ಕಂಪನಿಯ ಮಾಲೀಕನಂತೆ ಯೋಚಿಸು ಎಂದಿದ್ದಕ್ಕೆ ಸಿಇಒನ ಬಾಯಿ ಮುಚ್ಚಿಸುವಂತೆ ಉತ್ತರ ನೀಡಿದ Gen Z ಉದ್ಯೋಗಿ! ವಿಡಿಯೋ ನೋಡಿ
Viral News: ಕಾರ್ಪೊರೇಟ್ ಜಾಬ್ ಅಂದಾಗ ಕೆಲಸದ ಒತ್ತಡ, ಕಂಪನಿ ಟಾರ್ಗೆಟ್ ,ಪ್ಯಾಕೇಜ್ ವಿಚಾರ ವಾಗಿ ಚರ್ಚೆಗಳು ಆಗುತ್ತಿರುತ್ತವೆ. ಇದೀಗ ಕೆಲಸದ ಅವಧಿ ಮತ್ತು ಕಂಪನಿಯ ಬದ್ಧತೆಯ ಕುರಿತು ಜೆನ್ ಝಿ ಉದ್ಯೋಗಿ ಹಾಗೂ ಕಂಪನಿಯ ಸಿಇಒ ನಡುವೆ ಉಂಟಾದ ಸಂಭಾಷಣೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ..
ಸಂಗ್ರಹ ಚಿತ್ರ -
ನವದೆಹಲಿ,ಸೆ.30: ಕಾರ್ಪೊರೇಟ್ ಜಾಬ್ ಅಂದಾಗ ಕೆಲಸದ ಒತ್ತಡ, ಕಂಪನಿ ಟಾರ್ಗೆಟ್ ,ಪ್ಯಾಕೇಜ್ ವಿಚಾರವಾಗಿ ಚರ್ಚೆಗಳು ಆಗುತ್ತಿರುತ್ತವೆ. ಇದೀಗ ಕೆಲಸದ ಅವಧಿ ಮತ್ತು ಕಂಪನಿಯ ಬದ್ಧತೆಯ ಕುರಿತು ಜೆನ್ ಝಿ ಉದ್ಯೋಗಿ ಹಾಗೂ ಕಂಪನಿಯ ಸಿಇಒ ನಡುವೆ ಉಂಟಾದ ಸಂಭಾಷಣೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ. ಕಂಪನಿಯ ಮಾಲೀಕನಂತೆ ಯೋಚಿಸಿ ಕೆಲಸ ಮಾಡು ಎಂದು ಹೇಳಿದಾಗ ಉದ್ಯೋಗಿ ಕೊಟ್ಟ ಉತ್ತರಕ್ಕೆ ಸಿಇಓ ಶಾಕ್ ಆಗಿದ್ದಾರೆ.
'ಜೆನ್ ಝಡ್' ಉದ್ಯೋಗಿ ಮತ್ತು ಅವರ ಸಿಇಒ ನಡುವಿನ ಈ ಸಂಭಾಷಣೆಯೂ ಕಂಪನಿಗಳು ತಮ್ಮ ಸಿಬ್ಬಂದಿಯಿಂದ ಏನನ್ನು ನಿರೀಕ್ಷಿಸುತ್ತವೆ ಎಂಬುದರ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ. ಉದ್ಯೋಗಿಗೆ ಕಂಪನಿಯ ಬೆಳವಣಿಗೆಗೆ ಹೆಚ್ಚಿನ ಬದ್ಧತೆಯನ್ನು ತೋರಿಸುವಂತೆ ಮತ್ತು ತಮ್ಮ ಕೆಲಸವನ್ನು ಕೇವಲ 'ಬೆಳಿಗ್ಗೆ 9 ರಿಂದ ಸಂಜೆ 5 ರವರೆಗಿನ ಕೆಲಸ' ಎಂದು ಪರಿಗಣಿಸದೆ ಕೆಲಸದಲ್ಲಿ ಆಸಕ್ತಿ ತೋರಿಸಬೇಕು ಎಂದು ಹೇಳಲಾಗಿತ್ತು.
One of my Gen Z coworkers has a routine that drives our CEO crazy. Every afternoon, around 4:50 PM, he starts wrapping things up, shuts down his computer, and at exactly 5:00 PM, he’s out the door.
— Mario, PT (@Mario_Sneh) September 29, 2026
Not 4:59. Not 5:01. Exactly 5:00.
What’s funny is that he’s just as precise in…
ವರದಿಗಳ ಪ್ರಕಾರ ಉದ್ಯೋಗಿ ಪ್ರತಿದಿನ ಸರಿಯಾದ ಸಮಯ 9:00 ಗಂಟೆಗೆ ಬಂದು ಸಂಜೆ 5:00 ಗಂಟೆಗೆ ಸರಿಯಾಗಿ ಮನೆಗೆ ಹೊರಡುತ್ತಿದ್ದರು. ನಿಗದಿತ ಸಮಯಕ್ಕಿಂತ ಒಂದು ನಿಮಿಷವೂ ಹೆಚ್ಚು ಕೆಲಸ ಮಾಡುತ್ತಿರಲಿಲ್ಲ. ಈ ಬಗ್ಗೆ ಮೀಟಿಂಗ್ ಕರೆದ ಸಿಇಒ, ಕಂಪನಿಯಲ್ಲಿ ಬೆಳವಣಿಗೆ ಆಗಲು ಬಯಸಿದ್ದರೆ ಉದ್ಯೋಗಿಯಂತೆ ಯೋಚಿಸುವುದನ್ನು ಬಿಟ್ಟು ಮಾಲೀಕನಂತೆ ಯೋಚಿಸಲು ಹೇಳಿದ್ದರು. ಸಮಯ ನೋಡುವುದನ್ನು ಬಿಟ್ಟು, ಕಂಪನಿಯ ಅಭಿವೃದ್ಧಿಗೆ ಹೆಚ್ಚಾಗಿ ಶ್ರಮಿಸು ಎಂದು ಹೇಳಿದ್ದರು.
ಇದಕ್ಕೆ ಉತ್ತರಿಸಿದ ಉದ್ಯೋಗಿ, "ನಾನು ಮಾಲೀಕನಂತೆ ಆಲೋಚಿಸಬೇಕು ಎಂದರೆ, ನೀವು ನನಗೆ ಕಂಪನಿಯಲ್ಲಿ 50% ಪಾಲು ನೀಡಲು ಸಿದ್ಧರಿದ್ದೀರಾ?" ಎಂದು ನೇರವಾಗಿ ಕೇಳಿದ."ಮಾಲೀಕರು ಲಾಭ-ನಷ್ಟ ಎರಡನ್ನು ಅವರೇ ಪಡೆಯುತ್ತಾರೆ. , ಆದರೆ ಉದ್ಯೋಗಿ ಎಷ್ಟು ಹೆಚ್ಚುವರಿ ಕೆಲಸ ಮಾಡಿದರೂ ಬರುವುದು ನಿಗದಿತ ಸಂಬಳ ಮಾತ್ರ" ಎಂಬುದು ಆತನ ವಾದವಾಗಿತ್ತು.
ಇದಕ್ಜೆ ಸಿಇಒ ನಗುತ್ತಾ "ನನ್ನ ಮಾತಿನ ಅರ್ಥ ಅದಲ್ಲ" ಎಂದರು. ಆಗ ಸಂಜೆ 5 ಘಂಟೆ ಆಗಿತ್ತು. ಉದ್ಯೋಗಿ ತನ್ನ ಬ್ಯಾಗ್ ಹಿಡಿದು ಮನೆಗೆ ಹೊರಟಿದ್ದು ನನ್ನ ಅವಧಿ ಪ್ರಕಾರ ಕೆಲಸ ಸಂಜೆ 5 ಗಂಟೆಗೆ ಮುಗಿಯುತ್ತದೆ" ಎಂದು ಹೇಳಿ ಹೊರಟು ಹೋಗಿದ್ದಾರೆ. ಈ ಘಟನೆ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ಉದ್ಯೋಗಿ ಮಾಡಿದ್ದು ಸರಿಯಾಗಿದೆ ಎಂದು ಬೆಂಬಲ ವ್ಯಕ್ತ ಪಡಿಸಿದ್ದಾರೆ.