ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರನ್ನರ್‌ಗಳ ಜತೆ 38 ಕಿಲೋ ಮೀಟರ್‌ ಓಡಿ ಸಾಹಸ ಮೆರೆದ ಬೀದಿ ನಾಯಿ: ಮುದ್ದಾದ ವಿಡಿಯೊ ನೋಡಿ

Viral Video: ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಸ್ಥಳೀಯ ಬ್ಯಾಡ್ಮಿಂಟನ್ ಆಟಗಾರ ಪ್ರಥಮ್ ಮತ್ತು ಅವರ ತಂಡ ಮ್ಯಾರಥಾನ್ ಓಟದಲ್ಲಿ ತೊಡಗಿಸಿಕೊಂಡಾಗ ಶ್ವಾನವೊಂದು ಸಾಥ್ ನೀಡಿದೆ. ರನ್ನಿಂಗ್‌ನಲ್ಲಿ ತಾನು ಏನೂ ಕಮ್ಮಿ ಇಲ್ಲ ಎಂಬಂತೆ ಬೀದಿ ನಾಯಿಯೊಂದು ಸುಮಾರು 38 ಕಿಲೋ ಮೀಟರ್ ಓಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ.

38 ಕಿ.ಮೀ. ಓಡಿ ಓಟಗಾರರಿಗೇ ಸ್ಪೂರ್ತಿಯಾದ ಶ್ವಾನ: ಕ್ಯೂಟ್ ವಿಡಿಯೊ ಇಲ್ಲಿದೆ

ಪ್ರಥಮ್ ಮತ್ತು ಶ್ವಾನ -

Profile
Pushpa Kumari Oct 7, 2026 8:48 PM

ಲಖನೌ, ಅ. 7: ಶ್ವಾನಗಳು ಬುದ್ಧಿವಂತ ಪ್ರಾಣಿ ಎನ್ನುವುದು ಹಲವು ಭಾರಿ ಸಾಬೀತಾಗಿದೆ. ಇದೀಗ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇದನ್ನು ಸಾಬೀತುಪಡಿಸುವಂತಹ ಅಚ್ಚರಿಯ ಘಟನೆಯೊಂದು ನಡೆದಿದೆ. ಸ್ಥಳೀಯ ಬ್ಯಾಡ್ಮಿಂಟನ್ ಆಟಗಾರ ಪ್ರಥಮ್ ಮತ್ತು ಅವರ ತಂಡ ಮ್ಯಾರಥಾನ್ ಓಟ ಕೈಗೊಂಡಾಗ ನಾಯಿಯೊಂದು ಸಾಥ್ ನೀಡಿದೆ. ರನ್ನಿಂಗ್‌ನಲ್ಲಿ ತಾನು ಏನೂ ಕಮ್ಮಿ ಇಲ್ಲ ಎಂಬಂತೆ ಬೀದಿ ನಾಯಿಯೊಂದು ಸುಮಾರು 38 ಕಿಲೋ ಮೀಟರ್ ಓಡಿ ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಶ್ವಾನ ಪ್ರಿಯರು ಈ ಸಾಹಸಕ್ಕೆ (Viral News) ಫಿದಾ ಆಗಿದ್ದಾರೆ.

ಸ್ಥಳೀಯ ಬ್ಯಾಡ್ಮಿಂಟನ್ ಆಟಗಾರ ಪ್ರಥಮ್ ಅವರ ತಂಡವು ಮ್ಯಾರಥಾನ್‌ಗಾಗಿ ಸಿದ್ದತೆ ಮಾಡುತ್ತಿದ್ದಾಗ ಬೀದಿ ನಾಯಿಯೊಂದು ಬಾಲ ಅಲ್ಲಡಿಸುತ್ತ ಸಾಥ್ ನೀಡಿದೆ. ಅಷ್ಟೇ ಅಲ್ಲದೆ ಸುಮಾರು ಸುಮಾರು 38 ಕಿಲೋ ಮೀಟರ್ ಓಡಿ ಎಲ್ಲರನ್ನೂ ಬೆರಗಾಗಿಸಿದೆ.

ವಿಡಿಯೊ ನೋಡಿ:

​ನೆಟ್ಟಿಗರು ಈ ಶ್ವಾನಕ್ಕೆ ಪ್ರಸಿದ್ಧ ಅಲ್ಟ್ರಾ ಮ್ಯಾರಥಾನ್ ರನ್ನರ್ ಡೇವಿಡ್ ಗೊಗಿನ್ಸ್ ಅವರ ನೆನಪಿಗಾಗಿ 'ಪಿಳ್ಳು ಗೊಗಿನ್ಸ್' ಎಂದು ಹೆಸರಿಟ್ಟು ಕರೆದಿದ್ದಾರೆ. ಪ್ರಥಮ್ ಪ್ರಕಾರ, ಓಟದ ಸಮಯದಲ್ಲಿ ಅವರು 43 ಕಿಲೋ ಮೀಟರ್ ಕ್ರಮಿಸಿದ್ದಾರೆ. ಪಿಳ್ಳು ಸುಮಾರು 38 ಕಿಲೋ ಮೀಟರ್‌ವರೆಗೆ ಓಡಿದೆ. ಓಟಗಾರರು ಎಲ್ಲೆಲ್ಲಿ ಬ್ರೇಕ್ ತಗೊಂಡು ನೀರು ಕುಡಿಯುತ್ತಿದ್ದಾರೋ ಅಲ್ಲೆಲ್ಲ ಪಿಳ್ಳು ಕೂಡ ವಿಶ್ರಾಂತಿ ಪಡೆಯುತ್ತ ನಿಂತಿದೆ.

ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ

ಪ್ರಥಮ್ ಅವರ ತಂಡವು ಈ ನಾಯಿ ಕೆಲವು ದೂರ ಓಡಿದ ನಂತರ ಸುಸ್ತಾಗಿ ನಿಲ್ಲಬಹುದು ಎಂದು ಭಾವಿಸಿತ್ತು. ಆದರ ಪಿಳ್ಳು ಯಾವುದೇ ಆಯಾಸವಿಲ್ಲದೆ 38 ಕಿಲೋ ಮೀಟರ್‌ ಓಡಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಪಿಳ್ಳು ನಿಷ್ಠೆಯನ್ನು ಹೊಗಳಿದ್ದಾರೆ‌. ಒಬ್ಬರು, ʼʼಪಿಳ್ಳು ತುಂಬಾ ಮುದ್ದಾಗಿ ಕಾಣುತ್ತಾಳೆʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಅದರ ನಿಷ್ಠೆಯನ್ನು ಎಂದಿಗೂ ನಿರ್ಣಯಿಸಲು ಸಾಧ್ಯವಿಲ್ಲʼʼ ಎಂದು ಕಾಮೆಂಟ್ ಮಾಡಿದ್ದಾರೆ.