ಪಾಠ ಮಾಡುವ ಬದಲು ಮೊಬೈಲ್ ಬಳಕೆ; ತರಗತಿಯಲ್ಲೇ ವಿದ್ಯಾರ್ಥಿನಿಯರ ಇನ್‌ಸ್ಟಾಗ್ರಾಮ್ ಐಡಿ ಕೇಳಿದ ಶಿಕ್ಷಕ!
Viral News: ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯ ಕೋಟ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಮೊಬೈಲ್ ನೋಡುತ್ತಾ ಸಮಯ ಕಳೆದಿದ್ದಾರೆ. ಶಿಕ್ಷಕ ತರಗತಿಯಲ್ಲೇ ಮೊಬೈಲ್‌ನಲ್ಲಿ ಗೇಮ್ ಆಡುತ್ತಾ, ವಿದ್ಯಾರ್ಥಿನಿಯರ ಇನ್‌ಸ್ಟಾಗ್ರಾಮ್ ಐಡಿ ಕೇಳುತ್ತಿದ್ದಾರೆ ಎಂದು ಮಕ್ಕಳು ದೂರಿದ್ದಾರೆ. ಈತನ ವರ್ತನೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಸಂಗ್ರಹ ಚಿತ್ರ -
ಮಧ್ಯಪ್ರದೇಶ,ಸೆ.30: ಇತ್ತೀಚೆಗೆ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಗಳು ದೊರೆಯುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಇದಕ್ಕಾಗಿ ಪೋಷಕರು ದುಬಾರಿ ಹಣ ಪಾವತಿಸಿ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇದೀಗ ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯ ಕೋಟ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಮೊಬೈಲ್ ನೋಡುತ್ತಾ ಸಮಯ ಕಳೆದಿದ್ದಾರೆ. ಶಿಕ್ಷಕ ತರಗತಿಯಲ್ಲೇ ಮೊಬೈಲ್‌ನಲ್ಲಿ ಗೇಮ್ ಆಡುತ್ತಾ, ವಿದ್ಯಾರ್ಥಿನಿಯರ ಇನ್‌ಸ್ಟಾಗ್ರಾಮ್ ಐಡಿ ಕೇಳುತ್ತಿದ್ದಾರೆ ಎಂದು ಮಕ್ಕಳು ದೂರಿದ್ದಾರೆ. ಈತನ ವರ್ತನೆ ವಿರುದ್ಧ ನೆಟ್ಟಿಗರು (Viral News) ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇತ್ತೀಚೆಗೆ ಸರಕಾರಿ ಶಾಲೆಯಲ್ಲಿ ಶಿಕ್ಷಕರು ಸಮಯ ವ್ಯರ್ಥ ಮಾಡುವ ಅನೇಕ ಘಟನೆಗಳು ನಡೆದಿವೆ. ಇದೀಗ ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯ ಕೋಟ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನು ಪಾಠ ಮಾಡುವ ಬದಲು ಮೊಬೈಲ್ ನೋಡುತ್ತಾ ಸಮಯ ಕಳೆಯುತ್ತಿದ್ದಾನೆ. ಶಿಕ್ಷಕನ ವಿರುದ್ಧದ ಈ ಆರೋಪಗಳು ಸರ್ಕಾರಿ ಶಾಲೆಯ ಬೋಧನಾ ಪದ್ಧತಿ ಮತ್ತು ಶಿಸ್ತಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ವಿಡಿಯೋ ನೋಡಿ:
मध्य प्रदेश के भिंड जिले थाना नयागांव क्षेत्र के ग्राम पंचायत कोट हाई स्कूल का है। छात्राओं ने शिक्षक पर पढ़ाई न कराने, ताश-गेम खेलने और इंस्टाग्राम आईडी मांगने का आरोप लगाया है। स्थानीय न्यूज रिपोर्ट के अनुसार मामला सामने आया है। @CMMadhyaPradesh @MPPoliceDeptt pic.twitter.com/2JmxlAkEIJ
— Er Manish Rajak (@ManishCEO2) September 30, 2026
ಶಿಕ್ಷಕನನ್ನು ಪ್ರಶಾಂತ್ ಎಂದು ಗುರುತಿಸಲಾಗಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ನೀಡಿದ ದೂರುಗಳಿಂದ ಈ ವಿಷಯ ಬೆಳಕಿಗೆ ಬಂದಿದೆ. ಶಿಕ್ಷಕರು ಪಾಠ ಮಾಡದೆ, ಶಾಲಾ ಅವಧಿಯಲ್ಲಿ ಟೇಬಲ್ ಮೇಲೆ ಕಾಲಿಟ್ಟುಕೊಂಡು ಮೊಬೈಲ್‌ನಲ್ಲಿ ಗೇಮ್‌ಗಳನ್ನು ಆಡುತ್ತಿದ್ದರು. ವಿದ್ಯಾರ್ಥಿ ನಿಯರ ಇನ್‌ಸ್ಟಾಗ್ರಾಮ್ ಐಡಿಗಳನ್ನು ಕೇಳುತ್ತಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಈ ವಿಷಯ ತಿಳಿದು ಮಾಧ್ಯಮದವರು ಶಾಲೆಯೊಳಗೆ ಶಿಕ್ಷಕ ಪ್ರಶಾಂತ್ ಅವರನ್ನು ಪ್ರಶ್ನಿಸಿದಾಗ, ಅವರು ಯಾವುದೇ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಸದ್ಯ ಶಿಕ್ಷಕನ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.