ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇವಲ 4 ಸೆಂ.ಮೀ. ಮಳೆಗೆ ತತ್ತರಿಸಿ ಹೋದ ಹೈದರಾಬಾದ್; ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿದ ಒದ್ದಾಡಿದ ಪ್ರಯಾಣಿಕರು

Viral News: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಪ್ರಮುಖ ಐಟಿ ವಲಯದಲ್ಲಿ ಸುರಿದ ಮಳೆಯಿಂದಾಗಿ ಜನ ಕಂಗಲಾಗಿ ಹೋಗಿದ್ದಾರೆ. ಕೇವಲ 4 ಸೆಂಟಿ ಮೀಟರ್ ಮಳೆ ಇಡೀ ನಗರದ ಜನರನ್ನು ಭಯಕ್ಕೆ ತಳ್ಳಿದೆ. ಐಟಿ ಕಾರಿಡಾರ್ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತಗೊಂಡು ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು‌. ಸದ್ಯ ಇದರ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮಳೆಯಿಂದಾಗಿ ಮುಳುಗಿದ ಹೈದರಾಬಾದ್

ಮಳೆಗೆ ತತ್ತರಿಸಿ ಹೋದ ಹೈದರಾಬಾದ್ -

Profile
Pushpa Kumari Jun 10, 2026 11:11 PM

ಹೈದರಾಬಾದ್, ಜೂ. 10: ದಕ್ಷಿಣ ಭಾರತದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ತೆಲಂಗಾಣದ ಹೈದರಾಬಾದ್‌ನ ಪ್ರಮುಖ ಐಟಿ ವಲಯದಲ್ಲಿ ಸುರಿದ ಮಳೆಯಿಂದಾಗಿ ಜನ ಕಂಗಲಾಗಿ ಹೋಗಿದ್ದಾರೆ. ಕೇವಲ 4 ಸೆಂಟಿ ಮೀಟರ್ ಮಳೆ ಇಡೀ ನಗರದ ಜನರನ್ನು ಭಯಕ್ಕೆ ತಳ್ಳಿದೆ. ಐಟಿ ಕಾರಿಡಾರ್ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತಗೊಂಡು ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು‌. ಸದ್ಯ ಇದರ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಜೂನ್ 9ರಂದು ಹೈದರಾಬಾದ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವು ಭಾಗಗಳ ರಸ್ತೆಗಳು ಜಲಾವೃತಗೊಂಡವು. ಎಲ್ಲೆಡೆ ಮರಗಳು ಬಿದ್ದಿದ್ದು ದೀರ್ಘ ಸಂಚಾರ ದಟ್ಟಣೆ ಉಂಟಾಯಿತು. ಕೇವಲ 4 ಸೆಂಟಿ ಮೀಟರ್ ಮಳೆ ಜನರನ್ನು ಆತಂಕಕ್ಕೆ ಒಳಪಡಿಸಿದ್ದು ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಸಾವಿರಾರು ಸಾಫ್ಟ್‌ವೇರ್ ಉದ್ಯೋಗಿಗಳು ಮತ್ತು ಸಾರ್ವಜನಿಕರು ತೀವ್ರ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದು ಆಕ್ರೋಶ ಹೊರ ಹಾಕಿದರು.

ವಿಡಿಯೊ ನೋಡಿ:



ಮಳೆಯಿಂದಾಗಿ ನಗರದ ಪಶ್ಚಿಮ ಭಾಗದ ಐಟಿ ಕಾರಿಡಾರ್ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಹೈದರಾಬಾದ್‌ನಾದ್ಯಂತ ಸಂಚಾರಕ್ಕೆ ಅಡ್ಡಿಯಾಗಿದ್ದು ಮಾಧಾಪುರ, ಹೈಟೆಕ್ ಸಿಟಿ, ಗಚಿಬೌಲಿ, ಕೊಂಡಾಪುರ ಮತ್ತು ರಾಯದುರ್ಗ ಸೇರಿ ಐಟಿ ಕಾರಿಡಾರ್‌ನಲ್ಲಿ ಅಸ್ತವ್ಯಸ್ತಗೊಂಡಿತ್ತು.‌ ಮೊದಲ ಮಳೆಯ ಅಭಾವಕ್ಕೆ ಹೈದರಾಬಾದ್ ನಗರವು ಜಲಾವೃತಗೊಂಡಿರುವ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್ ಬುಲ್ ನಾಯಿಯ ಡೆಡ್ಲಿ ಅಟ್ಯಾಕ್‌

ಉದ್ಯೋಗಿಗಳು ಮನೆ ತಲುಪಲು 3 ಗಂಟೆ 45 ನಿಮಿಷ ಬೇಕಾಯಿತು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ವಿಸ್ತೀರ್ಣ ಮಿತಿ ಇಲ್ಲದೆ ಬೃಹತ್ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ನೀಡಿರುವುದರಿಂದ, ರಸ್ತೆಗಳು ಮತ್ತು ಚರಂಡಿಗಳ ಮೇಲೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಒತ್ತಡ ಬಿದ್ದಿದೆ. ಮಳೆಯ ಪರಿಸ್ಥಿತಿಗಳನ್ನು ನಿಭಾಯಿಸಲು ನಗರಕ್ಕೆ ಸರಿಯಾದ ಮೂಲ ಸೌಕರ್ಯ ಮತ್ತು ಉತ್ತಮ ಸಂಚಾರ ನಿರ್ವಹಣೆ ಅಗತ್ಯವಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.