ಡ್ರೈವಿಂಗ್ ಮಾಡುತ್ತಲೇ 20 ನಿಮಿಷ ನಿದ್ದೆಗೆ ಜಾರಿದ ಉಬರ್ ಚಾಲಕ; ಭಯಾನಕ ವಿಡಿಯೋ ವೈರಲ್
Viral News: ಇಲ್ಲೊಬ್ಬ ಉಬರ್ ಚಾಲಕನು ಪ್ರಯಾಣಿಕರನ್ನು ಕೂರಿಸಿಕೊಂಡೆ ನಿದ್ರೆಗೆ ಜಾರಿದ ಘಟನೆಯೊಂದು ನಡೆದಿದೆ. ಕಾರು ಸುಮಾರು 20 ನಿಮಿಷದ ವರೆಗೆ ತಾನಾಗಿಯೇ ಚಲಿಸಿದೆ. ಸದ್ಯ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ಪ್ರಯಾಣದ ಸಂದರ್ಭದಲ್ಲಿ ನಿದ್ರಿಸಿದ ಚಾಲಕ -
ನವದೆಹಲಿ,ಮೇ 21: ವಾಹನ ಚಾಲನೆ ಮಾಡುವಾಗ ಸುರಕ್ಷತೆಯು ಪ್ರತಿಯೊಬ್ಬರಿಗೆ ಅಗತ್ಯ. ಸೀಟ್ ಬೆಲ್ಟ್ ಧರಿಸುವುದು, ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದು, ಹೈ ಸ್ಪೀಡ್ ಹೋಗದೆ ಇರುವುದು ಹೀಗೆ ಸುರಕ್ಷತೆ ನಿಯಮಗಳನ್ನು ಪಾಲಿಸಲೇ ಬೇಕಾಗುತ್ತದೆ. ಆದರೆ ಇಲ್ಲೊಬ್ಬ ಉಬರ್ ಚಾಲಕನು ಪ್ರಯಾಣಿಕರನ್ನು ಕೂರಿಸಿಕೊಂಡೆ ನಿದ್ರೆಗೆ ಜಾರಿದ ಘಟನೆಯೊಂದು ನಡೆದಿದೆ. ಕಾರು ಸುಮಾರು 20 ನಿಮಿಷದ ವರೆಗೆ ತಾನಾಗಿಯೇ ಚಲಿಸಿದೆ. ಸದ್ಯ ಈ ದೃಶ್ಯ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಚಾಲಕನು ಟೆಸ್ಲಾ ಕಾರಿನ ‘ಫುಲ್ ಸೆಲ್ಫ್-ಡ್ರೈವಿಂಗ್’ (FSD) ತಂತ್ರಜ್ಞಾನದ ಮೂಲಕ ಪ್ರಯಾಣಿಕರನ್ನು ಕೂರಿಸಿಕೊಂಡು ಬಂದಿದ್ದಾನೆ. ಚಾಲಕನು ನಿದ್ದೆಯಲ್ಲಿದ್ದರೂ ಕಾರು ಸುಮಾರು 20 ನಿಮಿಷಗಳ ಕಾಲ ತಾನಾಗಿಯೇ ಚಲಿಸಿದೆ. ಆದರೆ ಪ್ರಯಾಣಿಕನು ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು ತಾನು ಟೆಸ್ಲಾ ಎಫ್‌ಎಸ್‌ಡಿ ತಂತ್ರಜ್ಞಾನದ ಮೇಲೆ ನಂಬಿಕೆ ಇಟ್ಟಿದ್ದರಿಂದ ಆತಂಕ ಪಟ್ಟಿಲ್ಲ ಎಂದು ಹೇಳಿಕೊಂಡಿದ್ದಾನೆ.
ವಿಡಿಯೋ ನೋಡಿ:
My uber picked me up in a Tesla and fell asleep on the highway. I’ve driven with FSD and trust how well it works so I wasn’t worried. It took the exit and drove me to my destination all by itself. He was asleep for 90% of the 20 minute drive haha pic.twitter.com/bYTC0718mN
— Kyle Wade (@BoostedBoiKyle) May 20, 2026
ಪ್ರಯಾಣದ ವೇಳೆ ಹೈವೇಗೆ ಬರುತ್ತಿದ್ದಂತೆ ಚಾಲಕ ಕಾರನ್ನು ಸ್ವಯಂಚಾಲಿತ ಮೋಡ್‌ಗೆ ಹಾಕಿ ನಿದ್ರೆಗೆ ಜಾರಿದ್ದಾನೆ. ವಾಹನ ದಲ್ಲಿ ಹಾಡು ಕೂಡ ಫ್ಲೇ ಆಗುತ್ತಿರುವುದು ಕಂಡು ಬಂದಿದೆ. ಚಾಲಕ ಸೀಟಿಗೆ ಒರಗಿ ಕಣ್ಣು ಮುಚ್ಚಿ ಮಲಗಿದ್ದಾನೆ. ಬೆನ್ಸನ್ ಬೂನ್ ಅವರ ಬ್ಯೂಟಿಫುಲ್ ಥಿಂಗ್ಸ್ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವಾಗ ಟೆಸ್ಲಾ ರಸ್ತೆಯಲ್ಲಿ ಸರಾಗವಾಗಿ ಚಲಿಸುತ್ತಿ ರುವುದನ್ನು ವೀಡಿಯೊ ತೋರಿಸಿದೆ. ಕ್ಯಾಮೆರಾ ನ್ಯಾವಿಗೇಷನ್ , ವೇಗದ ವಿವರಗಳು ಮತ್ತು ಆಗಮನದ ಸಮಯವನ್ನು ಸಹ ಸೆರೆಹಿಡಿದಿದೆ.
Viral Video: ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?
ಹೈವೇ ಎಕ್ಸಿಟ್ ಪಡೆದು ತಾನಾಗಿಯೇ ಮುನ್ನಡೆಯುತ್ತಿರುವುದು ಕೂಡ ವಿಡಿಯೊದಲ್ಲಿ ದಾಖಲಾಗಿದೆ.. ಪೂರ್ಣ ಸ್ವಯಂ-ಚಾಲನಾ ವ್ಯವಸ್ಥೆಯನ್ನು ಬಳಸಿಕೊಂಡು ಕಾರು ಹೆದ್ದಾರಿ ಚಾಲನೆಯನ್ನು ಪೂರ್ಣಗೊಳಿಸಿದೆ ಎಂದು ಚಾಲಕ ಹೇಳಿದ್ದಾನೆ. ಆದರೆ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ಒಂದು ವೇಳೆ ಚಾಲಕ ಹಠಾತ್ತನೆ ಎಚ್ಚರಗೊಂಡು ಸ್ಟೀರಿಂಗ್ ವೀಲ್ ಅನ್ನು ತಪ್ಪು ದಿಕ್ಕಿಗೆ ತಿರುಗಿಸಿದ್ದರೆ ದೊಡ್ಡ ಅಪಘಾತವಾಗುತ್ತಿತ್ತು ಎಂದಿದ್ದಾರೆ. ಇನ್ನೊಂದೆಡೆ, ಚಾಲಕ ನಿದ್ದೆ ಮಾಡಿದರೂ ಕಾರು ಯಾವುದೇ ಅಪಘಾತವಿಲ್ಲದೆ ಸಂಚಾರ ಮಾಡಿರುವುದು ಕಂಡು ಟೆಸ್ಲಾ ತಂತ್ರಜ್ಞಾನಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.