ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮುದ್ದಾದ ಆನೆ ಮರಿಗಳ ವಿಡಿಯೊ ಎಷ್ಟು ಕ್ಯೂಟ್‌ ಆಗಿದೆ ಗೊತ್ತಾ?

video of rescued baby elephants: ಗಜರಾಜ್ ಮತ್ತು ತೀಸ್ತಾ ಎಂಬ ಎರಡು ಮರಿ ಆನೆಗಳ ವಿಡಿಯೊವನ್ನು ಪರ್ವೀನ್ ಕಸ್ವಾನ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್ ಆಗಿದೆ. ತಾಯಿಯನ್ನು ಕಳೆದುಕೊಂಡು ನಂತರ ರಕ್ಷಿಸಲ್ಪಟ್ಟ ಮರಿಯಾನೆಗಳನ್ನು ಈಗ ಅರಣ್ಯ ಅಧಿಕಾರಿಗಳು ಮತ್ತು ಮಾವುತರ ಆರೈಕೆಯಲ್ಲಿ ಸಾಕಲಾಗುತ್ತಿದೆ. ವಿಡಿಯೊ ನೋಡಿದ ನೆಟ್ಟಿಗರು ಮರಿಯಾನೆಗಳ ಬಗ್ಗೆ ಕರುಣೆ ತೋರಿದ್ದಾರೆ.

ಮುದ್ದಾದ ಆನೆ ಮರಿಗಳ ವಿಡಿಯೊ ಎಷ್ಟು ಕ್ಯೂಟ್‌ ಆಗಿದೆ ಗೊತ್ತಾ?

Priyanka P Priyanka P Aug 7, 2025 12:26 PM

ನವದೆಹಲಿ: ಆನೆಮರಿಗಳು ಮನುಷ್ಯರ ಮಕ್ಕಳಂತೆಯೇ ಮುದ್ದಾಗಿ ವರ್ತಿಸುತ್ತವೆ. ಅವುಗಳ ತುಂಟಾಟ, ಕೀಟಲೆ ನೋಡುವುದೇ ಕಣ್ಣಿಗೆ ಆನಂದ. ಇದೀಗ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಮರಿಯಾನೆಗಳ ವಿಡಿಯೊವನ್ನು ಹಂಚಿಕೊಂಡಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ. ಗಜರಾಜ್ ಮತ್ತು ತೀಸ್ತಾ ಎಂಬ ಎರಡು ಮರಿ ಆನೆಗಳ ವಿಡಿಯೊವನ್ನು ಪರ್ವೀನ್ ಕಸ್ವಾನ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್(Viral Video) ಆಗಿದೆ. ತಾಯಿಯನ್ನು ಕಳೆದುಕೊಂಡು ನಂತರ ರಕ್ಷಿಸಲ್ಪಟ್ಟ ಮರಿಯಾನೆಗಳನ್ನು ಈಗ ಅರಣ್ಯ ಅಧಿಕಾರಿಗಳು ಮತ್ತು ಮಾವುತರ ಆರೈಕೆಯಲ್ಲಿ ಸಾಕಲಾಗುತ್ತಿದೆ. ಮರಿಯಾನೆಗಳನ್ನು ನೋಡಲು ಹೋದ ಕಸ್ವಾನ್ ಅದರ ವಿಡಿಯೊವನ್ನು ಹಂಚಿಕೊಂಡು, ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

“ಗಜರಾಜ್ ಮತ್ತು ತೀಸ್ತಾ ಎಂಬ ಆನೆಗಳನ್ನು ಭೇಟಿಯಾದೆ. ಅವುಗಳು ತಮ್ಮ ತಾಯಂದಿರು ಸಾವನ್ನಪ್ಪಿದ ನಂತರ ಅನಾಥರಾಗಿದ್ದವು, ನಂತರ ಎರಡನ್ನೂ ರಕ್ಷಿಸಲಾಯಿತು. ಇದೀಗ ಮಾವುತರ ಆರೈಕೆಯಲ್ಲಿವೆ. ಇವು ಈಗ ಹತ್ತಿರದ ಅರಣ್ಯವನ್ನು ಸದಾ ಅನ್ವೇಷಿಸುತ್ತಾ ಇವೆ” ಎಂದು ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಈ ವಿಡಿಯೊದಲ್ಲಿ, ಎರಡು ಆನೆಗಳು ಪರಸ್ಪರ ನಿಧಾನವಾಗಿ ತಳ್ಳಾಡುವುದು, ಆಹಾರ ತಿನ್ನುವುದು ಮತ್ತು ಅರಣ್ಯ ಸಿಬ್ಬಂದಿ ಜೊತೆ ನಿರ್ಭಯವಾಗಿ ನಡೆಯುವುದನ್ನು ಕಾಣಬಹುದು.

ವಿಡಿಯೊ ವೀಕ್ಷಿಸಿ:



ಇನ್ನು ಈ ವಿಡಿಯೊ ವೈರಲ್ ಆದ ಬೆನ್ನಲ್ಲೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಮರಿಯಾನೆಗಳ ಬಗ್ಗೆ ಕರುಣೆ ತೋರಿದರು ಮತ್ತು ಅವುಗಳನ್ನು ನೋಡಿಕೊಳ್ಳುತ್ತಿರುವ ಅರಣ್ಯ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಷ್ಟು ಮುದ್ದಾದ ಆನೆಮರಿಗಳು. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಕ್ಕೆ ದುಃಖವಾಗಿದೆ. ಆದರೆ ಮಾವುತರು ಮತ್ತು ಅರಣ್ಯ ಇಲಾಖೆಯು ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದನ್ನು ನೋಡಿ ಸಂತೋಷವಾಗಿದೆ ಎಂದು ಬಳಕೆದಾರರೊಬ್ಬರು ಹೇಳಿದರು. ತಾನು ನಿಜವಾಗಿಯೂ ಆನೆ ಮರಿಗಳನ್ನು ಭೇಟಿಯಾಗಲು ಬಯಸುತ್ತೇನೆ. ಅವು ತುಂಬಾ ಮುದ್ದಾಗಿವೆ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದರು.

ಈ ಸುದ್ದಿಯನ್ನೂ ಓದಿ: Viral Video: ವರದಕ್ಷಿಣೆಗಾಗಿ ನಡೀತು ಬೀದಿ ರಂಪಾಟ-ವಿಡಿಯೊ ವೈರಲ್

ಪರ್ವೀನ್ ಕಸ್ವಾನ್ ರಕ್ಷಿಸಲ್ಪಟ್ಟ ಆನೆಗಳ ಜೀವನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಅವರು 2020 ರಲ್ಲಿ ತೋರ್ಶಾ ನದಿಯಿಂದ ರಕ್ಷಿಸಲ್ಪಟ್ಟ ಬೀರ್ ಎಂದ ಆನೆಮರಿಯ ಚೇತರಿಕೆಯ ಬಗೆಗಿನ ವಿಡಿಯೊವನ್ನು ಹಂಚಿಕೊಂಡಿದ್ದರು. ದುರ್ಬಲ ಮತ್ತು ಅಕಾಲಿಕ ಜನನವಾಗಿದ್ದ ಬೀರ್ ಈಗ ಬಲಿಷ್ಠನಾಗಿದ್ದಾನೆ.