ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ಚಾಂಪಿಯನ್‌ ಟೀಮ್‌ ಇಂಡಿಯಾಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

T20 world cup 2026 winner prize money: ದೆಹಲಿಯ ಕರ್ನಾಟಕ ಭವನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಮೆನ್ಸ್ ಟಿ-20 ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಿದರು. ಅವರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿಗೆ ಆಗಮಿಸಿದ್ದಾರೆ.

ಟಿ20 ಚಾಂಪಿಯನ್‌ ಭಾರತಕ್ಕೆ ಸಿಕ್ಕಿದು ₹27.58 ಕೋಟಿ

The India team celebrates with the World Cup trophy -

Abhilash BC
Abhilash BC Mar 9, 2026 7:53 AM

ಅಹಮದಾಬಾದ್‌, ಮಾ.9: 2026ರ ಐಸಿಸಿ ಟಿ20 ವಿಶ್ವಕಪ್‌(T20 world cup 2026) ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಟೀಂ ಇಂಡಿಯಾ, ಕೋಟ್ಯಂತರ ಅಭಿಮಾನಿಗಳ ಆಸೆ ಈಡೇರಿಸಿದೆ. ನ್ಯೂಜಿಲೆಂಡ್‌ ವಿರುದ್ಧ ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌(India vs New Zealand Final)ನಲ್ಲಿ ಭಾರತ 96 ರನ್‌ಗಳ ಅಮೋಘ ಗೆಲುವು ಸಾಧಿಸಿತು. ಈ ಮೂಲಕ ಸತತ ಎರಡನೇ ಹಾಗೂ ಒಟ್ಟಾರೆ ಮೂರನೇ ಟ್ರೋಫಿ ಗೆದ್ದ ಸಾಧನೆ ಮಾಡಿತು.

ಚಾಂಪಿಯನ್‌ ಭಾರತಕ್ಕೆ ₹27.58 ಕೋಟಿ

ಚಾಂಪಿಯನ್‌ ಪಟ್ಟ ಅಲಂಕರಿಸಿದ ಭಾರತ ತಂಡಕ್ಕೆ ₹27.58 ಕೋಟಿ ನಗದು ಬಹುಮಾನ ಲಭಿಸಿತು. ರನ್ನರ್‌-ಅಪ್‌ ನ್ಯೂಜಿಲೆಂಡ್‌ಗೆ ಸಿಕ್ಕ ಬಹುಮಾನ ಮೊತ್ತ ₹14.70 ಕೋಟಿ. ಉಳಿದಂತೆ ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ ₹7.24 ಕೋಟಿ, ಸೂಪರ್ 8 ಹಂತ ತಲುಪಿದ ತಂಡಗಳಿಗೆ ತಲಾ ₹3.48 ಕೋಟಿ, ಗುಂಪು ಹಂತದಲ್ಲಿ ಹೊರಬಿದ್ದ ತಂಡಗಳಿಗೆ ತಲಾ ₹2.29 ಕೋಟಿ ಲಭಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ, ಪವರ್‌-ಪ್ಲೇನಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 6 ಓವರಲ್ಲಿ 92 ರನ್‌ ಬಾರಿಸಿ ಕಿವೀಸ್‌ ಮೇಲೆ ಒತ್ತಡ ಹೇರಿತು. ಆರಂಭಕಾರ ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌ ತಲಾ ಅರ್ಧಶತಕ ದಾಖಲಿಸಿ, ತಂಡ ಬೃಹತ್‌ ಮೊತ್ತ ದಾಖಲಿಸಲು ವೇದಿಕೆ ಕಲ್ಪಿಸಿದರು. ಈ ಮೂವರ ಬ್ಯಾಟಿಂಗ್‌ ಅಬ್ಬರದಿಂದ ಭಾರತ

ಸತತ ವೈಫಲ್ಯ ಕಾಣುತ್ತಿದ್ದ ಅಭಿಷೇಕ್‌ ಫೈನಲ್‌ನಲ್ಲಿ ಅಬ್ಬರಿಸಿದರು. 18 ಎಸೆತದಲ್ಲಿ ಫಿಫ್ಟಿ ದಾಖಲಿಸಿದ ಅಭಿ, 21 ಎಸೆತದಲ್ಲಿ 52 ರನ್‌ ಚಚ್ಚಿ ಔಟಾದರು. ಆ ಬಳಿಕ ಸ್ಯಾಮ್ಸನ್‌-ಕಿಶನ್‌ 45 ಎಸೆತದಲ್ಲಿ ಶತಕದ ಜೊತೆಯಾಟ ಪೂರೈಸಿದರು. 20 ಓವರಲ್ಲಿ 5 ವಿಕೆಟ್‌ಗೆ 255 ರನ್‌ ಬಾರಿಸಿತು.

ʻನಿಮ್ಮಿಂದ ನಿಜವಾಗಿಯೂ ಖುಷಿಯಾಗಿದೆ ಚೆಟಾʼ": ಸಂಜು ಸ್ಯಾಮ್ಸನ್‌ಗೆ ಕಿಂಗ್‌ ಕೊಹ್ಲಿ ವಿಶೇಷ ಸಂದೇಶ!

ಬೃಹತ್‌ ಗುರಿ ಬೆನ್ನಟ್ಟಿದ ಕಿವೀಸ್‌, ಭಾರತದ ಮಾರಕ ದಾಳಿ ಎದುರು ಪವರ್‌-ಪ್ಲೇನಲ್ಲೇ ಪಂದ್ಯ ಕೈಚೆಲ್ಲಿತು. ಬೂಮ್ರಾ 4 ಓವರಲ್ಲಿ 15ಕ್ಕೆ 4 ವಿಕೆಟ್ ಕಿತ್ತರೆ, ಅಕ್ಷರ್‌ 3 ವಿಕೆಟ್‌ ಕಬಳಿಸಿದರು. ನ್ಯೂಜಿಲೆಂಡ್‌ 19 ಓವರಲ್ಲಿ 159ಕ್ಕೆ ಆಲೌಟ್‌ ಆಯಿತು. ಫೈನಲ್‌ ವೀಕ್ಷಣೆಗೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 86824 ಪ್ರೇಕ್ಷಕರು ಸೇರಿದ್ದರು. ಭದ್ರತಾ ಸಿಬ್ಬಂದಿ, ವಿಐಪಿಗಳು ಸೇರಿ ಒಟ್ಟು ಸಂಖ್ಯೆ 87000 ಮಂದಿ ಇದ್ದರು.

ಸಂಕ್ಷಿಪ್ತ ಸ್ಕೋರ್‌: ಭಾರತ 20 ಓವರಲ್ಲಿ 255/5 (ಸ್ಯಾಮ್ಸನ್‌ 89, ಕಿಶನ್‌ 54, ಅಭಿ 52, ನೀಶಮ್‌ 3-46), ನ್ಯೂಜಿಲೆಂಡ್‌ 19 ಓವರಲ್ಲಿ 159/10 (ಸೈಫರ್ಟ್‌ 52, ಸ್ಯಾಂಟ್ನರ್‌ 43, ಬೂಮ್ರಾ 4-15, ಅಕ್ಷರ್‌ 3-27). ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬುಮ್ರಾ.