ಹಗಲಿನಲ್ಲೇ ಮಹಿಳೆಯರಿದ್ದ ಆಟೋ ಬೆನ್ನಟ್ಟಿದ ಬೆತ್ತಲೆ ಕಾಮುಕರು! ಸಂತ್ರಸ್ತೆ ಹೇಳಿದ್ದೇನು?
Viral News: ಮಹಿಳೆರ ಕಿರುಕುಳ, ಅತ್ಯಾಚಾರದಂತ ಘಟನೆಗಳು ವರದಿಯಾಗುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ನೋಯ್ಡಾದಲ್ಲಿ ಅಘಾತಕಾರಿ ದೃಶ್ಯವೊಂದು ಕಂಡು ಬಂದಿದೆ. ಮೂವರು ಮಹಿಳೆಯರು ಪ್ರಯಾಣ ಮಾಡುತ್ತಿದ್ದ ಆಟೋ ರೀಕ್ಷಾವನ್ನು ಕಾರಿನಲ್ಲಿ ಬಂದ ಮೂವರು ವಿಕೃತರು ಬೆನ್ನಟ್ಟಿದ್ದಾರೆ. ಅದರಲ್ಲಿ ಇಬ್ಬರೂ ಯುವಕರು ಸಂಪೂರ್ಣ ಬೆತ್ತಲಾಗಿದ್ದರು ಎಂದು ತಿಳಿದು ಬಂದಿದೆ.
ಹಗಲಿನಲ್ಲೇ ಮಹಿಳೆಯರ ಆಟೋ ಬೆನ್ನಟ್ಟಿದ ಬೆತ್ತಲೆ ಕಾಮುಕರು -
ನವದೆಹಲಿ, ಮೇ 23: ಮಹಿಳೆಯರ ಸುರಕ್ಷತೆ ಬಗ್ಗೆ ಈಗಲೂ ಪ್ರಶ್ನೆ ಮಾಡುವಂತಹ ಅನೇಕ ಘಟನೆಗಳು ನಡೆಯುತ್ತಿವೆ. ಮಹಿಳೆಯರ ಮೇಲೆ ಕಿರುಕುಳ, ಅತ್ಯಾಚಾರದಂತ ಘಟನೆಗಳು ವರದಿಯಾಗುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ನೋಯ್ಡಾದಲ್ಲಿ ಅಘಾತಕಾರಿ ದೃಶ್ಯವೊಂದು ಕಂಡು ಬಂದಿದೆ. ಮೂವರು ಮಹಿಳೆಯರು ಪ್ರಯಾಣ ಮಾಡುತ್ತಿದ್ದ ಆಟೋ ರೀಕ್ಷಾವನ್ನು ಕಾರಿನಲ್ಲಿ ಬಂದ ಮೂವರು ವಿಕೃತರು ಬೆನ್ನಟ್ಟಿದ್ದಾರೆ. ಅದರಲ್ಲಿ ಇಬ್ಬರೂ ಯುವಕರು ಸಂಪೂರ್ಣ ಬೆತ್ತಲಾಗಿದ್ದರು ಎಂದು ತಿಳಿದು ಬಂದಿದೆ. ಸದ್ಯ ಈ ದೃಶ್ಯ ವೈರಲ್ (Viral News) ಆಗುತ್ತಿದ್ದಂತೆ ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ? ಎಂದು ಪ್ರಶ್ನೆ ಮಾಡುವಂತೆ ಆಗಿದೆ.
ಕಾರಿನಲ್ಲಿ ಬಂದ ಮೂವರು ಪುರುಷರು ಹಗಲು ಹೊತ್ತಿನಲ್ಲಿ ತಮ್ಮ ಆಟೋರಿಕ್ಷಾವನ್ನು ಬೆನ್ನಟ್ಟಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಸುಮಾರು ದೂರದ ವರೆಗೆ ಮಹಿಳೆಯರನ್ನು ನೋಡಿ ಅವರನ್ನು ಫಾಲೋ ಮಾಡಿಕೊಂಡು ಹೋಗಿದ್ದಾರೆ.
ವಿಡಿಯೋ ನೋಡಿ:
ಸಂತ್ರಸ್ತ ಮಹಿಳೆಯರು ಮಧ್ಯಾಹ್ನದ ಸಮಯದಲ್ಲಿ ನೋಯ್ಡಾದಲ್ಲಿ ಜನಸಂದಣಿ ಸೇರಿರುವ ಪ್ರದೇಶದಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಕಾರೊಂದರಲ್ಲಿ ಬಂದ ಮೂವರು ವ್ಯಕ್ತಿಗಳು ಇವರ ಆಟೋವನ್ನು ಅತ್ಯಂತ ಅಪಾಯಕಾರಿಯಾಗಿ ಹಿಂಬಾಲಿಸಲು ಹಾಗೂ ಅಡ್ಡಗಟ್ಟಲು ಯತ್ನಿಸಿದ್ದಾರೆ.
ಅವರ ಪ್ರಕಾರ ಕಾರಿನಲ್ಲಿದ್ದ ಇಬ್ಬರು ಪುರುಷರು ಸಂಪೂರ್ಣ ಬೆತ್ತಲೆಯಾಗಿದ್ದರು. ಮತ್ತು ರಸ್ತೆಯಲ್ಲಿ ಅವರ ವಾಹನವನ್ನು ಪದೇ ಪದೇ ಹಿಂದಿಕ್ಕಿ ತಡೆಯಲು ಪ್ರಯತ್ನಿಸುತ್ತಿದ್ದರು. ದೀಪಿಕಾ ಎಂದು ಗುರುತಿಸಲಾದ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಈ ಅನುಭವವನ್ನು ಹಂಚಿಕೊಂಡಿದ್ದಾರೆ. ಮೂವರು ಪುರುಷರು ತುಂಬಿದ ಕಾರು, ಅದರಲ್ಲಿ ಇಬ್ಬರು ಬೆತ್ತಲೆಯಾಗಿ ನಿಮ್ಮ ಆಟೋವನ್ನು ಬೆನ್ನಟ್ಟುತ್ತಿದ್ದರೆ ನೀವು ಏನು ಮಾಡುತ್ತೀರಿ? ಕೇವಲ 10 ನಿಮಿಷಗಳ ದೂರದ ರಸ್ತೆಯಲ್ಲಿಯೇ ತಮಗೆ ಈ ಭೀಕರ ಅನುಭವವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಾವು ಪರಿಶೀಲಿಸಿದ ಕ್ಷಣ, ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಬೆತ್ತಲೆಯಾಗಿ ಪ್ರಯಾಣಿಕರ ಸೀಟಿನಲ್ಲಿ ಮಲಗಿದ್ದನು.ಮತ್ತೊಬ್ಬ ಡ್ಯಾಶ್‌ಬೋರ್ಡ್ ಮೇಲೆ ಕಾಲುಗಳನ್ನು ಮೇಲಕ್ಕೆತ್ತಿ ವಿಕೃತವಾಗಿ ನಗುತ್ತಿದ್ದ ಎಂದು ಯುವತಿ ದೂರಿದ್ದಾರೆ
ದಯವಿಟ್ಟು ಮಹಿಳೆಯರು ನಿಮ್ಮ ಸುರಕ್ಷತೆಯ ಬಗ್ಗೆ ಎಚ್ಚರದಿಂರಿ. ಹಗಲು ಸಮಯದಲ್ಲೂ ಸುರಕ್ಷತೆ ಇಲ್ಲ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರೊಬ್ಬರು ಇದು ತುಂಬಾ ಭಯಾನಕ ವಾಗಿದೆ..ಮಹಿಳೆಯರ ಸುರಕ್ಷತೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಈ ಬಗ್ಗೆ ದೂರು ನೀಡಿ ಸರಿಯಾದ ಶಿಕ್ಷೆ ಇಂತಹವರಿಗೆ ಆಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ