Viral Video: ಬಸ್‌ನಲ್ಲಿ ಪ್ರೇಮಿಗಳ ಅತಿರೇಕದ ರೊಮ್ಯಾನ್ಸ್; ಮೈಮರೆತು ಲಿಪ್‌ಲಾಕ್ ಮಾಡಿಕೊಂಡ ವಿದ್ಯಾರ್ಥಿಗಳು
Viral News: ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳಿಬ್ಬರು ಬಸ್‌ನಲ್ಲೇ, ಸಾರ್ವಜನಿಕ ಸ್ಥಳದಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಸ್‌ನ ಹಿಂದಿನ ಸೀಟಿನಲ್ಲಿ ಕುಳಿತ ಇವರು ಲಿಪ್‌ಲಾಕ್ ಮಾಡಿದ್ದು, ಈ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.


ಹೊಸದಿಲ್ಲಿ: ಪ್ರೀತಿಯ ಉನ್ಮಾದದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ (Public Places) ಮಿತಿಮೀರಿ ವರ್ತಿಸುವ ಪ್ರೇಮಿಗಳ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿರುತ್ತವೆ. ಇದೀಗ, ಬಸ್‌ನಲ್ಲಿ ವಿದ್ಯಾರ್ಥಿ ಪ್ರೇಮಿಗಳು ತಬ್ಬಿಕೊಂಡು ಲಿಪ್ ಲಾಕ್ (Kissing) ಮಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ (Viral Video). ಈ ಘಟನೆಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೊದಲ್ಲಿ ಬಸ್‌ನ ಹಿಂಬದಿ ಸೀಟಿನಲ್ಲಿ ಕುಳಿತಿರುವ, ಸಮವಸ್ತ್ರ ಧರಿಸಿರುವ ಯುವಕ-ಯುವತಿ ಸುತ್ತಲಿನ ಜನರ ಪರಿಜ್ಞಾನವಿಲ್ಲದೆ ತಬ್ಬಿಕೊಂಡು, ಚುಂಬಿಸುವ ದೃಶ್ಯ ಕಂಡುಬಂದಿದೆ. ಈ ಅತಿರೇಕದ ವರ್ತನೆಯನ್ನು ಯಾರೋ ಪ್ರಯಾಣಿಕ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. yours.jaans ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊವನ್ನು ಮೇ 27ರಂದು ಪೋಸ್ಟ್ ಮಾಡಲಾಗಿದ್ದು, ಇದು 18 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ವೈರಲ್ ವಿಡಿಯೊ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Viral Video: ರೀಲ್ಸ್ ಶೋಕಿಗಾಗಿ ಸೇತುವೆ ಮೇಲೆ ಆಟೋದಲ್ಲಿ ಸ್ಟಂಟ್; ಕೊನೆಗೆ ಆಗಿದ್ದೇನು? ವಿಡಿಯೋ ನೋಡಿ
ವಿಡಿಯೊಗೆ ಸಾವಿರಾರು ಕಾಮೆಂಟ್‌ಗಳು ಬಂದಿದ್ದು, ಬಹುತೇಕರು ಈ ವರ್ತನೆಯನ್ನು ಖಂಡಿಸಿದ್ದಾರೆ. “ಅವರು ತಪ್ಪು ಮಾಡಿದ್ದಾರೆ, ಆದರೆ ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚುವ ಅಗತ್ಯವಿತ್ತೇ?” ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಸಭ್ಯ ವರ್ತನೆಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ. “ಇದು ನಾಚಿಕೆಗೇಡಿನ ಸಂಗತಿ” ಎಂದು ಮತ್ತೊಬ್ಬ ಬಳಕೆದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ವರ್ತನೆಯ ಕನಿಷ್ಠ ಜ್ಞಾನದ ಕೊರತೆಯನ್ನು ಎತ್ತಿ ತೋರಿಸಿದೆ. ಬಸ್‌ನಂತಹ ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಕೃತ್ಯಗಳು ಇತರ ಪ್ರಯಾಣಿಕರಿಗೆ ಮುಜುಗರ ಉಂಟುಮಾಡುತ್ತವೆ. ಈ ಜೋಡಿಯ ವರ್ತನೆಯನ್ನು ಖಂಡಿಸಿರುವ ನೆಟ್ಟಿಗರು, ಸಾರ್ವಜನಿಕ ಸ್ಥಳಗಳಲ್ಲಿ ಶಿಷ್ಟಾಚಾರವನ್ನು ಕಾಪಾಡುವಂತೆ ಒತ್ತಾಯಿಸಿದ್ದಾರೆ.
ಒಂದೆಡೆ, ಪ್ರೇಮಿಗಳ ಅತಿರೇಕದ ಕೃತ್ಯವನ್ನು ಟೀಕಿಸಲಾಗಿದ್ದು, ಇನ್ನೊಂದೆಡೆ ವಿಡಿಯೊ ರೆಕಾರ್ಡ್ ಮಾಡಿ ಹಂಚಿಕೊಂಡಿರುವುದು ಗೌಪ್ಯತೆಯ ಉಲ್ಲಂಘನೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಯಮಿತ ವರ್ತನೆಯ ಅಗತ್ಯವನ್ನು ಈ ಘಟನೆ ಒತ್ತಿಹೇಳಿದೆ.