ಇರಾನಿನ ತೈಲ ಸಂಗ್ರಹಾಗಾರದ ಮೇಲೆ ಇಸ್ರೇಲ್ ದಾಳಿ: ಬೆಂಕಿಯ ಉಂಡೆ, ದಟ್ಟ ಹೊಗೆ... ಇಲ್ಲಿದೆ ಭಯಾನಕ ವಿಡಿಯೊ
ಇರಾನಿನ ರಾಜಧಾನಿ ಟೆಹರಾನ್ ನ ಐದು ತೈಲ ಡಿಪೋಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಇದರಿಂದ ಕಾಣಿಸಿಕೊಂಡ ಬೆಂಕಿಯ ಉಂಡೆಗಳು, ದಟ್ಟ ಹೊಗೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಇರಾನಿನ ತೈಲ ಸಂಗ್ರಹಾಗಾರದ ಮೇಲೆ ಯುದ್ಧ ವಿಮಾನಗಳು ಅಪ್ಪಳಿಸಿದ ಬಳಿಕ ಹೇಗಿತ್ತು ಭಯಾನಕ ದೃಶ್ಯಾವಳಿಗಳು ಎಂಬುದನ್ನು ಕಾಣಬಹುದು.
ಸಂಗ್ರಹ ಚಿತ್ರ -
ಟೆಹರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಲ್ಲಿ (Israeli airstrikes) ನೈಸರ್ಗಿಕ ಸಂಪನ್ಮೂಲಗಳು ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಇರಾನಿನ (Iran) ರಾಜಧಾನಿ ಟೆಹರಾನ್ (tehran)ನ ತೈಲ ಸಂಗ್ರಹಾರದ (Iranian oil storage facility) ಮೇಲೆ ಇಸ್ರೇಲ್ ನ (Israel) ಯುದ್ಧ ವಿಮಾನಗಳು ಅಪ್ಪಳಿಸಿದ್ದು, ಇದರಿಂದ ಭಾರಿ ಪ್ರಮಾಣದ ಬೆಂಕಿ, ದಟ್ಟ ಹೊಗೆ ನಗರದಾದ್ಯಂತ ವ್ಯಾಪಿಸಿತ್ತು. ಟೆಹರಾನ್ ನ ಐದು ಪ್ರಮುಖ ಇಂಧನ ಡಿಪೋಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಇದರ ಭಯಾನಕ ದೃಶ್ಯಗಳ ವಿಡಿಯೊಗಳು (Viral Video) ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಘಟನೆಯ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ಇರಾನಿನ ತೈಲ ಉತ್ಪನ್ನಗಳ ವಿತರಣಾ ಕಂಪನಿಯ ಸಿಇಒ, ತೈಲ ಸಂಗ್ರಹಾರಕ್ಕೆ ಯುದ್ಧ ವಿಮಾನಗಳು ಅಪ್ಪಳಿಸಿದ ಬಳಿಕ ಟೆಹರಾನ್ ನಲ್ಲಿ ಭಾರಿ ಸ್ಫೋಟ, ದಟ್ಟವಾದ ಹೊಗೆ ನಗರದಾದ್ಯಂತ ವ್ಯಾಪಿಸಿತ್ತು. ಇಬ್ಬರು ಟ್ಯಾಂಕರ್ ಚಾಲಕರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಮಿಲಿಟರಿ ನಾಯಕತ್ವ ಕೊನೆಯಾದಾಗಲೇ ಇರಾನ್ ಯುದ್ಧ ನಿಲ್ಲಿಸುತ್ತೇವೆ: ಡೊನಾಲ್ಡ್ ಟ್ರಂಪ್
ಟೆಹರಾನ್ ಮತ್ತು ಸುತ್ತಮುತ್ತಲಿನ ಅನೇಕ ತೈಲ ಡಿಪೋಗಳಿಗೆ ಯುದ್ಧ ವಿಮಾನಗಳು ಅಪ್ಪಳಿಸಿದವು. ಇದರಿಂದ ಭಾರಿ ಬೆಂಕಿ, ಆಕಾಶದಾದ್ಯಂತ ದಟ್ಟ ಹೊಗೆಯನ್ನು ವ್ಯಾಪಿಸಿತ್ತು. ಇದು ಬಹುದೂರದವರೆಗೆ ಕಾಣಿಸುತ್ತಿತ್ತು. ಬೆಂಕಿಯ ಚೆಂಡು, ಎತ್ತರದವರೆಗೆ ವ್ಯಾಪಿಸಿದ ಹೊಗೆ, ಸ್ಫೋಟದ ಸದ್ದುಗಳು ನಗರದ ಕೆಲವು ಭಾಗಗಳನ್ನು ನಡುಗಿಸಿತ್ತು.
ಇಂಧನ ಸೋರಿಕೆಯಾದ ಬಳಿಕ ನಗರದ ಬೀದಿಗಳಲ್ಲಿ ಬೆಂಕಿಯ ನದಿ ಹರಿಯುತ್ತಿತ್ತು. ಇದರ ಪರಿಣಾಮ ದೂರದಲ್ಲಿದ್ದ ಹಲವು ಪೆಟ್ರೋಲಿಯಂ ಉತ್ಪನ್ನಗಳ ಸಾರಿಗೆ ಕೇಂದ್ರಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ನಿಯಂತ್ರಿಸಲು ತುರ್ತು ಸಿಬ್ಬಂದಿ ರಾತ್ರಿ ಪೂರ್ತಿ ಶ್ರಮಿಸಿದರು.
CRAZY FOOTAGE 🔴
— Open Source Intel (@Osint613) March 7, 2026
Apocalyptic scenes coming out of Tehran right now pic.twitter.com/VVejLZfaVq
ಈ ದಾಳಿಯ ಬಳಿಕ ನಗರದಲ್ಲಿ ಕಪ್ಪು ಮಳೆಯಾಗಿತ್ತು. ಇದು ತೈಲ ಮತ್ತು ಸುಡುವ ಸಂಗ್ರಹಣಾ ಸೌಲಭ್ಯಗಳು ಮತ್ತು ಇಂಧನದಿಂದ ಮಿಶ್ರಿತ ಮಳೆ ನೀರು ಎಂಬುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಘಟನೆಯ ಬಳಿಕ ನಗರದಲ್ಲಿ ತಾತ್ಕಾಲಿಕವಾಗಿ ಇಂಧನ ವಿತರಣೆಯನ್ನು ಸ್ಥಗಿತಗೊಳಿಸಲಾಯಿತು. ದಟ್ಟ ಹೊಗೆಯ ಪರಿಣಾಮ ಭಾನುವಾರ ಬೆಳಗ್ಗೆ ಟೆಹರಾನ್ ನಲ್ಲಿ ಗಾಢವಾದ ಮಬ್ಬು ಆವರಿಸಿತ್ತು. ಗಾಳಿಯಲ್ಲಿ ಇಂಧನದ ವಾಸನೆ ತುಂಬಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಸ್ರೇಲ್ ದಾಳಿಯ ಬಳಿಕ ಇಂಧನ ನಿಕ್ಷೇಪಗಳು ಸುರಕ್ಷಿತವಾಗಿರುವುದಾಗಿ ತಿಳಿಸಿರುವ ಇರಾನ್ ಅಧಿಕಾರಿಗಳು, ಇರಾನ್ ಮಿಲಿಟರಿ ಬಳಕೆಗಾಗಿ ಅವುಗಳನ್ನು ಬಳಸುವುದನ್ನು ತಡೆಯಲು ಇಸ್ರೇಲ್ ಮಿಲಿಟರಿ ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
🔥BREAKING
— NUNU GLOBAL NEWS (@NUNUCOINnunu) March 8, 2026
After #Israel air strikes in #Iran #IranIsraelWar And #USIranWar turned into river of fire into Iran https://t.co/NQ2zOAJFRS pic.twitter.com/3ZbJvfCYnl
ಮುಗಿಯದ ಯುದ್ಧ: ಗಲ್ಫ್ ರಾಷ್ಟ್ರಗಳಿಂದ 52,000ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ; ಕೇಂದ್ರ ಸರ್ಕಾರದಿಂದ ನಿಗಾ
ಇದು ಒಂದು ಎಚ್ಚರಿಕೆ. ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಇರಾನ್‌ನ ತಜ್ಞರ ಸಭೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಉತ್ತರಾಧಿಕಾರಿ ಆಯ್ಕೆ ಸಭೆಯಲ್ಲಿ ಭಾಗವಹಿಸಲು ಉದ್ದೇಶಿಸಿರುವ ಎಲ್ಲರಿಗೂ ನಾವು ನಿಮ್ಮನ್ನು ಗುರಿಯಾಗಿಸಲು ಹಿಂಜರಿಯುವುದಿಲ್ಲ ಎಂದು ಇಸ್ರೇಲ್ ಮಾಧ್ಯಮವೊಂದು ವರದಿಯಲ್ಲಿ ಹೇಳಿದೆ.
ಫೆಬ್ರವರಿ 28ರ ಬಳಿಕ ಇಸ್ರೇಲ್ ಇರಾನ್ ಮೇಲೆ ಸುಮಾರು 3,400 ದಾಳಿಗಳನ್ನು ನಡೆಸಿದೆ. ಇದರಲ್ಲಿ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ 16 ಮಿಲಿಟರಿ ವಿಮಾನಗಳು ಮತ್ತು ಬಹು ತೈಲ ಡಿಪೋಗಳು ಸೇರಿವೆ. ದಾಳಿಯಲ್ಲಿ ಸುಮಾರು 1,200 ನಾಗರಿಕರು ಸಾವನ್ನಪ್ಪಿದ್ದು, 10,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.