗೆ ಮತ್ತು ಮನೆಗೆಲಸದವರಿಗೆ‌ 3,000 ‌ ಒಟ್ಟು 9,000 ಸಂಬಳದಲ್ಲಿ ಒಬ್ಬರ ಪಾಲು, ಪೀಠೋ ಪಕರಣಗಳಿಗೆ 1,000 ರೂ.ಗಳು ಮತ್ತು ಪ್ರಯಾಣಕ್ಕಾಗಿ ಸುಮಾರು 2,000 ರೂ.ಗಳು ಸೇರಿವೆ. ನಂತರ ಜೀವನಶೈಲಿ ವೆಚ್ಚಗಳು, ವಿವಿಧ ಖರ್ಚುಗಳನ್ನು ಅವರು 5,000 ರೂ. ಎಂದು ಅಂದಾಜಿಸಿದ್ದಾರೆ. ಒಟ್ಟಾರೆಯಾಗಿ, ಅವರ ಮಾಸಿಕ ವೆಚ್ಚಗಳು ಸರಿಸುಮಾರು 31,000 ರೂ.ಗಳಾಗುತ್ತವೆ.

Viral Video: ಪಾತ್ರೆಗೆ ತಲೆ ಸಿಲುಕಿಸಿಕೊಂಡ ನಾಯಿಯ ಅವಾಂತರ: ವಿಡಿಯೊ ಫುಲ್ ವೈರಲ್!

ಈ ವೀಡಿಯೊ ತ್ವರಿತವಾಗಿ ಗಮನ ಸೆಳೆದಿದ್ದು ಒಬ್ಬ ಬಳಕೆದಾರರು ಬರೆದಿದ್ದಾರೆ, "ನಾನು ಯುಎಸ್‌ ನಲ್ಲಿ ವಾಸಿಸುತ್ತಿದ್ದೇನೆ ಮತ್ತು ಭಾರತದಲ್ಲಿ ಒಬ್ಬ ವ್ಯಕ್ತಿಗೆ ಇದು ಬಹಳಷ್ಟು ದುಬಾರಿಯಾಗಿದೆ ‌ ಯುವಜನರು ಉಳಿತಾಯದ ಕಡೆ ಆಸಕ್ತಿ ವಹಿಸಬೇಕು ಎಂದಿದ್ದಾರೆ. ಮತ್ತೊಬ್ಬರು ಇದು ನನ್ನ ತಿಂಗಳ ಸಂಬಳಕ್ಕೂ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ.