ಸೀರೆ ಬದಲು ಶಾರ್ಟ್ಸ್- ಟಿ ಶರ್ಟ್ ಧರಿಸಿದ ಪತ್ನಿಯ ವಿರುದ್ಧ ಪತಿಯ ಅಸಮಾಧಾನ: ವಿಡಿಯೊ ಇಲ್ಲಿದೆ
Viral Video: ಮನೆಯಲ್ಲಿ ಪತ್ನಿ ಸರಿಯಾದ ಡ್ರೆಸ್ ಧರಿಸುವುದಿಲ್ಲ ಎಂದು ಪತಿಯೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಆಕೆ ಸಾಂಪ್ರದಾಯಿಕ ಉಡುಪು ಧರಿಸಿ, ಸಿಂದೂರ ಇಟ್ಟುಕೊಳ್ಳದ ಕಾರಣ ಮನೆಗೆ ಹೋಗಲು ಉತ್ಸಾಹ ಇಲ್ಲ ಎಂದು ಪತಿ ದೂರಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಪುರುಷ ಪೃದಾನ ಸಮಾಜದ ಮನಸ್ಥಿತಿ ಎಂದಿದ್ದಾರೆ.
ಪತ್ನಿಯ ಡ್ರೆಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪತಿ -
ನವದೆಹಲಿ, ಏ. 22: ಇತ್ತೀಚೆಗೆ ದಾಂಪತ್ಯದಲ್ಲಿ ಸಣ್ಣ ವಿಚಾರಕ್ಕೆ ಮನಸ್ತಾಪ ಉಂಟಾಗುವ ಪ್ರಕರಣ ಹೆಚ್ಚಾಗುತ್ತಿವೆ. ಖರ್ಚು ವೆಚ್ಚದ ವಿಚಾರ, ಸಂಸಾರ ಹೊಂದಾಣಿಕೆ ಹೀಗೆ ನಾನಾ ಕಾರಣಕ್ಕೆ ಜಗಳ ಉಂಟಾಗಿ ಬಿರುಕು ಮೂಡುತ್ತದೆ. ಇದೀಗ ಮನೆಯಲ್ಲಿ ಪತ್ನಿ ಸರಿಯಾದ ಡ್ರೆಸ್ ಧರಿಸುವುದಿಲ್ಲ ಎಂದು ಪತಿಯೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಆಕೆ ಸಾಂಪ್ರದಾಯಿಕ ಉಡುಪು, ಸಿಂಧೂರ ಹಾಕದ ಕಾರಣ ಮನೆಗೆ ಹೋಗಲು ಉತ್ಸಾಹ ಇಲ್ಲ ಎಂದು ಪತಿ ದೂರಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.
ಮನೆಯಲ್ಲಿ ಪತ್ನಿ ಉಡುಪಿನ ಬಗ್ಗೆ ಪತಿಯ ಅತೃಪ್ತಿಯನ್ನು ಕೇಂದ್ರೀಕರಿಸಿದ ವಿಡಿಯೊ ಚರ್ಚೆಗೆ ಕಾರಣವಾಗಿದೆ. ಮನೆಯಲ್ಲಿ ತನ್ನ ಪತ್ನಿ ಸರಿಯಾಗಿ ಆಲಂಕಾರ ಮಾಡಿಕೊಳ್ಳುವುದಿಲ್ಲ ಮತ್ತು ಸಾಂಪ್ರದಾಯಿಕ ಬಟ್ಟೆ ಧರಿಸುವುದಿಲ್ಲ ಎಂದು ಪತಿ ವಿಡಿಯೊದಲ್ಲಿ ದೂರಿದ್ದಾನೆ. ಪತ್ನಿಯ ನೋಟದ ಬಗ್ಗೆ ನಿರಾಶೆ ವ್ಯಕ್ತಪಡಿಸುತ್ತಿರುವ ಪತಿ, ಆಕೆ ಸಾಂಪ್ರದಾಯಿಕ ಉಡುಪು, ಆಲಂಕಾರ ಮಾಡದ ಕಾರಣ ಮನೆಗೆ ಹೋಗಲು ಮನಸ್ಸು ಬರುವುದಿಲ್ಲ ಎಂದು ಹೇಳಿದ್ದಾನೆ.
ವಿಡಿಯೊ ನೋಡಿ
🚨 Husband’s Homecoming Nightmare: Expectations Shattered Upon Seeing Wife
— Ramesh Tiwari (@rameshofficial0) April 20, 2026
Husband : 'Isliye ghar aane ka man nahi karta "kya nikkar me jindgi gujar deni hai na sindoor na make up ,
He rushed home for his radiant bride, but her messy, neglected look killed the spark.
No… pic.twitter.com/WJVRxKPMRf
ಆ ವ್ಯಕ್ತಿ, ʼʼನನಗೆ ಮನೆಗೆ ಬರಲು ಮನಸ್ಸಿಲ್ಲ. ನೀನು ಶಾರ್ಟ್ಸ್ ಮತ್ತು ಟಿ-ಶರ್ಟ್‌ನಲ್ಲಿ ಜೀವನವನ್ನು ಕಳೆಯಲು ಬಯಸುತ್ತೀಯಾ? ಗಂಡ ಒಂದು ತಿಂಗಳ ನಂತರ ಕೆಲಸದಿಂದ ಮನೆಗೆ ಬರುತ್ತಾನೆ. ಅವನಿಗೆ ಮನೆಗೆ ಹೋಗಿ ತನ್ನ ಹೆಂಡತಿಯನ್ನು ನೋಡುವಾಗ ಸುಂದರ ಎನಿಸಬೇಕು. ಯಾವಾಗಲೂ ಶಾರ್ಟ್ಸ್ ಮತ್ತು ಟಿ-ಶರ್ಟ್ ಹಾಕಿದರೆ ನನಗೆ ನೀನು ನನ್ನ ಪತ್ನಿ ಎನ್ನುವ ಭಾವನೆಯೇ ಬರುವುದಿಲ್ಲ. ನಾನು ಯಾವುದೋ ಹಾಸ್ಟೆಲ್‌ಗೆ ಶಾಲೆಗೆ ಬಂದಂತೆ ಭಾಸವಾಗುತ್ತಿದೆʼʼ ಎಂದು ಪತಿ ವಿಡಿಯೊದಲ್ಲಿ ಹೇಳಿದ್ದಾನೆ.
ಪ್ರಧಾನಿಗೆ ಸ್ವಾಗತ ಕೋರಲು ಅಳವಡಿಸಿದ್ದ ಹೂಕುಂಡಗಳನ್ನೇ ಕದ್ದೊಯ್ದ ಕಿಡಿಗೇಡಿಗಳು!
ಪತ್ನಿ ಸರಿಯಾದ ಡ್ರೆಸ್ ಹಾಗೂ ಸಿಂದೂರ ಇಟ್ಟುಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಆದಾಗ್ಯೂ, ವಿಡಿಯೊ ಆನ್‌ಲೈಮ್‌ನಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಕೆಲವರು ಪತಿಯ ದೃಷ್ಟಿಕೋನವನ್ನು ಖಂಡಿಸಿದ್ದಾರೆ. “ಪ್ರೀತಿಯು ಸಿಂದೂರ ಅಥವಾ ಮೇಕಪ್ ಮೂಲಕ ವ್ಯಕ್ತವಾಗುವುದಿಲ್ಲ.ಇದು ಪರಸ್ಪರ ಪ್ರಯತ್ನ ಮತ್ತು ಗೌರವದ ಮೇಲೆ ನಿಂತಿದೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನೆಟ್ಟಿಗರೊಬ್ಬರು ಯಾವುದಕ್ಕೂ ಮೊದಲು "ಅವನು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿ ಕೊಳ್ಳಬೇಕು" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಪತ್ನಿಯು ಮನೆಯ ಲಕ್ಷ್ಮೀ ಇದ್ದಂತೆ. ಸಂಪ್ರದಾಯ ನಿಜಕ್ಕೂ ಮುಖ್ಯವಾಗುತ್ತದೆʼʼ ಎಂದು ವ್ಯಕ್ತಿಯ ಪರ ಮಾತನಾಡಿದ್ದಾರೆ. ಪತಿ-ಪತ್ನಿ ಸಂಬಂಧವು ಮೇಕಪ್ ಅಥವಾ ಬಟ್ಟೆಗಳಿಂದ ಉಳಿಯುವುದಿಲ್ಲ. ಅದು ಎರಡೂ ಕಡೆಯ ಗೌರವ, ಭಾವನಾತ್ಮಕ ಸಂಪರ್ಕದ ಮೇಲೆ ನಿರ್ಮಿಸಲ್ಪಟ್ಟಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಮನೆಯಲ್ಲಿ ನೈಟಿ ಧರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪತಿ!
ಇದೇ ರೀತಿಯ ಘಟನೆ ನಮ್ಮ ರಾಜ್ಯದಲ್ಲೂ ನಡೆದಿದೆ. ಮನೆಯಲ್ಲಿ ಸೀರೆ ಬದಲು ನೈಟಿ ಧರಿಸಿದ್ದಕ್ಕೆ ಪತ್ನಿಗೆ ಪತಿರಾಯ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ವರದಿಯಾಗಿದೆ. ಕೃಷ್ಣಾ ಪಾಟೀಲ್ ಎಂಬಾತ ಪತ್ನಿ ಮಂಜುಳಾಗೆ ಬೆಂಕಿ ಹಚ್ಚಿದ್ದು, ಸುಟ್ಟ ಗಾಯಗಳಿಂದ ಬಳಲುತ್ತಿರುವ ಮಂಜುಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.