ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಇದ್ರೆ ನೆಮ್ದಿಯಾಗಿರ್ಬೇಕುʼʼ: ವೇತನಕ್ಕಿಂತ ಮಾನಸಿಕ ಶಾಂತಿ ಮುಖ್ಯ ಎಂದು ಸಿಂಗಾಪುರದ ಹೈ-ಪೇಯಿಂಗ್ ಜಾಬ್ ತೊರೆದು ಬೆಂಗಳೂರಿಗೆ ಬಂದ ಯುವಕ

Viral Video: ಸಿಂಗಾಪುರದ ಪ್ರತಿಷ್ಠಿತ ಕಂಪನಿಯ ಜಾಬ್ ಬಿಟ್ಟು ನೆಮ್ಮದಿ ಅರಸಿ ಬೆಂಗಳೂರಿಗೆ ಮರಳಿದ ಯುವಕನೊಬ್ಬನ ಕಥೆ ಇದು. ಸಾಧನೆ ಎಂದರೆ ಕೇವಲ ಹಣ, ವಿದೇಶಿ ವಾಸ ಮಾತ್ರವಲ್ಲ, ವೈಯಕ್ತಿಕ ಖುಷಿಯೂ ಮುಖ್ಯ ಎಂದು ಹೈ - ಪೇಯಿಂಗ್ ಜಾಬ್ ತೊರೆದು ಬೆಂಗಳೂರಿಗೆ ವಾಪಸ್ಸು ಬಂದಿದ್ದಾನೆ. ಸದ್ಯ ಯುವಕನ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸಿಂಗಾಪುರದ ಉತ್ತಮ ಪ್ಯಾಕೇಜ್ ಜಾಬ್ ತೊರೆದು ಬೆಂಗಳೂರಿಗೆ ಬಂದ ಯುವಕ

ಸಿಂಗಾಪುರದ ಹೈ-ಪೇಯಿಂಗ್ ಜಾಬ್ ತೊರೆದ ಯುವಕ -

Profile
Pushpa Kumari Jun 21, 2026 5:16 PM

ಬೆಂಗಳೂರು, ಜೂ. 21: ಶಿಕ್ಷಣ ಪಡೆದ ಬಹುತೇಕ ಯುವಕ-ಯುವತಿಯರು ಅಕರ್ಷಕ ವೇತನ ಇರುವ ಉದ್ಯೋಗವನ್ನೇ ಆಯ್ದುಕೊಳ್ಳುತ್ತಾರೆ. ವಿದೇಶದಲ್ಲಿ ಇಂತಹ ಅವಕಾಶ ಹೆಚ್ಚಿದ್ದು, ಕೈತುಂಬ ಹಣ ಸಂಪಾದನೆ ಮಾಡುವುದು ಹೆಚ್ಚಿನ ಉದ್ಯೋಗಿಗಳ ಕನಸಾಗಿರುತ್ತದೆ. ಆದರೆ ಇಲ್ಲೊಬ್ಬ ಯುವಕ ಸಿಂಗಾಪುರದಲ್ಲಿ ಗಿಟ್ಟಿಸಿಕೊಂಡಿದ್ದ ಪ್ರತಿಷ್ಠಿತ ಕಂಪನಿಯ ಜಾಬ್ ಬಿಟ್ಟು ಬೆಂಗಳೂರಿಗೆ ವಾಪಸಾಗಿದ್ದಾನೆ. ಸಾಧನೆ ಎಂದರೆ ಕೇವಲ ಹಣ, ವಿದೇಶಿ ವಾಸ ಮಾತ್ರವಲ್ಲ, ವೈಯಕ್ತಿಕ ಖುಷಿಯೂ ಮುಖ್ಯ ಎಂದು ಹೈ-ಪೇಯಿಂಗ್ ಜಾಬ್ ತೊರೆದು ಬೆಂಗಳೂರಿಗೆ ಮರಳಿದ್ದಾನೆ. ಸದ್ಯ ಯುವಕನ (Viral News) ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

26 ವರ್ಷದ ಭಾರತೀಯ ಎಂಜಿನಿಯರ್ ಸಿಂಗಾಪುರದಲ್ಲಿ ಹೆಚ್ಚಿನ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡಿದ್ದ. ಆದಾಗ್ಯೂ, ವೈಯಕ್ತಿಕ ನೆಮ್ಮದಿ ಮುಖ್ಯ ಎನಿಸಿರುವ ಕಾರಣ ಉದ್ಯೋಗ ತೊರೆದಿದ್ದಾಗಿ ಎಂದು ಯುವಕ ತಿಳಿಸಿದ್ದಾನೆ. ಅಮನ್ ವೈಷ್ಣವ್ ಎಂಬ ಎಂಜಿನಿಯರ್ ಈ ನಿರ್ಧಾರ ಕೈಗೊಂಡಿದ್ದಾನೆ.

ವಿಡಿಯೊ ನೋಡಿ:

ಯುವಕ ಈ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಕೆಲಸ ಬಿಡಲು ಕಾರಣ ಏನೆಂದು ತಿಳಿಸಿದ ಆತ ವೃತ್ತಿ ಜೀವನದಲ್ಲಿ ಯಶಸ್ಸು ಕಂಡರೂ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ತಾಯ್ನಾಡಿಗೆ ಮರಳಲು ನಿರ್ಧರಿಸಿದ್ದಾನೆ. ಆತನ ಪ್ರಕಾರ, ʼʼಈ ನಿರ್ಧಾರವು ಅನೇಕರನ್ನು ಅಚ್ಚರಿಗೆ ದೂಡಿದೆ. ವಿದೇಶದಲ್ಲಿ ಉತ್ತಮ ಸಂಬಳದ ಕೆಲಸವನ್ನು ಬಿಡುವುದು ಸರಿಯಲ್ಲ ಎಂದು ಹಲವರು ನನ್ನ ನಿರ್ಧಾರವನ್ನು ಟೀಕಿಸಿದ್ದರುʼʼ ಎಂದಿದ್ದಾನೆ.

ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿಗಳಿಗೆ ರಾಯಲ್‌ ಟ್ರೀಟ್‌ಮೆಂಟ್‌; ವೈರಲ್‌ ವಿಡಿಯ

ʼʼಹೊರಗಿನಿಂದ ಅದ್ಬುತವಾಗಿ ಏನೇ ಕಂಡರೂ ನಮಗೆ ಸರಿ ಎನಿಸುವ ಕೆಲಸವನ್ನು ಆಯ್ದುಕೊಳ್ಳುವುದು ಮುಖ್ಯ. ನಾನು ನನ್ನ ಮನಸ್ಸಿಗೆ ಸರಿ ಅನಿಸಿದ್ದನ್ನು ಆಯ್ಕೆ ಮಾಡಿಕೊಂಡೆʼʼ ಎಂದು ಹೇಳಿದ್ದಾರೆ. ಭಯದ ನೆರಳಿನಲ್ಲಿ ಪ್ರಮುಖ ನಿರ್ಧಾರಗಳನ್ನು ಆಯ್ಕೆ ಮಾಡಲು ತನಗೆ ಇಷ್ಟವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

26 ವರ್ಷದ ಈ ಯುವಕ ಬೆಂಗಳೂರಿನಲ್ಲಿ ಈಗ ಹೊಸ ವೃತ್ತಿ ಜೀವನ ಆರಂಭಿಸಿದ್ದಾನೆ. ʼʼಹೊಸ ನಗರದಲ್ಲಿ ಉದ್ಯೋಗ ಆರಂಭಿಸುವುದು ಸವಾಲಿನದ್ದಾಗಿರಬಹುದು. ಆದರೆ ವೈಯಕ್ತಿಕ ಮತ್ತು ವೃತ್ತಿಪರ ಪ್ರಯಾಣದಲ್ಲಿ ಇದು ಪ್ರಮುಖ ಅಧ್ಯಾಯʼʼ ಎಂದು ತಿಳಿಸಿದ್ದಾನೆ.

ಸದ್ಯ ಯುವಕನ ಈ ನಡೆಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಂಬಳಕ್ಕಿಂತ ವೈಯಕ್ತಿಕ ನೆಮ್ಮದಿ ಮುಖ್ಯ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು, ʼʼನಿಮ್ಮ ನಿರ್ಧಾರ ಸರಿಯಾಗಿದೆ. ಮುಂದಿನ ಜೀವನದಲ್ಲಿ ಯಶಸ್ಸು ಗಳಿಸಿʼʼ ಎಂದು ಶುಭ ಹಾರೈಸಿದ್ದಾರೆ.