Viral Video: ಆರ್‌ಟಿಒ ಕಚೇರಿ ಎದುರು ಹೈಡ್ರಾಮಾ; ಕರೆಂಟ್ ವೈರ್ ಸ್ಪರ್ಶಿಸಿ ಆತ್ಮಹತ್ಯೆಗೆ ಯತ್ನ-ವಿಡಿಯೊ ನೋಡಿ
ಸಾರಿಗೆ ಅಧಿಕಾರಿಗಳು ಲಂಚಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಲಾರಿ ಮಾಲೀಕನೊಬ್ಬ ಪೆದ್ದಪಲ್ಲಿ ಆರ್‌ಟಿಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಲಾರಿಯ ಮೇಲೆ ಹತ್ತಿ ಕರೆಂಟ್ ವೈರ್ ಅನ್ನು ಮುಟ್ಟುವುದಾಗಿ ಬೆದರಿಕೆ ಹಾಕಿದ್ದಾನೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಹೈದರಾಬಾದ್: ಸಾರಿಗೆ ಅಧಿಕಾರಿಗಳು ಲಂಚಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಲಾರಿ ಮಾಲೀಕನೊಬ್ಬ ಪೆದ್ದಪಲ್ಲಿ ಆರ್‌ಟಿಒ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈತ ಲಾರಿ ಮೇಲೆ ಹತ್ತಿ ಕರೆಂಟ್ ವೈರ್ ಮುಟ್ಟಿ ಆತ್ಮಹತ್ಯೆಗೆ ಮಾಡಿಕೊಳ್ಳಲು ಯತ್ನಿಸಿದ್ದು, ಆರ್ ಟಿಒ ಕಚೇರಿ ಎದುದು ಹೈಡ್ರಾಮ ನಡೆದಿತ್ತು. ಇನ್ನು ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗಿದ್ದು, ನೆಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಲಾರಿ ಮಾಲೀಕನನ್ನು ಅನಿಲ್ ಗೌಡ್ ಎಂದು ಗುರುತಿಸಲಾಗಿದೆ. ಈತ ತನ್ನ ಲಾರಿಯ ಮೇಲೆ ವೈರ್‌ಗಳನ್ನು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ. ಅದರ ಜೊತೆಗೆ ಅಧಿಕಾರಿಗಳ ಮೇಲೆ ಕೋಪಗೊಂಡ ಆತ ತನ್ನ ಲಾರಿಯ ಮೇಲಿನಿಂದ ಹಣವನ್ನು ಎಸೆದಿದ್ದಾನೆ.
లంచం పేరుతో ఆర్టీఓ అధికారులు వేధిస్తున్నారని లారీ ఓనర్ నిరసన
— Telugu Scribe (@TeluguScribe) February 16, 2025
పెద్దపల్లి ఆర్టీఓ కార్యాలయం ఎదుట కరెంటు తీగలు పట్టుకుంటానని లారీ పైకి ఎక్కి లారీ ఓనర్ అనిల్ గౌడ్ నిరసన
ఆర్టీఓ అధికారులకు మామూలు ఇవ్వనందుకు తన లారిపైన అక్రమ కేసు పెట్టారని, నెలకు ఒక్కో లారీ నుండి రూ.8000 లంచం… pic.twitter.com/f0hpJnxIAS
ಆರ್‌ಟಿಒ ಅಧಿಕಾರಿಗಳು ಪ್ರತಿ ಲಾರಿ ಮಾಲೀಕರಿಂದ ಮಾಸಿಕ 8,000 ರೂ.ಗಳ ಲಂಚವನ್ನು ಕೇಳುತ್ತಿದ್ದಾರೆ ಎಂದು ಅನಿಲ್ ಗೌಡ್ ಹೇಳಿದ್ದಾನೆ. ಅವನು ಪಾವತಿಸಲು ನಿರಾಕರಿಸಿದ್ದರಿಂದ, ಅಧಿಕಾರಿಗಳು ತನ್ನ ವಾಹನದ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಅವನು ಆರೋಪಿಸಿದ್ದಾನೆ. ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿದ್ದರೂ, ಅವನ ಲಾರಿಯನ್ನು ಅನ್ಯಾಯವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಆತ ಆರೋಪಿಸಿದ್ದಾನೆ. ಇದರಿಂದ ಮನನೊಂದ ಅನಿಲ್ ಗೌಡ್ ಲಾರಿ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದಾಖಲೆಗಳಿದ್ದರೂ ಅವನ ವಿರುದ್ಧ ಏಕೆ ಪ್ರಕರಣ ದಾಖಲಿಸಲಾಗಿದೆ ಎಂದು ಆತ ಆರ್‌ಟಿಒ ಅಧಿಕಾರಿಗಳನ್ನು ಪ್ರಶ್ನಿಸಿದ್ದಾನೆ.
ಪ್ರತಿಭಟನೆಯ ನಂತರ, ಅನಿಲ್ ಗೌಡ್ ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾನೆ. ತನ್ನ ಲಾರಿಯನ್ನು ಬಿಡುಗಡೆ ಮಾಡಬೇಕು ಮತ್ತು ತನಗೆ ನ್ಯಾಯ ಒದಗಿಸಬೇಕು ಎಂದು ಆತ ಒತ್ತಾಯಿಸಿದ್ದಾನೆ.
ಈ ಹಿಂದೆ ಹೈ ವೋಲ್ಟೇಜ್ ಕರೆಂಟ್ ವೈರ್ ಸ್ಪರ್ಶಿಸಿ ವ್ಯಕ್ತಿಯೋರ್ವ ಸಜೀವ ದಹನವಾದ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಡೆದಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ರೈಲ್ವೆ ನಿಲ್ದಾಣದಲ್ಲಿ ರೈಲಿನ ಮೇಲೆ ಹತ್ತಿದ ನಂತರ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು ವಿಡಿಯೊದಲ್ಲಿ ಸೆರೆಯಾಗಿತ್ತು. ನಂತರ ವ್ಯಕ್ತಿಯು ಕರೆಂಟ್ ವೈರ್ ಅನ್ನು ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ವಿಪರ್ಯಾಸವೆಂದರೆ, ಈ ಪ್ರದೇಶದಲ್ಲಿ ಸಾಕಷ್ಟು ಜನರು ಇದ್ದರೂ ಕೂಡ ಅದನ್ನು ತಡೆಯುವ ಬದಲು, ಕೆಲವರು ಘಟನೆಯ ವಿಡಿಯೊ ಮಾಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಫೋಟೋ ಕ್ಲಿಕ್ಕಿಸಿದ ಟ್ರಾಫಿಕ್‌ಗೆ ಟೆಂಪೋ ಚಾಲಕ ಫುಲ್ ಆವಾಜ್; ವಿಡಿಯೊ ವೈರಲ್
ಟ್ರಾಫಿಕ್ ಪೊಲೀಸ್ ಮತ್ತು ಟೆಂಪೋ ಡ್ರೈವರ್ ನಡುವೆ ಮಾತಿನ ಚಕಮಕಿ
ಇತ್ತೀಚೆಗೆ ಟ್ರಾಫಿಕ್ ಪೊಲೀಸ್ ಮತ್ತು ಟೆಂಪೋ ಡ್ರೈವರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟೆಂಪೋ ಫೋಟೊವನ್ನು ಟ್ರಾಫಿಕ್ ಪೊಲೀಸ್ ತನ್ನ ಮೊಬೈಲ್ ಫೋನ್‍ನಲ್ಲಿ ಕ್ಲಿಕಿಸಿಕೊಂಡಾಗ ಅದಕ್ಕೆ ಟೆಂಪೋ ಚಾಲಕ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಇದರಿಂದ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಟ್ರಾಫಿಕ್ ಪೊಲೀಸ್ ತನ್ನ ಫೋನ್‍ನಲ್ಲಿದ್ದ ಪೋಟೊವನ್ನು ಡಿಲೀಟ್ ಮಾಡಿದ ನಂತರ ಈ ಜಗಳ ಕೊನೆಗೊಂಡಿದೆ.
ಟ್ರಾಫಿಕ್ ಪೊಲೀಸ್ ಮತ್ತು ಟೆಂಪೋ ಡ್ರೈವರ್ ನಡುವಿನ ಮಾತಿನ ಚಕಮಕಿಯನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ ಟೆಂಪೋ ಫೋಟೊವನ್ನು ಟ್ರಾಫಿಕ್ ಪೊಲೀಸ್ ತೆಗೆದುಕೊಂಡಿದ್ದಾನೆ. ಈ ಘಟನೆಯನ್ನು ತನ್ನ ಫೋನ್‍ನಲ್ಲಿ ರೆಕಾರ್ಡ್ ಮಾಡಿದ ಟೆಂಪೋ ಚಾಲಕ ಫೋಟೋ ತೆಗೆದುಕೊಂಡ ನಂತರ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ.