ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರುಪಾಕ್ಷಿ ಮಾಮನಿ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಾಮೂಹಿಕ ಪಾದಯಾತ್ರೆ, ವಿಶೇಷ ಪೂಜೆ ಸಲ್ಲಿಕೆ

ಕೆಂಚಲಾರಕೊಪ್ಪದ ಹನುಮಾನ ದೇವಸ್ಥಾನದಲ್ಲಿ ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿರೂಪಾಕ್ಷ ಮಾಮನಿಯವರು ಶೀಘ್ರ ಗುಣಮುಖರಾಗಿ ಸಂಪೂರ್ಣ ಆರೋಗ್ಯದೊಂದಿಗೆ ಮರಳಿ ಬರಲೆಂದು ಪ್ರಾರ್ಥಿಸಿ ಅವರ ಅಭಿಮಾನಿಗಳು, ಕಾರ್ಯಕರ್ತರಿಂದ ಸಾಮೂಹಿಕ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.

ವಿರುಪಾಕ್ಷಿ ಮಾಮನಿ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ

-

Profile
Ashok Nayak Oct 25, 2026 9:03 AM

ಸವದತ್ತಿ: ಇಲ್ಲಿನ ಕೆಂಚಲಾರಕೊಪ್ಪದ ಹನುಮಾನ ದೇವಸ್ಥಾನದಲ್ಲಿ ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್(BDCC Bank) ನಿರ್ದೇಶಕರಾದ ವಿರೂಪಾಕ್ಷ ಮಾಮನಿಯವರು ಶೀಘ್ರ ಗುಣಮುಖರಾಗಿ ಸಂಪೂರ್ಣ ಆರೋಗ್ಯದೊಂದಿಗೆ ಮರಳಿ ಬರಲೆಂದು ಪ್ರಾರ್ಥಿಸಿ ಅವರ ಅಭಿಮಾನಿಗಳು, ಕಾರ್ಯಕರ್ತರಿಂದ ಸಾಮೂಹಿಕ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.

ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ವಿರೂಪಾಕ್ಷ ಮಾಮನಿ ಅವರಿಗೆ ಗಂಭೀರ ಗಾಯಗಳಾಗಿದ್ದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗಿ ಬರಲೆಂದು ಪ್ರಾರ್ಥಿಸಿ ಪಾದಯಾತ್ರೆ ಮೂಲಕ ಸಾಗಿ ತಾಯಿ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Savadatti News: ಐತಿಹಾಸಿಕ ಗ್ರಾಮದೇವಿ ಜಾತ್ರೆ ಆರಂಭ: ದೇವಿಯರನ್ನು ಕಣ್ತುಂಬಿಕೊಂಡು ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ

ನಗರದ ಕೆಂಚಲಾರಕೊಪ್ಪದ ಹನುಮಾನ ದೇವಸ್ಥಾನದಿಂದ ಸಾಗಿದ ಪಾದಯಾತ್ರೆ ಕಡಕೋಳ ಬ್ಯಾಂಕ ವೃತ್ತದಲ್ಲಿರುವ ಕೊತ್ತಲ ಕರೇಮ್ಮದೇವಿಗೆ, ಉಳವಿ ಚನ್ನಬಸವೇಶ್ವರ ದೇವಸ್ಥಾನ ಹಾಗೂ ಜೋಗುಳ ಭಾವಿಯ ಸತ್ಯಮ್ಮದೇವಿಗೆ ಪೂಜೆ ಸಲ್ಲಿಸಿ ನಂತರ ಯಲ್ಲಮ್ಮ ಗುಡ್ಡಕ್ಕೆ ತೆರಳಿ ರೇಣುಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಚಿನ್ಮಯ ಮಾಮನಿ, ಚೇತನಾ ಮಾಮನಿ, ಸಂಜೀವಕುಮಾರ ನವಲಗುಂದ, ಡಾ ಹೇಮಂತ್ ಭಸ್ಮೆ, ಡಾ ನಯನಾ ಭಸ್ಮೆ, ರಾಜಶೇಖರ ಕಾರದಗಿ, ಪಂಚನಗೌಡ ದ್ಯಾಮನಗೌಡರ, ಡಾ ಅಭಿನಂದನ ಕಬ್ಬಿನ, ಬಸವರಾಜ ಕಾರದಗಿ, ಬಸವರಾಜ ಪುಟ್ಟಿ, ಮಹಾರಾಜಗೌಡ ಪಾಟೀಲ, ಮಲ್ಲು ಬೀಳಗಿ ಸೇರಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.