ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನದಿಯಂತಾದ ರಸ್ತೆಗಳು; ಪ್ರವಾಹದಲ್ಲಿ ರೋಗಿಯನ್ನು ಹೆಗಲ ಮೇಲೆ ಹೊತ್ತೊಯ್ದ ಕುಟುಂಬಸ್ಥರು!

ಧಾರಾಕಾರ ಮಳೆಗೆ ಅಹಮದಾಬಾದ್ ನಗರ ಸಂಪೂರ್ಣ ಜಲಾವೃತಗೊಂಡಿದ್ದು, ತುರ್ತು ವೈದ್ಯಕೀಯ ಸೇವೆಗಳಿಗೂ ಹಾದಿಯಿಲ್ಲದೆ ಜನರು ಪರದಾಡುವಂತಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಆಂಬುಲೆನ್ಸ್ ಬರಲಾಗದಿದ್ದಾಗ, ಕುಟುಂಬಸ್ಥರೇ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಹೆಗಲ ಮೇಲೆ ಹೊತ್ತು ಹರಿಯುವ ನೀರಿನಲ್ಲಿ ಸಾಗಿಸಿದ ದಯನೀಯ ಘಟನೆ ನಡೆದಿದೆ.

ಪ್ರವಾಹದಲ್ಲಿ ರೋಗಿಯನ್ನು ಹೆಗಲ ಮೇಲೆ ಹೊತ್ತೊಯ್ದ ಕುಟುಂಬಸ್ಥರು!

ಪ್ರವಾಹದಲ್ಲಿ ರೋಗಿಯನ್ನು ಹೆಗಲ ಮೇಲೆ ಹೊತ್ತಯ್ದ ಕುಟುಂಬ -

Vishakha Bhat Heggar
Vishakha Bhat Heggar Sep 16, 2026 4:26 PM

ಅಹಮದಾಬಾದ್: ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸುರಿದ ಭಾರಿ ಮಳೆಯಿಂದ ನಗರವೇ ಕೆರೆಯಂತಾಗಿದೆ . ಸತತ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ದಿನನಿತ್ಯದ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ಮಳೆನೀರು ತುಂಬಿ ಹರಿಯುತ್ತಿರುವುದರಿಂದ ಕನಿಷ್ಠ ತುರ್ತು ವೈದ್ಯಕೀಯ ಸೇವೆಗಳೂ ಸಿಗದಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ಬರಲಾಗದೆ (Viral Video) ಕುಟುಂಬವೊಂದು ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಹೆಗಲ ಮೇಲೆ ಹೊತ್ತು ನೀರಿನಲ್ಲಿ ಸಾಗಿಸಿದ ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ. ಹೃದಯ ವಿದ್ರಾವಕವಾದ ಈ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಮನಕಲಕುವಂತಿದೆ.

ಅಹಮದಾಬಾದ್‌ನ ಮಣಿಪುರ ಗ್ರಾಮದ ಬಳಿ ಇರುವ ರೈಲ್ವೆ ಅಂಡರ್‌ಪಾಸ್‌ ಸಂಪೂರ್ಣವಾಗಿ ಮಳೆ ನೀರಿನಿಂದ ಜಲಾವೃತಗೊಂಡಿತ್ತು. ಇದರಿಂದಾಗಿ ಗ್ರಾಮದ ಸಂಪರ್ಕ ಕಡಿತಗೊಂಡಿದ್ದು, ತುರ್ತು ಚಿಕಿತ್ಸೆ ಅಗತ್ಯವಿದ್ದ ರೋಗಿಯೊಬ್ಬರನ್ನು ಕರೆದೊಯ್ಯಲು ಬಂದ್‌ ಆಂಬುಲೆನ್ಸ್‌ ಅಂಡರ್‌ಪಾಸ್‌ನ ಇನ್ನೊಂದು ಬದಿಯಲ್ಲೇ ನಿಲ್ಲಬೇಕಾಯಿತು. ನೀರು ಹೆಚ್ಚಾಗಿದ್ದರಿಂದ ವಾಹನ ಗ್ರಾಮಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ವಿಡಿಯೋ ನೋಡಿ



ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ ಮತ್ತು ಯಾವುದೇ ಪರ್ಯಾಯ ವಾಹನ ಸೌಕರ್ಯ ವಿಲ್ಲದ ಕಾರಣ, ಕುಟುಂಬಸ್ಥರು ಕ್ಷಣವು ತಡಮಾಡದೆ ಧೈರ್ಯ ಮಾಡಿ ರೋಗಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಒಳಚರಂಡಿ ನೀರು ತುಂಬಿರುವ ಕೊಳಚೆ ನೀರಿನಲ್ಲೇ ರೋಗಿಯನ್ನು ಹೆಗಲ ಮೇಲೆ ಹೊತ್ತುಕೊಂಡು ರಸ್ತೆಯ ಆಚೆ ಬದಿಯಲ್ಲಿದ್ದ ಆಂಬುಲೆನ್ಸ್‌ಗೆ ತಲುಪಿಸಿದ್ದಾರೆ.

ರೈಲ್ವೆ ಹಳಿಗಳ ನಡುವೆ ಸಿಲುಕಿಕೊಂಡ ಒಂಟೆ: ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ; ರಕ್ಷಣಾ ಕಾರ್ಯಾಚರಣೆಯ ವಿಡಿಯೊ ವೈರಲ್‌

ನಗರಸಭೆ ಕಾಮಗಾರಿ ವಿರುದ್ಧ ಆಕ್ರೋಶ

ಈ ಕರುಣಾಜನಕ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ. ಸ್ಮಾರ್ಟ್‌ ಸಿಟಿ ಮತ್ತು ಮೂಲಸೌಕರ್ಯಗಳ ಬಗ್ಗೆ ದೊಡ್ಡ ಮಟ್ಟದ ಭರವಸೆ ನೀಡುವ ಸ್ಥಳೀಯ ಆಡಳಿತದ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಳೆ ನೀರು ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇಂತಹ ದುಸ್ಥಿತಿಗೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಸಾಮಾನ್ಯವಾಗಿ ಮಳೆಯಾದ ತಕ್ಷಣವೇ ರಸ್ತೆಗಳು ಕೆರೆಗಳಾಗಿ ಮಾರ್ಪಡುತ್ತಿದ್ದು, ತುರ್ತು ಸಮಯದಲ್ಲಿ ಆಂಬುಲೆನ್ಸ್‌ ಹಾಗೂ ಇತರ ಅಗತ್ಯ ಸೇವೆಗಳು ಸಿಗದೆ ಸಾರ್ವಜನಿಕರು ಜೀವನವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.