ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮುಂಬೈ ಲೋಕಲ್‌ ರೈಲಿನಲ್ಲಿ ಹೃದಯ ಸ್ಪರ್ಶಿ ಕ್ಷಣ: ಗರ್ಭಿಣಿಗೆ ಸೀಮಂತ ಶಾಸ್ತ್ರದ ಸಂಭ್ರಮ

Viral Video: ಮುಂಬೈ ಲೋಕಲ್ ರೈಲಿನೊಳಗೆ ಹೃದಯಸ್ಪರ್ಶಿ ಕ್ಷಣವೊಂದು ನೆಟ್ಟಿಗರ ಗಮನ ಸೆಳೆದಿದೆ. ಗರ್ಭಿಣಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಹ ಪ್ರಯಾಣಿಕರು ಒಟ್ಟಾಗಿ ಸೇರಿ ಸೀಮಂತ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಮುಂಬೈ ಟ್ರೈನ್‌ನಲ್ಲಿ ಮಹಿಳೆಗೆ ಸೀಮಂತ ಶಾಸ್ತ್ರ

ಮಹಿಳೆಗೆ ಸೀಮಂತ ಶಾಸ್ತ್ರ ಮಾಡಿದ ಪ್ರಯಾಣಿಕರು -

Profile
Pushpa Kumari Feb 16, 2026 3:53 PM

ಮುಂಬೈ, ಫೆ. 16: ಸಾರ್ವಜನಿಕ ಪ್ರಯಾಣದಲ್ಲಿ ಹಲವು ದೃಶ್ಯಗಳು ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ‌ ಬಿಎಂಟಿಸಿ ಬಸ್‍ನಲ್ಲಿ ನಾಯಿಯೊಂದು ಪ್ರಯಾಣ ಮಾಡಿದ ವಿಡಿಯೊ ಭಾರಿ ವೈರಲ್ ಆಗಿತ್ತು. ಈ ನಡುವೆ ಮುಂಬೈ ಲೋಕಲ್ ರೈಲಿನೊಳಗೆ ಹೃದಯಸ್ಪರ್ಶಿ ಕ್ಷಣವೊಂದು ಇಂಟರ್‌ನೆಟ್‌ನ ಗಮನ ಸೆಳೆಯಿತು. ಗರ್ಭಿಣಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಹ ಪ್ರಯಾಣಿಕರು ಒಟ್ಟಾಗಿ ಸೇರಿ ಸೀಮಂತ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.

ಸಾಮಾನ್ಯವಾಗಿ ರೈಲು ಪ್ರಯಾಣದಲ್ಲಿ ಕಿಕ್ಕಿರಿದ ಜನ, ಕೂರಲು ಸೀಟುಗಳಿಲ್ಲದೆ ತಮ್ಮ ಫ್ಲಾರ್ಟ್ ಪಾರ್ಮ್‌ನಲ್ಲಿ ಇಳಿಯಲು ಕಾಯುತ್ತಿರುತ್ತಾರೆ. ಆದರೆ ಮುಂಬೈ ಲೋಕಲ್ ಟ್ರೈನ್‌ನ ಸ್ಥಿತಿ ಹಾಗಿರಲಿಲ್ಲ. ರೈಲು ಕೋಚ್ ಅನ್ನು ಬಗೆ ಬಗೆಯ ಹೂವಿನಿಂದ ಬಲೂನ್‌ಗಳು ಮತ್ತು ಹರ್ಷಚಿತ್ತದಿಂದ ಕೂಡಿದ ಬ್ಯಾನರ್‌ಗಳಿಂದ ಅಲಂಕರಿಸಲಾಗಿತ್ತು. ಈ ಟ್ರೈನ್ ಪ್ರಮಾಣಿಕರ ಸಂಭ್ರಮದ ಭಾಗವಾಗಿ ಮೂಡಿಬಂದಿತ್ತು. ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದ ಭಾವಿ ತಾಯಿ, ಸಹ ಪ್ರಯಾಣಿಕರ ಜೊತೆ ಸಂತೋಷದಿಂದ ಕುಳಿತಿದ್ದರು.

ವಿಡಿಯೊ ನೋಡಿ:

ರೈಲು ಪ್ರಯಾಣದ ವೇಳೆ ಮಹಿಳೆಯ ಸೀಮಂತವನ್ನು ನೆರವೇರಿಸಲಾಗಿದೆ. ಮಹಿಳೆಯರು ಅವಳ ಹಣೆಯ ಮೇಲೆ ಕುಂಕುಮವನ್ನು ಹಚ್ಚಿದರು, ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ‌ಆಶೀರ್ವದಿಸಿದರು. ಜನರ ಗದ್ದಲದ ನಡುವೆಯೂ ಗರ್ಭಿಣಿ ಎಲ್ಲರ ಆಕರ್ಷಣೆಗೆ ಒಳಗಾದರು. ಈ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಖುಷಿಪಟ್ಟಿದ್ದಾರೆ. ಕ್ಲಿಪ್ ಈಗಾಗಲೇ 7.81 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ

ಮಗುವಿನ ತೂಕಕ್ಕಿಂತ ಶಾಲಾ ಬ್ಯಾಗ್ ತೂಕವೇ ಹೆಚ್ಚಾಯಿತೇ? ತಂದೆಯ ಭಾವುಕ ಪೋಸ್ಟ್ ವೈರಲ್!

ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಒಬ್ಬರು “ಇದು ಮುಂಬೈ ಲೋಕಲ್‌ ಟ್ರೈನ್‌ನ ಸೌಂದರ್ಯ" ಎಂದಿದ್ದಾರೆ‌. ಮತ್ತೊಬ್ಬರು, ʼʼಇಂತಹ ದೃಶ್ಯ ಮುಂಬೈನಲ್ಲಿ ಮಾತ್ರ ಸಂಭವಿಸಬಹುದುʼʼ ಬರೆದುಕೊಂಡಿದ್ದಾರೆ. ಇನ್ನೊಬ್ಬರು ತಮಾಷೆಯಾಗಿ, “ಕೆಲವು ದಿನದಲ್ಲಿಯೇ ಜನರು ಸ್ಥಳೀಯ ರೈಲಿನಲ್ಲಿಯೇ ಮದುವೆಯಾಗಬಹುದುʼʼ ಎಂದಿದ್ದಾರೆ.