Viral Video: ಫೋಟೋ ಕ್ಲಿಕ್ಕಿಸಿದ ಟ್ರಾಫಿಕ್‌ಗೆ ಟೆಂಪೋ ಚಾಲಕ ಫುಲ್ ಆವಾಜ್; ವಿಡಿಯೊ ವೈರಲ್
ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟೆಂಪೋ ಫೋಟೊವನ್ನು ಟ್ರಾಫಿಕ್ ಪೊಲೀಸ್ ತನ್ನ ಮೊಬೈಲ್ ಫೋನ್‍ನಲ್ಲಿ ಕ್ಲಿಕಿಸಿಕೊಂಡಿದ್ದಕ್ಕೆ ಟೆಂಪೋ ಚಾಲಕ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಪೊಲೀಸರು ಪೋಟೊವನ್ನು ಡಿಲೀಟ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

traffic police viral video

ಇತ್ತೀಚೆಗೆ ಟ್ರಾಫಿಕ್ ಪೊಲೀಸ್ ಮತ್ತು ಟೆಂಪೋ ಡ್ರೈವರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟೆಂಪೋ ಫೋಟೊವನ್ನು ಟ್ರಾಫಿಕ್ ಪೊಲೀಸ್ ತನ್ನ ಮೊಬೈಲ್ ಫೋನ್‍ನಲ್ಲಿ ಕ್ಲಿಕಿಸಿಕೊಂಡಾಗ ಅದಕ್ಕೆ ಟೆಂಪೋ ಚಾಲಕ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಇದರಿಂದ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಟ್ರಾಫಿಕ್ ಪೊಲೀಸ್ ತನ್ನ ಫೋನ್‍ನಲ್ಲಿದ್ದ ಪೋಟೊವನ್ನು ಡಿಲೀಟ್ ಮಾಡಿದ ನಂತರ ಈ ಜಗಳ ಕೊನೆಗೊಂಡಿದೆ.
ಟ್ರಾಫಿಕ್ ಪೊಲೀಸ್ ಮತ್ತು ಟೆಂಪೋ ಡ್ರೈವರ್ ನಡುವಿನ ಮಾತಿನ ಚಕಮಕಿಯನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ ಟೆಂಪೋ ಫೋಟೊವನ್ನು ಟ್ರಾಫಿಕ್ ಪೊಲೀಸ್ ತೆಗೆದುಕೊಂಡಿದ್ದಾನೆ. ಈ ಘಟನೆಯನ್ನು ತನ್ನ ಫೋನ್‍ನಲ್ಲಿ ರೆಕಾರ್ಡ್ ಮಾಡಿದ ಟೆಂಪೋ ಚಾಲಕ ಫೋಟೋ ತೆಗೆದುಕೊಂಡ ನಂತರ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಮತ್ತು ಪೊಲೀಸರ ಬಳಿ ಅವರು ಟೆಂಪೋ ಫೋಟೊವನ್ನು ಏಕೆ ತೆಗೆದುಕೊಂಡಿದ್ದೀರಿ? ಎಂದು ಕೇಳಿದ್ದಾನೆ.
Mumbai : Kandivali Viral Video @MTPHereToHelp
— MUMBAI TV (@tv_mumbai) January 28, 2025
Upload Date 28 Jan 2025 #mumbai #kandivali #mumbaipolice #viral #viralvideo pic.twitter.com/dSDYFJq7Ed
ಟ್ರಾಫಿಕ್ ಪೋಲೀಸ್ ಆರಂಭದಲ್ಲಿ ಟೆಂಪೋ ಚಾಲಕನ ಪ್ರಶ್ನೆಗೆ ಉತ್ತರ ನೀಡಲು ಆಗದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಟೆಂಪೋ ಡ್ರೈವರ್ ತನ್ನ ವಿಡಿಯೊ ಕ್ಯಾಮೆರಾವನ್ನು ಆನ್ ಮಾಡಿದ್ದಾನೆ ಎಂದು ತಿಳಿದಾಗ, ಅವನನ್ನು ಶಾಂತಗೊಳಿಸಲು ಮುಂದೆ ಬಂದಿದ್ದಾನೆ.ಕೊನೆಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಟ್ರಾಫಿಕ್ ಪೊಲೀಸ್ ತನ್ನ ಫೋನ್‌ನಲ್ಲಿದ್ದ ಟೆಂಪೋದ ಫೋಟೋವನ್ನು ಚಾಲಕನಿಗೆ ತೋರಿಸಿ ಕೊನೆಗೆ ಅದನ್ನು ಡಿಲೀಟ್ ಮಾಡಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಪ್ಲೀಸ್ ಬಿಟ್ಬಿಡಿ ಸರ್... ವಾಪಸ್ ಬರ್ತಾ ಸ್ವೀಟ್ ತರುತ್ತೀನಿ....ಟ್ರಾಫಿಕ್ ಪೊಲೀಸ್‌ಗೆ ವಧುವಿನ ಮನವಿ
ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಮುಂಬೈ ಸಂಚಾರ ಪೊಲೀಸರು ಈ ವಿಷಯದ ಬಗ್ಗೆ ಸಂಬಂಧಪಟ್ಟ ಸಂಚಾರ ವಿಭಾಗಕ್ಕೆ ಮಾಹಿತಿ ನೀಡಲಾಗಿದೆ ಎಂದು ದೃಢಪಡಿಸಿದ್ದಾರೆ. ಮುಂಬೈ ಟ್ರಾಫಿಕ್ ಪೊಲೀಸರ ಅಧಿಕೃತ ಹ್ಯಾಂಡಲ್‍ನ ಕಾಮೆಂಟ್‍ನಲ್ಲಿ, "ನಾವು ಸಂಬಂಧಪಟ್ಟ ಸಂಚಾರ ವಿಭಾಗಕ್ಕೆ ಮಾಹಿತಿ ನೀಡಿದ್ದೇವೆ" ಎಂದು ಬರೆಯಲಾಗಿದೆ. ಈ ವಿಷಯದಲ್ಲಿ ಯಾವುದೇ ಕಾನೂನು ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ.