Viral News: ಸರ್ಪೈಸ್‌ ಪ್ರೊಪೋಸ್‌ಗಾಗಿ ಪ್ರಿಯತಮ ಕೇಕ್​ನೊಳಗೆ ಇಟ್ಟಿದ್ದ ಉಂಗುರವನ್ನೂ ತಿಂದ ಪ್ರೇಯಸಿ

ಚೀನಾದ ವ್ಯಕ್ತಿಯೊಬ್ಬಕೇಕ್‌ನೊಳಗೆ ಉಂಗುರ ಬಚ್ಚಿಟ್ಟು ಸರ್ಪ್ರೈಸ್‌ ಪ್ರೊಪೋಸ್‌ ಪ್ಲ್ಯಾನ್‌ ಮಾಡಿದ್ದ. ಆದರೆ ಇದ್ಯಾವುದನ್ನೂ ತಿಳಿಯದೆ‌ ಯುವತಿ ಕೇಕ್ ಜತೆಗೆ ಉಂಗುರವನ್ನೂ ನುಂಗಿದ್ದಾಳೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಚೀನಾದ ಸೌತ್ ಗುವಾಂಗ್‌ಆನ್‌ ನಲ್ಲಿ ಈ ಘಟನೆ ನಡೆದಿದೆ.

ring viral news
Profile Pushpa Kumari Feb 5, 2025 10:41 AM

ಚೀನಾ: ತಾವು ಪ್ರೀತಿಸುವಂತಹ ಹುಡುಗ ಅಥವಾ ಹುಡುಗಿಗೆ ದುಬಾರಿ ಉಡುಗೊರೆ ನೀಡುವ ಮೂಲಕ ‌ ಪ್ರಪೋಸ್ ಮಾಡುವುದು ಸರ್ವೇ ಸಾಮಾನ್ಯ. ತಮ್ಮ ಮನಸ್ಸಿನಲ್ಲಿರೋ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರಬೇಕೆಂದು ಏನೆಲ್ಲಾ ಗಿಫ್ಟ್​ ಕೊಡಬೇಕು, ಹೇಗೆಲ್ಲಾ ಪ್ರಪೋಸ್​ ಮಾಡಬೇಕು ಎಂದು ಪ್ರೇಮಿಗಳು ಪ್ಲಾನ್​ ಮಾಡಿಕೊಳ್ಳುವುದು ಇದೆ‌. ಆದ್ರೆ ಇಲ್ಲೊಬ್ಬ ತನ್ನ ಪ್ರಿಯತಮೆಗೆ ಸರ್​ರ್ಪ್ರೈಸ್ ಆಗಿ ದುಬಾರಿ ಗಿಫ್ಟ್ ನೀಡಲು ಹೋಗಿ ಫಜೀತಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಚೀನಾದ ವ್ಯಕ್ತಿಯೊಬ್ಬ ತಾನು ಪ್ರೀತಿಸಿದ ಗೆಳತಿಗೆ ಕೇಕ್‌ನಲ್ಲಿ ಉಂಗುರವನ್ನಿಟ್ಟು ಪ್ರೊಪೋಸ್‌ ಮಾಡಲು ಯೋಜನೆ ರೂಪಿಸಿದ್ದ. ಆದರೆ ಇದ್ಯಾವುದನ್ನೂ ತಿಳಿಯದೆ‌ ಯುವತಿ ಕೇಕ್ ಜತೆಗೆ ಉಂಗುರವನ್ನೇ ತಿಂದಿದ್ದಾಳೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral News) ಆಗುತ್ತಿದೆ.

ಚೀನಾದ ಸೌತ್ ಗುವಾಂಗ್‌ಆನ್‌ನಲ್ಲಿ ಈ ಘಟನೆ ನಡೆದಿದ್ದು ಪ್ರೇಮಿಯೊಬ್ಬ ತಾನು ಪ್ರೀತಿಸುವ ಗೆಳತಿಗೆ ಸರ್ಪ್ರೈಸ್ ಆಗಿ ರಿಂಗ್ ನೀಡಿ ಪ್ರೇಮ ನಿವೇದನೆ ಮಾಡಬೇಕೆಂದು ಬಯಸಿದ್ದ,  ರೆಸ್ಟೋರೆಂಟ್​ ವೊಂದರಲ್ಲಿ ತಾನು ಪ್ರೀತಿಸಿದ ಹುಡುಗಿಯನ್ನು ಕುಳ್ಳಿರಿಸಿ, ಕೇಕ್​ ಒಳಗೆ ಉಂಗುರವಿಟ್ಟು ಆಕೆಗೆ ತಿನ್ನಲು ಕೊಟ್ಟಿದ್ದ. ಆದರೆ ಅಲ್ಲಿ ಆಗಿದ್ದೇ ಬೇರೆ, ಇದ್ಯಾವುದನ್ನೂ ಅರಿಯದ ಯುವತಿ ಕೇಕ್ ಜತೆಗೆ ಉಂಗುರವನ್ನೇ ತಿಂದಿದ್ದಾಳೆ.

ಕೇಕ್​ ತಿನ್ನುವಾಗ ಬಾಯಲ್ಲಿ ಸಿಕ್ಕ ಉಂಗುರ ಹಲ್ಲಿನಲ್ಲಿ ಕಚ್ಚಿದ್ದರಿಂದ ಅದು ಎರಡು ತುಂಡುಗಳಾಗಿ ಹೋಗಿದೆ. ಇದನ್ನು ನೋಡಿದ ಯುವತಿ ಶಾಕ್​ ಆಗಿದ್ದಾಳೆ. ಕೇಕ್​ನ ಗುಣಮಟ್ಟವೇ ಸರಿಯಿಲ್ಲದಿರಬಹುದು ಎಂದು ಬೇಕರಿಗೆ ದೂರು ಕೊಡಲು ಮುಂದಾಗಿದ್ದಳು. ಈ ವಿಚಾರವನ್ನು ಆಕೆ ಗೆಳೆಯನ ಬಳಿಯೂ ಹೇಳಿಕೊಂಡಿದ್ದಾಳೆ.ಆ ನಂತರದಲ್ಲಿ ಯುವಕ  ಇದು ತಾನು ಪ್ರಪೋಸ್ ಮಾಡಲು ತಂದಿದ್ದ ಉಂಗುರ ಎಂದು ಹೇಳಿಕೊಂಡಿದ್ದಾನೆ.

ಇದನ್ನು ಓದಿ: Viral Video: ಊಟ ಕಡಿಮೆಯಾಯಿತೆಂದು ಮದುವೆ ಕ್ಯಾನ್ಸಲ್‌- ಪೊಲೀಸ್‌ ಠಾಣೆಯಲ್ಲಿ ಫುಲ್ ಹೈಡ್ರಾಮಾ!

ಗುವಾಂಗ್ ಆನ್ ನಗರದ ನಿವಾಸಿ ಲಿಯು ರೆಡ್ ನೋಟ್ ಎಂಬ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು ಎಲ್ಲಾ ಯುವಕರ ಗಮನಕ್ಕೆ ಕೇಕ್‌ನೊಂದಿಗೆ ಎಂದಿಗೂ ಪ್ರೊಪೋಸ್ ರಿಂಗ್ ಇರಿಸಬೇಡಿ ಎಂದು ಯುವತಿ ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದಾಳೆ. ಇಷ್ಟೆಲ್ಲಾ ವಿಚಾರ ನಡೆದ ಬಳಿಕ ಆಕೆ ತನ್ನ ಗೆಳೆಯನನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಾಳೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?