ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ ಯುವಕನಿಗೆ ವಿಂಡೋ ಸೀಟ್ ಬಿಟ್ಟುಕೊಟ್ಟ ಸಹ ಪ್ರಯಾಣಿಕ: ಹೃದಯವಂತಿಕೆಗೆ ನೆಟ್ಟಿಗರು ಫಿದಾ
Viral News: ವ್ಯಕ್ತಿಯೊಬ್ಬರು ಪಕ್ಕದಲ್ಲಿದ್ದ ಯುವಕನ ಮೊದಲ ವಿಮಾನ ಪ್ರಯಾಣವನ್ನು ವಿಶೇಷವಾಗಿಸಲು ತಮ್ಮ ವಿಂಡೋ ಸೀಟನ್ನೇ ಬಿಟ್ಟುಕೊಟ್ಟಿದ್ದಾರೆ. ಸದ್ಯ ಈ ಸಣ್ಣ ದಯೆಯೂ ಆನ್‌ಲೈನ್‌ನಲ್ಲಿ ಹೃದಯಗಳನ್ನು ಗೆದ್ದಿದೆ. ಇನ್ನೊಬ್ಬರ ದಿನವನ್ನು ಖುಷಿಯಾಗಿ ಇರಿಸಲು ವ್ಯಕ್ತಿ ತೋರಿದ ಕಾಳಜಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಅಪರಿಚಿತ ವ್ಯಕ್ತಿಯ ವಿಮಾನ ಪ್ರಯಾಣವನ್ನು ಸ್ಮರಣೀಯಗೊಳಿಸಿದ ಸಹಪ್ರಯಾಣಿಕ -
ನವದೆಹಲಿ, ಸೆ. 7: ಪ್ರತಿಯೊಬ್ಬರು ತಮ್ಮ ಮೊದಲ ವಿಮಾನ ಪ್ರಯಾಣವನ್ನು ಸ್ಮರಣೀಯವಾಗಿ ಇರಿಸಲು ಬಯಸುತ್ತಾರೆ. ಅದರಲ್ಲೂ ವಿಂಡೋ ಸೀಟ್ ಸಿಕ್ಕಾಗ ಸಿಗುವ ಖುಷಿಯೇ ಬೇರೆ. ಇಲ್ಲೊಬ್ಬರು ತಮ್ಮ ಪಕ್ಕದ ವ್ಯಕ್ತಿಯ ಮೊದಲ ವಿಮಾನ ಪ್ರಯಾಣವನ್ನು ವಿಶೇಷವಾಗಿಸಲು ವಿಂಡೋ ಸೀಟನ್ನೇ ಬಿಟ್ಟುಕೊಟ್ಟಿದ್ದಾರೆ. ಸದ್ಯ ಈ ಸಣ್ಣ ಮಾನವೀಯ ಕಾರ್ಯ ಆನ್‌ಲೈನ್‌ನಲ್ಲಿ ಹೃದಯಗಳನ್ನು (Viral News) ಗೆದ್ದಿದೆ. ಇನ್ನೊಬ್ಬರ ದಿನವನ್ನು ಖುಷಿಯಾಗಿ ಇರಿಸಲು ವ್ಯಕ್ತಿ ತೋರಿದ ಕಾಳಜಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ತಮ್ಮ ಸೀಟಿನ ಪಕ್ಕದಲ್ಲಿರುವ ವ್ಯಕ್ತಿ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಅರಿತ ಸಹ ಪ್ರಯಾಣಿಕ ವಿಂಡೋ ಸೀಟ್ ಬಿಟ್ಟುಕೊಟ್ಟಿದ್ದಾರೆ. ಇದರಿಂದ ಅತ್ಯಂತ ಸಂತಸಗೊಂಡ ಪ್ರಯಾಣಿಕ ಪ್ರಯಾಣದುದ್ದಕ್ಕೂ ಕಿಟಕಿಯ ಹೊರಗಿನ ದೃಶ್ಯಗಳನ್ನು ಆನಂದಿಸುತ್ತಾ ಪ್ರಯಾಣ ಬೆಳೆಸಿದ್ದಾರೆ.
ಹರಿಯಾಣದ ಗುರುಗ್ರಾಮದ ಕಂಟೆಟ್ ಕ್ರಿಯೇಟರ್ ಆತ್ಮಜ್ ಕಪೂರ್ ಬೆಂಗಳೂರಿನಿಂದ ಸಿಂಧುದುರ್ಗಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಜೀತ್ ಎಂಬ ವ್ಯಕ್ತಿ ಪಕ್ಕದಲ್ಲಿ ಕುಳಿತಿದ್ದರು. ಪ್ರಜೀತ್ ಸ್ನೇಹಿತರೊಂದಿಗೆ ರಜೆಗಾಗಿ ಗೋವಾಕ್ಕೆ ಪ್ರಯಾಣಿಸುತ್ತಿದ್ದರು. ಪ್ರಜೀತ್ ಕಿಟಕಿಯ ಕಡೆಗೆ ನೋಡುತ್ತಾ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಲೇ ಇದ್ದರು.
ವಿಡಿಯೊ ನೋಡಿ:
ವಿಮಾನ ಹಾರಾಟ ಆರಂಭಿಸುತ್ತಿದ್ದಂತೆ, ಪಕ್ಕದಲ್ಲಿದ್ದ ಪ್ರಜೀತ್ ಸೀಟ್ ಬೆಲ್ಟ್ ಧರಿಸಲು ಕಷ್ಟ ಪಡುತ್ತಿದ್ದರು. ಇದನ್ನು ಗಮನಿಸಿದ ಆತ್ಮಜ್ ಸೀಟ್ ಬೆಲ್ಟ್ ಹಾಕಲು ಸಹಾಯ ಮಾಡಿದರು. ಸಂಭಾಷಣೆಯ ವೇಳೆ ಪ್ರಜೀತ್ ಅವರಿಗೆ ಇದು ಮೊದಲ ವಿಮಾನ ಪ್ರಯಾಣದ ಅನುಭವ ಎಂದು ಗೊತ್ತಾಯಿತು. ಪ್ರಜೀತ್ ವಿಮಾನ ಪ್ರಯಾಣದಲ್ಲಿ ಕಿಟಕಿಯಿಂದ ಆಕಾಶ ಮತ್ತು ಮೋಡಗಳನ್ನು ನೋಡಲು ಹಾಗೂ ಮೊಬೈಲ್‌ನಲ್ಲಿ ಫೋಟೊ ತೆಗೆಯಲು ಪ್ರಯತ್ನಿಸುತ್ತಲೇ ಇದ್ದರು.
ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ
ತಕ್ಷಣವೇ ಇದನ್ನು ಅರಿತ ಆತ್ಮಜ್ ಕಪೂರ್, ತಾವು ಕುಳಿತಿದ್ದ ವಿಂಡೋ ಸೀಟ್ ಪ್ರಜೀತ್ ಅವರಿಗೆ ಬಿಟ್ಟುಕೊಟ್ಟರು. ಇದರಿಂದ ಸಂತಸಗೊಂಡ ಪ್ರಜೀತ್, ಪ್ರಯಾಣದುದ್ದಕ್ಕೂ ಕಿಟಕಿಯ ಹೊರಗಿನ ದೃಶ್ಯಗಳನ್ನು ಆನಂದಿಸುತ್ತಾ ಪ್ರಯಾಣಿಸಿದ್ದಾರೆ. ಈ ಘಟನೆ ತಕ್ಷಣವೇ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿದ ಪ್ರಜೀತ್ ಮುಖದಲ್ಲಿ ನಗು ತರಿಸಿತು.
"ಇದು ಅವರ ಮೊದಲ ವಿಮಾನ ಎಂದು ನನಗೆ ತಿಳಿದಿರಲಿಲ್ಲ. ಆದರೆ ಆ ನಂತರ ಅವರಿಗೆ ಸ್ಮರಣೀಯವಾಗಿಸಲು ನನ್ನ ಕೈಲಾದಷ್ಟು ಸಹಾಯ ಮಾಡಿದೆ" ಆತ್ಮಜ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ ಆಗುತ್ತಿದ್ದು, ಸಾವಿರಾರು ಜನರು ಆತ್ಮಜ್ ಅವರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರು ಅಪರಿಚಿತ ವ್ಯಕ್ತಿಯ ಮೊದಲ ವಿಮಾನವನ್ನು ಸ್ಮರಣೆಯಾಗಿ ಪರಿವರ್ತಿಸಿದ್ದಕ್ಕಾಗಿ ಆತ್ಮಜ್ ಅವರನ್ನು ಹೊಗಳಿದ್ದಾರೆ. ನೆಟ್ಟಿಗರೊಬ್ಬರು, ʼʼಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವವರನ್ನು ಜನರು ಅಪಹಾಸ್ಯ ಮಾಡುವುದನ್ನು ನೋಡಿದ್ದೇವೆ. ಆದರೆ ನೀವು ಸಹಾಯ ಮಾಡಿದ್ದೀರಿʼʼ ಎಂದಿದ್ದಾರೆ.