ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಹಾ ನೀಡಿ ಆದರಿಸಿದ ತೋರಿದ ಭಾರತೀಯರು: ಇಲ್ಲಿನ ಆತಿಥ್ಯಕ್ಕೆ ಅಮೆರಿಕದ ಪ್ರವಾಸಿ ಭಾವುಕ

Viral Video: ಭಾರತೀಯರು ಅತಿಥಿಗಳನ್ನು ಯಾವ ರೀತಿ ಬರಮಾಡಿಕೊಳ್ಳುತ್ತಾರೆ ಎಂಬುದಕ್ಕೆ ದೆಹಲಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ದೆಹಲಿಯ ಪಾರ್ಕ್ ಒಂದರಲ್ಲಿ ಅಮೆರಿಕದ ಪ್ರವಾಸಿಯನ್ನು ಅಲ್ಲಿನ ಸ್ಥಳೀಯರು ಉಪಚರಿಸಿ ಚಹಾ ಮತ್ತು ಉಪಹಾರ ನೀಡಿರುವ ವಿಡಿಯೊ ಮೆಚ್ಚುಗೆಗೆ ಪಾತ್ರವಾಗಿದೆ.

ದೆಹಲಿ ಪಾರ್ಕ್‌ನಲ್ಲಿ ಅಮೆರಿಕದ ಪ್ರವಾಸಿಗೆ ಚಹಾ ನೀಡಿ ಮನಗೆದ್ದ ಸ್ಥಳೀಯರು

ಅಮೆರಿಕದ ಪ್ರವಾಸಿಗೆ ಚಹಾ ನೀಡಿ ಮನಗೆದ್ದ ಸ್ಥಳೀಯರು -

Profile
Pushpa Kumari Jan 22, 2026 6:17 PM

ನವದೆಹಲಿ, ಜ. 22: ಭಾರತೀಯ ಸಂಸ್ಕೃತಿಯನ್ನು ಅರಿಯಲು ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಭಾರತೀಯ ಆತಿಥ್ಯವನ್ನು ಕೊಂಡಾಡಿ ಹಲವು ವಿದೇಶಿ ಪ್ರವಾಸಿಗರು ವಿಡಿಯೊ ಹಂಚಿಕೊಂಡಿದ್ದಾರೆ. ಅತಿತಿ ದೇವೋಭವ ಸಂಸ್ಕೃತಿಯ ಭಾರತೀಯರು ಅತಿಥಿಗಳನ್ನು ಯಾವ ರೀತಿ ಬರಮಾಡಿಕೊಳ್ಳುತ್ತಾರೆ ಎಂಬುದಕ್ಕೆ ದೆಹಲಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ದೆಹಲಿಯ ಪಾರ್ಕ್ ಒಂದರಲ್ಲಿ ಅಮೆರಿಕದ ಪ್ರವಾಸಿಯನ್ನು ಅಲ್ಲಿನ ಸ್ಥಳೀಯರು ಉಪಚರಿಸಿ ಚಹಾ ಮತ್ತು ಉಪಹಾರ ನೀಡಿರುವ ವಿಡಿಯೊವೊಂದು (Viral Video) ಮೆಚ್ಚುಗೆಗೆ ಪಾತ್ರವಾಗಿದೆ.

ಅಮೆರಿಕದ ವ್ಲಾಗರ್ ಆಸ್ಟಿನ್ ದೆಹಲಿಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲೇ ಹತ್ತಿರದ ಅಂಗಡಿಯೊಂದರಲ್ಲಿ ಕುಳಿತು ಚಹಾ ಸೇವನೆ ಮಾಡುತ್ತಿದ್ದ ವಯಸ್ಕರ ಗುಂಪೊಂದು ಅವರನ್ನು ಆತ್ಮೀಯವಾಗಿ ಉಪಚಾರ ಮಾಡಿದೆ. ಪ್ರವಾಸಿಗನನ್ನು ಕರೆದು ಒಂದು ಕಪ್ ಚಹಾ ನೀಡಿದ್ದು ಅದನ್ನು ಆತ ಸ್ವೀಕರಿಸಿದ್ದಾನೆ. ಸ್ವಲ್ಪ ಸಮಯದ ನಂತರ ಚಹಾದ ಜತೆಗೆ ತಿನ್ನಲು ಬ್ರೆಡ್ ಸಹ ಸ್ಥಳೀಯರು ನೀಡಿದ್ದಾರೆ. ಯಾವುದೇ ಪರಿಚಯವಿಲ್ಲದಿದ್ದರೂ ಆಸ್ಟಿನ್ ಅವರನ್ನು ತಮ್ಮೊಂದಿಗೆ ಕೂರಿಸಿಕೊಂಡು ಚಹಾ ಹಾಗೂ ಬ್ರೆಡ್-ಚೀಸ್ ಸವಿದಿದ್ದಾರೆ.

ವಿಡಿಯೊ ನೋಡಿ:

ಈ ಕ್ಷಣವನ್ನು ಆಸ್ಟಿನ್ ಹಂಚಿಕೊಂಡಿದ್ದು, ʼʼಭಾರತಕ್ಕೆ ಭೇಟಿ ನೀಡಿದ ಮೊದಲ ದಿನವೇ ನನಗೆ ಉಚಿತ ಊಟ ಮತ್ತು ಉಚಿತ ಪಾನೀಯ ಸಿಕ್ಕಿದೆ. ನಾನು ಭೇಟಿ ನೀಡಿದ ಯಾವುದೇ ದೇಶದಲ್ಲೂ ಈ ರೀತಿ ಆತಿಥ್ಯವನ್ನು ನನಗೆ ಸಿಕ್ಕಿಲ್ಲ. ನಾನು ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪರಿಚಿತರು ನನ್ನನ್ನು ಚಾಯ್‌ಗೆ ಕರೆದರು. ಭಾರತೀಯ ಆತಿಥ್ಯ ನಿಜಕ್ಕೂ ಅದ್ಭುತʼʼ ಎಂದು ಶ್ಲಾಘಿಸಿದ್ದಾರೆ.

ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ಹೇಳಿದ್ದೇನು?

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಟಿದೆ‌. ಒಬ್ಬರು ಆಹಾರ ನೀಡುವುದು ನಮ್ಮ ಸಂಸ್ಕೃತಿಯ ಭಾಗ. ನಮ್ಮ ಸುತ್ತಲೂ ಯಾರೂ ಹಸಿವಿನಿಂದ ಇರಬೇಕಾಗಿಲ್ಲ ಎಂದಿದ್ದಾರೆ. ಮತ್ತೊಬ್ಬರು ನಾವು ಒಬ್ಬಂಟಿಯಾಗಿ ತಿನ್ನಲು ಇಷ್ಟ ಪಡುವುದಿಲ್ಲ. ಅದು ನಮಗೆ ಅಗೌರವ, ಆದ್ದರಿಂದ ನಾವು ಹಂಚಿಕೊಂಡು ತಿನ್ನುತ್ತೇವೆ ಎಂದು ಹೇಲಿದ್ದಾರೆ.

ಕಳೆದ ತಿಂಗಳಷ್ಟೇ ಅಮೆರಿಕ ಟ್ರಾವೆಲ್ ವ್ಲಾಗರ್ ನಿಕ್ ಮೆಕ್‌ಕಚಿಯನ್ ಬೆಂಗಳೂರಿನ ಡಿಜೆ ಹಳ್ಳಿಗೆ ಭೇಟಿ ನೀಡಿದ ಕ್ಷಣವನ್ನು ಹಂಚಿಕೊಂಡಿದ್ದರು. ಟೀ ಅಂಗಡಿಯ ವ್ಯಕ್ತಿಯೊಬ್ಬರು ಹಣ ಪಡೆಯದೆ ಚಹಾ ನೀಡಿ ಉಪಚರಿಸಿದ್ದರು ಎಂದು ವಿಡಿಯೊ ಶೇರ್ ಮಾಡಿದ್ದರು.