Viral News: ದಲಿತರ ಮನೆಯಲ್ಲಿ ಊಟ ಮಾಡಿದ ಯುವಕ; ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು!
ದಲಿತ ಕುಟುಂಬವೊಂದು ನಡೆಸಿದ ತಿಥಿ ಕಾರ್ಯಕ್ರಮದಲ್ಲಿ ಊಟ ಮಾಡಿದಕ್ಕೆ ಯುವಕ ಹಾಗೂ ಆತನ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಿದ ಘಟನೆ ಉದಯಪುರದ ಪಿಪಾರಿಯಾ ಪುರಿಯಾ ಗ್ರಾಮದಲ್ಲಿ ನಡೆದಿದೆ. ಭರತ್ ಸಿಂಗ್ ಧಕಾಡ್ ಎಂಬಾತ ದಲಿತ ಕುಟುಂಬವೊಂದು ನಡೆಸಿದ ತಿಥಿ ಸಮಾರಂಭದಲ್ಲಿ ಊಟ ಮಾಡಿದ್ದಕ್ಕಾಗಿ ತಮ್ಮ ಕುಟುಂಬವನ್ನು ಗ್ರಾಮ ಪಂಚಾಯತ್ ಬಹಿಷ್ಕರಿಸಿದೆ ಎಂದು ಆರೋಪಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಭೋಪಾಲ್: ದಲಿತ ಕುಟುಂಬವೊಂದು ನಡೆಸಿದ ತಿಥಿ ಕಾರ್ಯಕ್ರಮದಲ್ಲಿ ಊಟ ಮಾಡಿದಕ್ಕೆ ಯುವಕ ಹಾಗೂ ಆತನ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಿದ (Social boycott ) ಘಟನೆ ಮಧ್ಯ ಪ್ರದೇಶ (Madhya Pradesh) ಉದಯಪುರದ ಪಿಪಾರಿಯಾ ಪುರಿಯಾ ಗ್ರಾಮದಲ್ಲಿ ನಡೆದಿದೆ. ಭರತ್ ಸಿಂಗ್ ಧಕಾಡ್ ಎಂಬಾತ ದಲಿತ ಕುಟುಂಬವೊಂದು ನಡೆಸಿದ ತಿಥಿ ಸಮಾರಂಭದಲ್ಲಿ ಊಟ ಮಾಡಿದ್ದಕ್ಕಾಗಿ ತಮ್ಮ ಕುಟುಂಬವನ್ನು ಗ್ರಾಮ ಪಂಚಾಯತ್ ಬಹಿಷ್ಕರಿಸಿದೆ ಎಂದು ಆರೋಪಿಸಿದ್ದಾರೆ. ದಲಿತ ವ್ಯಕ್ತಿಯ ಮನೆಯಲ್ಲಿ ಊಟ ಮಾಡಿದ್ದಕ್ಕಾಗಿ ಗ್ರಾಮ ಪಂಚಾಯತ್ ಮೇಲ್ಜಾತಿಯ ಸಮುದಾಯದ ಮೂವರು ಸದಸ್ಯರಿಗೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಿದೆ.
ಅಷ್ಟೇ ಅಲ್ಲದೇ, ಊರಿನ ಯಾವುದೇ ಕಾರ್ಯಕ್ರಮ ಹಾಗೂ ಹಬ್ಬಗಳಲ್ಲಿ ಭಾಗವಹಿಸದಂತೆ ಆತನಿಗೆ ಎಚ್ಚರಿಕೆ ನೀಡಲಾಗಿದೆ. ಈ ಘಟನೆ ಮಂಗಳವಾರ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ದೂರಿನ ಪ್ರಕಾರ, ದಲಿತ ಕುಟುಂಬದ ಮನೆಯಲ್ಲಿ ಆಹಾರ ಸೇವಿಸಿದ್ದಕ್ಕಾಗಿ ಪಂಚಾಯತ್ ಮೂವರು ಮೇಲ್ಜಾತಿಯ ಪುರುಷರಿಗೆ ಬಹಿಷ್ಕಾರ ಘೋಷಿಸಿತು ಮತ್ತು ಬಹಿಷ್ಕಾರವನ್ನು ತಪ್ಪಿಸಲು ಷರತ್ತುಗಳನ್ನು ವಿಧಿಸಿತು.
ಉದಯಪುರ ತಹಶೀಲ್ದಾರ್ ದಿನೇಶ್ ಬರ್ಗಲೆ, ಧಾಕಡ್ ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಪಂಚಾಯತ್ ಸಾಮಾಜಿಕ ಬಹಿಷ್ಕಾರ ಆದೇಶವನ್ನು ನೀಡಿದೆ ಎಂದು ಆರೋಪಿಸಿದ್ದಾರೆ. ಧಾಕಡ್ ಸಂಬಂಧಪಟ್ಟ ಗ್ರಾಮ ಪಂಚಾಯತ್‌ನ ಸರಪಂಚ, ಉಪ ಸರಪಂಚ ಮತ್ತು ಪಂಚರ ವಿರುದ್ಧ ಈ ಆರೋಪಗಳನ್ನು ಹೊರಿಸಿದ್ದಾರೆ ಎಂದು ಅವರು ಹೇಳಿದರು. ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ. ಆರೋಪಗಳು ನಿಜವೆಂದು ಕಂಡುಬಂದರೆ, ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಾರ್ಗಲೆ ಹೇಳಿದರು.
25 ಜನರನ್ನು ಬಲಿ ಪಡಿದ ಗೋವಾ ನೈಟ್ ಕ್ಲಬ್; ಧಗಧಗ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್
ಗ್ರಾಮ ಪಂಚಾಯತ್ ಸಹಾಯಕ ಕಾರ್ಯದರ್ಶಿ ಮನೋಜ್ ಪಟೇಲ್ ಮತ್ತು ಶಿಕ್ಷಕ ಸತ್ಯೇಂದ್ರ ಸಿಂಗ್ ರಘುವಂಶಿ ಅವರು ದಲಿತ ಕುಟುಂಬದ ಮನೆಯಲ್ಲಿ ಶ್ರಾದ್ಧ ಸಮಾರಂಭದ ಸಂದರ್ಭದಲ್ಲಿ ಊಟ ಮಾಡಿದ್ದಾಗಿ ಧಾಕಡ್ ಹೇಳಿದ್ದಾರೆ. ನಂತರ ಪಂಚಾಯತ್ ಈ ಕೃತ್ಯವನ್ನು "ಗೋಹತ್ಯೆಗಿಂತ ದೊಡ್ಡ ಪಾಪ" ಎಂದು ಕರೆಯುವ ನಿರ್ಣಯವನ್ನು ಅಂಗೀಕರಿಸಿ ತು, ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಮತ್ತು ಸಮುದಾಯ ಹಬ್ಬವನ್ನು ಆಯೋಜಿಸುವುದು ಸೇರಿದಂತೆ ಶುದ್ಧೀಕರಣ ಆಚರಣೆಗಳನ್ನು ಒತ್ತಾಯಿಸಿತು. ಪಟೇಲ್ ಮತ್ತು ರಘುವಂಶಿ ಇದನ್ನು ಪಾಲಿಸಿದಾಗ, ಧಾಕಡ್ ನಿರಾಕರಿಸಿದರು, ನಂತರ ಅವರನ್ನು ಸಾಮಾಜಿಕ ಕಾರ್ಯಕ್ರಮಗಳಿಂದ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ. ಅ