ಸಿಗರೇಟ್ ಸೇದಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಕಿರಾತಕ!
Viral Video: ಇಲ್ಲೊಬ್ಬ ಅಸಾಮಿಗೆ ಬುದ್ದಿ ಮಾತು ಹೇಳಿದ್ದಕ್ಕೆ ಬೆಂಕಿ ಹಚ್ಚಲು ಮುಂದಾಗಿರುವ ಘಟನೆಯೊಂದು ನಡೆದಿದೆ. ರಾಯ್‌ಪುರದಲ್ಲಿ ಈ ಘಟನೆ ನಡೆದಿದ್ದು ಪೆಟ್ರೋಲ್ ಹಾಕಿಸುವಾಗ ಸಿಗರೇಟ್ ಸೇದಬೇಡ ಎಂದು ಹೇಳಿದ್ದಕ್ಕೆ ಆತನು ಸಿಟ್ಟಿನಿಂದ ಇಡೀ ಬಂಕ್‌ಗೇ ಬೆಂಕಿ ಹಚ್ಚಿದ್ದಾನೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಕಿರಾತಕ -
ಛತ್ತೀಸ್‌ಗಢ,ಫೆ.20: ಮನುಷ್ಯ ತಪ್ಪು ಮಾಡುತ್ತಿದ್ದಾನೆ ಎಂದಾಗ ಅದನ್ನು ತಿದ್ದಿ ಸರಿಪಡಿಸುವವರು ಬೇಕು ಅನ್ನೋದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಅಸಾಮಿಗೆ ಬುದ್ದಿ ಮಾತು ಹೇಳಿದ್ದಕ್ಕೆ ಬೆಂಕಿ ಹಚ್ಚಲು ಮುಂದಾಗಿರುವ ಘಟನೆಯೊಂದು ನಡೆದಿದೆ. ರಾಯ್‌ಪುರದಲ್ಲಿ ಈ ಘಟನೆ ನಡೆ ದಿದ್ದು ಪೆಟ್ರೋಲ್ ಹಾಕಿಸುವಾಗ ಸಿಗರೇಟ್ ಸೇದಬೇಡ ಎಂದು ಹೇಳಿದ್ದಕ್ಕೆ ಆತನು ಸಿಟ್ಟಿನಿಂದ ಇಡೀ ಬಂಕ್‌ಗೇ ಬೆಂಕಿ ಹಚ್ಚಿದ್ದಾನೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ರಾಯ್‌ಪುರದ ಉರ್ಲಾ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ಕಂಡು ಬಂದಿದ್ದು ಈತನ ವರ್ತನೆ ಸ್ಥಳದಲ್ಲಿದ್ದ ಸಿಬ್ಬಂದಿ ಮತ್ತು ಗ್ರಾಹಕರಲ್ಲಿ ಭಯಭೀತಿಯನ್ನು ಉಂಟುಮಾಡುತ್ತದೆ. ಗುರುವಾರ ಸಂಜೆ ಧರ್ಮೇಂದ್ರ ಕ್ಷತ್ರಿ ಮತ್ತು ಇಮ್ರಾನ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಪೆಟ್ರೋಲ್ ಪಂಪ್‌ಗೆ ಇಂಧನ ಹಾಕಿಸಲು ಬಂದಿದ್ದಾರೆ. ಈ ವೇಳೆ ಧರ್ಮೇಂದ್ರ ಎಂಬಾತ ಪೆಟ್ರೋಲ್ ಟ್ಯಾಂಕ್ ತೆರೆದಿದ್ದಾಗಲೇ ಸಿಗರೇಟ್ ಹಚ್ಚಲು ಮುಂದಾಗಿದ್ದಾನೆ.
ವಿಡಿಯೋ ನೋಡಿ:
A puff of #cigarette nearly turned into a fireball at #Chhattisgarh's #Raipur petrol pump after a youth allegedly set a fuel nozzle ablaze using a lighter when asked not to smoke, that triggered flames on a motorcycle and pump. Amid panic, the pump staff averted a major disaster… pic.twitter.com/gMpE1iPGD2
— The Times Of India (@timesofindia) February 20, 2026
ಪೆಟ್ರೋಲ್ ಬಂಕ್ ಸಿಬ್ಬಂದಿ ಇದನ್ನು ಗಮನಿಸಿ, ಸುರಕ್ಷತೆಯ ದೃಷ್ಟಿಯಿಂದ ಸಿಗರೇಟ್ ಸೇದದಂತೆ ಬುದ್ದಿ ಹೇಳಿದ್ದಾನೆ.ಈ ಸಂದರ್ಭದಲ್ಲಿ ಕೋಪದಲ್ಲಿ ಆತ ಇಂಧನ ನಳಿಕೆಯ ಪೈಪ್‌ಗೆ ಬೆಂಕಿ ಹಚ್ಚಲು ಲೈಟರ್ ಬಳಸಿದ್ದಾರೆ. ತನ್ನ ಬಳಿಯಿದ್ದ ಲೈಟರ್‌ನಿಂದ ಪೆಟ್ರೋಲ್ ಹೊರಬರುತ್ತಿದ್ದ ಪೈಪ್‌ಗೇ ನೇರವಾಗಿ ಬೆಂಕಿ ಹಚ್ಚಿಸಿದ್ದಾನೆ.
Viral Video: ಏಕಾಏಕಿ ಮಹಿಳೆ ಮೇಲೆ ದಾಳಿ ಮಾಡಿದ ಸಾಕು ನಾಯಿ; ಸಂತ್ರಸ್ತೆಗೇ ಕಪಾಳ ಮೋಕ್ಷ ಮಾಡಿದ ಮಾಲಕಿ! ವಿಡಿಯೋ ನೋಡಿ
ಬೆಂಕಿ ಹಚ್ಚಿದ ತಕ್ಷಣ ಪೆಟ್ರೋಲ್ ಪೈಪ್ ಮತ್ತು ಬೈಕ್ ಎರಡಕ್ಕೂ ಬೆಂಕಿ ಹಿಡಿದುಕೊಂಡಿದೆ. ವಿಡಿಯೋದಲ್ಲಿ ಬೆಂಕಿ ಇದ್ದಕ್ಕಿದ್ದಂತೆ ಉರಿಯುತ್ತಿರುವುದನ್ನು ತೋರಿಸಲಾಗಿದೆ. ಇದು ಬೈಕ್ ಇಂಧನ ಟ್ಯಾಂಕ್ ಮತ್ತು ಪಂಪ್ ಯಂತ್ರಕ್ಕೆ ವೇಗವಾಗಿ ಹರಡುತ್ತಿದೆ. ಕೆಲವು ಉದ್ವಿಗ್ನ ಕ್ಷಣಗಳವರೆಗೆ, ಪರಿಸ್ಥಿತಿ ನಿಯಂತ್ರಣ ತಪ್ಪಿದಂತೆ ಕಂಡುಬಂದಿದೆ. ಈ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.
ಬೆಂಕಿ ಕೆನ್ನಾಲಿಗೆ ಚಾಚುತ್ತಿದ್ದಂತೆ ಬಂಕ್ ಸಿಬ್ಬಂದಿ, ತಕ್ಷಣವೇ ಮುಖ್ಯ ಪೆಟ್ರೋಲ್ ಸರಬರಾಜನ್ನು ಆಫ್ ಮಾಡಿದ್ದಾರೆ. ನಂತರ ಅಲ್ಲಿದ್ದ ಅಗ್ನಿಶಾಮಕ ಉಪಕರಣಗಳನ್ನು ಬಳಸಿ ಬೆಂಕಿಯನ್ನು ನಂದಿಸಿದ್ದಾರೆ. ಪಂಪ್ ಮ್ಯಾನೇಜರ್ ಸಲ್ಲಿಸಿದ ದೂರು ಮತ್ತು ಸ್ಥಳದಿಂದ ಬಂದ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಉರ್ಲಾ ಪೊಲೀಸರು ಕಾರ್ಯಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.