ಅಂತರ ಕಾಯ್ದುಕೊಳ್ಳಿ...ಇಎಂಐ ಬಾಕಿ ಇದೆ! ಮಂಗಳೂರಿನ ಆಲ್ಟೋ ಕಾರಿನ ಬರಹಕ್ಕೆ ನೆಟ್ಟಿಗರು ಫಿದಾ
Viral Video: ಜನರು ತಮ್ಮ ವಾಹನಗಳಲ್ಲಿ ತಮಾಷೆಯ ಸಾಲುಗಳನ್ನು ಬರೆದಿರುವುದನ್ನು ನೀವು ಗಮನಿಸಿರಬಹುದು. ಅನೇಕ ಟ್ರಕ್, ಆಟೋ ಮತ್ತು ಬಸ್‌ಗಳಲ್ಲಿ ಬರೆದಿರುವ ಫನ್ ಸಾಲುಗಳು ಟ್ರಾಫಿಕ್‌ನಲ್ಲಿ ಕಾಯುತ್ತಿರುವ ಜನರನ್ನು ನಗಿಸಿದ ಉದಾಹರಣೆ ಇದೆ. ಇದೀಗ ಮಂಗಳೂರು ನೋಂದಣಿಯ ಮಾರುತಿ ಸುಜುಕಿ ಆಲ್ಟೋ ಕಾರಿನ ಹಿಂಭಾಗದಲ್ಲಿ ಬರೆದಿರುವ ಸಾಲು ನೆಟ್ಟಿಗರ ಗಮನ ಸೆಳೆದಿದೆ.
ವೈರಲ್ ಆಗ್ತಿದೆ ಮಂಗಳೂರಿನ ಆಲ್ಟೋ ಕಾರ್‌ನ ಬರಹ -
ಮಂಗಳೂರು, ಡಿ. 23: ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುವ ಕೆಲವೊಂದು ಪೋಸ್ಟ್‌ಗಳು ಅಚ್ಚರಿ ಮೂಡಿಸಿದರೆ ಇನ್ನು ಕೆಲವೊಂದು ಎಂತವರನ್ನೂ ನಗೆಯಲ್ಲಿ ತೇಲಿಸಿಬಿಡುತ್ತವೆ. ಇದೀಗ ಆಲ್ಟೋ ಕಾರೊಂದರಲ್ಲಿ ಬರೆದಿರುವ ಹಿಂಬರಹವೊಂದು ಭಾರಿ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ವಾಹನಗಳ ಮೇಲೆ ತಮ್ಮ ತಂದೆ ತಾಯಿ ಹೆಸರು ಅಥವಾ ತಮಗಿಷ್ಟದವರ ಹೆಸರನ್ನು ಬರೆದಿರುವುದನ್ನು ನೀವು ಗಮನಿಸರಬಹುದು. ಅದಕ್ಕಿಂತ ಭಿನ್ನವಾಗಿ ತಮಾಷೆಯ ಸಾಲು ಬರೆದಿರುವ ಆಲ್ಟೋ ಕಾರ್ ಮಂಗಳೂರು ನಗರದಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದ್ದು, ಸದ್ಯ ಎಲ್ಲರನ್ನು ಸೆಳೆಯುವಂತೆ ಮಾಡಿದೆ (Viral Video).
ಕೆಲವರು ತಮ್ಮ ವಾಹನಗಳಲ್ಲಿ ತಮಾಷೆಯ ಸಾಲುಗಳನ್ನು ಬರೆದಿರುವುದನ್ನು ನೀವೂ ಗಮನಿಸಿರ ಬಹುದು. ಕೆಲವೊಮ್ಮೆ ಇಂತ ಫನ್ನು ಸಾಲುಗಳುಗಳನ್ನು ಬರೆದಿರುವ ವಾಹನಗಳು ಟ್ರಾಫಿಕ್‌ನಲ್ಲಿ ಸಿಕ್ಕಿ ತುಟಿಯಂಚಿನಲ್ಲಿ ನಗು ಅರಳಿಸಲು ಸಮರ್ಥವಾಗುತ್ತವೆ. ಇದೀಗ ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಚಲಿಸುತ್ತಿರುವ ಮಾರುತಿ ಸುಜುಕಿ ಆಲ್ಟೋ ಕಾರ್‌ನ ಹಿಂಭಾಗದಲ್ಲಿ ಬರೆದ ಸಾಲು ನೆಟ್ಟಿಗರ ಗಮನ ಸೆಳೆಯುವಲ್ಲಿ ಸಫಲವಾಗಿದೆ.
ಆಲ್ಟೋ ಕಾರಿನ ಬರಹಕ್ಕೆ ನೆಟ್ಟಿಗರು ಫಿದಾ: ವಿಡಿಯೋ ನೋಡಿ
ಈ ಮಾರುತಿ ಸುಜುಕಿ ಆಲ್ಟೋ ಕಾರಿನ ಹಿಂಭಾಗದಲ್ಲಿ ಸಾಮಾನ್ಯ ಸುರಕ್ಷತಾ ಎಚ್ಚರಿಕೆಯ ಬದಲಿಗೆ, "ಅಂತರ ಕಾಯ್ದುಕೊಳ್ಳಿ...ಇಎಂಐ ಬಾಕಿ ಇದೆ" ಎಂದು ಬರೆಯಲಾಗಿದೆ. ಬ್ಯಾಂಕ್ ಸಾಲದ ಕಂತುಗಳನ್ನು ಕಟ್ಟುವ ಪ್ರತಿಯೊಬ್ಬ ವ್ಯಕ್ತಿಗೂ ಈ ಸಾಲುಗಳು ತಕ್ಷಣಕ್ಕೆ ಕನೆಕ್ಟ್ ಆಗುತ್ತವೆ ಎಂದಿದ್ದಾರೆ ನೆಟ್ಟಿಗರು. ತನ್ನ ಕಾರಿಗೆ ಏನಾದರೂ ಸಮಸ್ಯೆಯಾದಲ್ಲಿ ಸಾಲ ತೀರಿಸುವುದು ಕಷ್ಟ ಎಂಬರ್ಥದ ಈ ಎಚ್ಚರಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ಹುಚ್ಚಾಟ ಮೆರೆದು ಸಿಂಹಿಣಿಯ ದಾಳಿಗೆ ಪ್ರಾಣ ಕಳೆದುಕೊಂಡ ಯುವಕ: ಎದೆ ಝಲ್ ಎನಿಸುತ್ತೆ ಈ ದೃಶ್ಯ!
ಈ ವಿಡಿಯೊ ಸದ್ಯ ಭಾರೀ ವೈರಲ್ ಆಗಿದ್ದು ನೆಟ್ಟಿಗರು ತಮಾಷೆಯ ಕಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬರು ʼʼಬಜೆಟ್ ಮತ್ತು ಬದ್ಧತೆಗಳನ್ನು ಹೊಂದಿರುವ ಕುಟುಂಬದ ಅಮೂಲ್ಯ ವ್ಯಕ್ತಿʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ʼʼಬ್ಯಾಂಕ್‌ಗ ಅತ್ಯಂತ ಪ್ರಾಮಾಣಿಕ ಗ್ರಾಹಕ ಇವರುʼʼ ಎಂದಿದ್ದಾರೆ. ʼʼಪುರುಷರಿಗೆ ಮಾತ್ರ ಈ ನೋವು ತಿಳಿದಿದೆʼʼ ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಮಂಗಳೂರಿನ ಈ ಆಲ್ಟೋ ಕಾರ್‌ನ ಬರಹ ವೈರಲ್ ಆಗಿದೆ.