ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬರ್ತ್‌ಡೇಗೆ ಸ್ನೇಹಿತರ ಜೊತೆ ಮ್ಯಾಗಿ ಪಾರ್ಟಿ; ಬಾಲಕನ ಮುಗ್ದತೆಗೆ ನೆಟ್ಟಿಗರು ಫಿದಾ

Viral Video: ಜಾರ್ಖಂಡ್ ಬಾಲಕ‌ನ ಸರಳ ಬರ್ತ್‌ಡೇ ಪಾರ್ಟಿಗೆ ಇಡೀ ದೇಶದ ಜನರೇ ಫಿದಾ ಆಗಿದ್ದಾರೆ. ರೆಸ್ಟೋರೆಂಟ್, ಪಬ್ ಎಂದು ಬರ್ತ್ ಡೇ ಆಚರಿಸಿಕೊಳ್ಳುವವರ ಮಧ್ಯೆ ಈ ಬಾಲಕ ತನ್ನ ಸ್ನೇಹಿತರಿಗೆ ಮ್ಯಾಗಿ ಪಾರ್ಟಿಯನ್ನು ನೀಡುವ ಮೂಲಕ ಮನಗೆದಿದ್ದಾನೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಕೂಡಿಟ್ಟ 100 ರೂ. ಮ್ಯಾಗಿ ಬರ್ತ್‌ಡೇ ಪಾರ್ಟಿ: ಹೃದಯ ಗೆದ್ದ ಬಾಲಕನ ವಿಡಿಯೊ

ಬಾಲಕನ ಮ್ಯಾಗಿ ಬರ್ತ್‌ಡೇ ಪಾರ್ಟಿ -

Profile
Pushpa Kumari May 21, 2026 7:03 PM

ಜಾರ್ಖಂಡ್, ಮೇ 21: ನಿಜವಾದ ಸಂತೋಷ, ಖುಷಿ ಗಳಿಸೋದಕ್ಕೆ ಹಣ ಅಷ್ಟೇ ಮುಖ್ಯವಲ್ಲ. ಆತ್ಮೀಯ ಸ್ನೇಹಿತರು ಹಾಗೂ ಅವರ ಜೊತೆ ಆಳವಾದ ಪ್ರೀತಿ ಇದ್ದರೆ ಅದರಲ್ಲೂ ಸಂತೋಷ ಪಡೆಯಬಹುದು. ಹೌದು ಇದೀಗ ಜಾರ್ಖಂಡ್ ಬಾಲಕ‌ನ ಸರಳ ಬರ್ತ್‌ಡೇ ಪಾರ್ಟಿಗೆ ಇಡೀ ದೇಶದ ಜನರೇ ಫಿದಾ ಆಗಿದ್ದಾರೆ. ರೆಸ್ಟೋರೆಂಟ್, ಪಬ್ ಎಂದು ಬರ್ತ್ ಡೇ ಆಚರಿಸಿ ಕೊಳ್ಳುವವರ ಮಧ್ಯೆ ಈ ಬಾಲಕ ತನ್ನ ಸ್ನೇಹಿತರಿಗೆ ಮ್ಯಾಗಿ ಪಾರ್ಟಿಯನ್ನು ನೀಡುವ ಮೂಲಕ ಮನಗೆದಿದ್ದಾನೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

​ನಿಜವಾದ ಸಂತೋಷಕ್ಕೆ ದುಬಾರಿ ಖರ್ಚು ವೆಚ್ಚಗಳು ಬೇಕಾಗಿಲ್ಲ. ಸೂರಜ್ ಎಂಬ ಬಾಲಕನು ತನ್ನ ವಿಶೇಷ ದಿನವನ್ನು ಮ್ಯಾಗಿ ನೂಡಲ್ಸ್ ಪ್ಯಾಕೆಟ್, ಫ್ಯಾಂಟಾ ಬಾಟಲಿ ಮತ್ತು ಸಣ್ಣ ಒಲೆಯ ಸುತ್ತಲೂ ಸ್ನೇಹಿತರನ್ನು ಒಟ್ಟು ಗೂಡಿಸಿ ಬರ್ತ್ ಡೇ ಆಚರಣೆ ಮಾಡಿದ್ದಾನೆ‌. ಕೇವಲ 100 ರೂಪಾಯಿ ಬಜೆಟ್ ನಲ್ಲಿ ಮ್ಯಾಗಿ ನೂಡಲ್ಸ್ ಮತ್ತು ಫ್ಯಾಂಟಾ ಬಾಟಲಿ ಜೊತೆ ಎಂಜಾಯ್ ಮಾಡಿದ್ದಾನೆ.

ವಿಡಿಯೋ ನೋಡಿ:

ಸೂರಜ್‌ನ ಸ್ನೇಹಿತರೊಬ್ಬ ಉತ್ಸಾಹದಿಂದ ಈ ಸಂದರ್ಭವನ್ನು ಪರಿಚಯಿಸುವುದರೊಂದಿಗೆ ರೀಲ್ ಪ್ರಾರಂಭವಾಗುತ್ತದೆ. ಸ್ನೇಹಿತನು ಕ್ಯಾಮೆರಾ ಮುಂದೆ ಬಂದು ಅತ್ಯಂತ ಸಡಗರದಿಂದ "ಇವತ್ತು ಸೂರಜ್ ಪಾರ್ಟಿ ಕೊಡ್ತಾನೆ'' ಎಂದು ಹೇಳು ತ್ತಾನೆ‌. ಬಾಲಕ ತನ್ನ ಉಳಿತಾಯ ಹಣವನ್ನು ಬಳಸಿಕೊಂಡು ಹುಟ್ಟುಹಬ್ಬದ "ಪಾರ್ಟಿ"ಯನ್ನು ಆಯೋಜಿಸಿದ್ದಾನೆ

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

​ಒಂದು ಸಣ್ಣ ಒಲೆಯ ಮೇಲೆ ಬೇಯುತ್ತಿರುವ ಮ್ಯಾಗಿ ನೂಡಲ್ಸ್,​ಸ್ನೇಹಿತರೆಲ್ಲರೂ ಹಂಚಿಕೊಳ್ಳಲು ತಂದಿದ್ದ ಒಂದು ಫ್ಯಾಂಟಾ ಸಾಫ್ಟ್ ಡ್ರಿಂಕ್ ..ಸೂರಜ್ ಸ್ವತಃ ನೂಡಲ್ಸ್ ತಯಾರಿಸುತ್ತಿದ್ದಂತೆ, ಸುತ್ತಮುತ್ತಲಿನ ಮಕ್ಕಳು ಕುತೂಹಲದಿಂದ ಕಾಯು ತ್ತಿದ್ದರು, ನಗುತ್ತಾ ಮತ್ತು ಹರಟೆ ಹೊಡೆಯುತ್ತಿದ್ದರು. ಸದ್ಯ ಈ ವಿಡಿಯೊ ಬಹಳಷ್ಟು ವೈರಲ್ ಆಗಿದೆ.

ವೀಡಿಯೊ ಜನಪ್ರಿಯತೆಯನ್ನು ಗಳಿಸುತ್ತಲೇ ಇದ್ದಂತೆ, ಹಲವಾರು ವೀಕ್ಷಕರು ಸೂರಜ್ ಅವರ UPI ವಿವರಗಳನ್ನು ಕೇಳಲು ಪ್ರಾರಂಭಿಸಿದರು, ಆತನಿಗೆ ಉಡುಗೊರೆಗಳು ಅಥವಾ ಆರ್ಥಿಕ ಬೆಂಬಲವನ್ನು ಕಳುಹಿಸಲು ಸಿದ್ದರಾಗಿದ್ದಾರೆ. ಈ ಬಗ್ಗೆ ಬಳಕೆದಾರರೊಬ್ಬರು ಒಗ್ಗಟ್ಟಿನ ಭಾವನೆಯಿಂದ ಆಚರಿಸಿದ ಬರ್ತ್ ಡೇ ಅಂದರು.. ಮತ್ತೊಬ್ಬರು ಈ ದೃಶ್ಯ ನೋಡಿದಷ್ಟು ಖುಷಿ ನೀಡುತ್ತದೆ ಅಂದರು.