Viral Video: ಕೋತಿಗೆ ಆಹಾರದ ಆಮಿಷವೊಡ್ಡಿ ಚಪ್ಪಲಿಯಿಂದ ಹೊಡೆದ ನೀಚ; ಇದೆಂಥಾ ವಿಕೃತಿ!ವಿಡಿಯೊ ನೋಡಿ
ಅಹ್ಮದಾಬಾದ್ ಕಂಕರಿಯಾ ಮೃಗಾಲಯದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಕೋತಿಗೆ ಆಹಾರವನ್ನು ನೀಡುವ ನೆಪದಲ್ಲಿ ಹತ್ತಿರ ಕರೆದು ಚಪ್ಪಲಿಯಲ್ಲಿ ಹೊಡೆದು ಕಿರುಕುಳ ನೀಡಿದ್ದಾನೆ. ನಂತರ ತನ್ನ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
![ಆಹಾರದ ಆಸೆ ತೋರಿಸಿ ಚಪ್ಪಲಿಯಿಂದ ಕೋತಿಗೆ ಹೊಡೆದ ಕಿಡಿಗೇಡಿ](https://cdn-vishwavani-prod.hindverse.com/media/original_images/monkey_viral_video_CLnKq1q.jpg)
![Profile](https://vishwavani.news/static/img/user.png)
ಅಹಮದಾಬಾದ್: ಅಹಮದಾಬಾದ್ ಕಂಕರಿಯಾ ಮೃಗಾಲಯದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಕೋತಿಗೆ ಕಿರುಕುಳ ನೀಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಮುಸ್ಲಿಂ ವ್ಯಕ್ತಿ ಕೋತಿ ಪಂಜರದ ಬಳಿ ಬಂದು ತನ್ನ ಕೈಯಲ್ಲಿ ಆಹಾರವನ್ನು ಹಿಡಿದುಕೊಂಡು ಕೋತಿಗೆ ತೋರಿಸಿ ಆಮಿಷಯೊಡ್ಡಿದ್ದಾನೆ. ನಂತರ ಆಹಾರದ ಆಸೆಗೆ ಅದನ್ನು ತೆಗೆದುಕೊಳ್ಳಲು ಬಂದ ಕೋತಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಆ ವ್ಯಕ್ತಿ ಕೈಯಲ್ಲಿ ಆಹಾರದ ತುಂಡೊಂದನ್ನು ಹಿಡಿದು ಕೋತಿಗೆ ಆಸೆ ತೋರಿಸಿದ್ದಾನೆ. ಅದನ್ನು ತೆಗೆದುಕೊಳ್ಳಲು ಕೋತಿ ಹತ್ತಿರ ಬಂದಾಗ ಅದಕ್ಕೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಹೀಗೆ ಅನೇಕ ಬಾರಿ ಈ ರೀತಿ ಮಾಡಿದ್ದಾನಂತೆ.
ಮಾಹಿತಿ ಪ್ರಕಾರ, ಗುಜರಾತ್‍ನ ಅಹಮದಾಬಾದ್‍ನಲ್ಲಿರುವ ಕಂಕರಿಯಾ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ವಿಡಿಯೊದಲ್ಲಿದ್ದ ವ್ಯಕ್ತಿ ಅಬ್ದುಲ್ ಎಂದು ಗುರುತಿಸಲಾಗಿದ್ದು, ಈ ವ್ಯಕ್ತಿ ಆಹಾರದ ಆಸೆ ಹುಟ್ಟಿಸಿ ಉದ್ದೇಶಪೂರ್ವಕವಾಗಿ ಕೋತಿಗೆ ಹೊಡೆದಿದ್ದಾನೆ ಎನ್ನಲಾಗಿದೆ . ಆದರೆ ಅದನ್ನು ನೋಡಿದ ಮೃಗಾಲಯದ ಸಂದರ್ಶಕರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳು ಆ ವ್ಯಕ್ತಿಯ ಮೇಲೆ ಕ್ರಮಕೈಗೊಂಡಿದ್ದಾರೆ.
ಈ ವಿಡಿಯೋವನ್ನು ಪ್ರಾಣಿ ಕಾರ್ಯಕರ್ತ "ಸ್ಟ್ರೀಟ್‌ಡಾಗ್ಸ್ ಆಫ್ ಬಾಂಬೆ" ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ. "ಅಬ್ದುಲ್ ಎಂಬ ವ್ಯಕ್ತಿ ಅಹಮದಾಬಾದ್‍ನ ಕಂಕರಿಯಾ ಮೃಗಾಲಯದಲ್ಲಿ ಕೋತಿಗಳಿಗೆ ಆಹಾರದ ಆಮಿಷವೊಡ್ಡಿ ಕಿರುಕುಳ ನೀಡಿ ಥಳಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಇದು ಅಕ್ಷಮ್ಯ ಅಪರಾಧವಾಗಿದೆ. ಕ್ರೌರ್ಯದ ವಿರುದ್ಧ ಧ್ವನಿ ಎತ್ತೋಣ!" ಎಂದು ಬರೆದಿದ್ದಾರೆ.
ಪ್ರಾಣಿಗಳಿಗೆ ಕಿರುಕುಳ ನೀಡುವುದು ಮತ್ತು ನಿಂದಿಸುವುದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಇಂತಹ ಕ್ರಮಗಳು ಪ್ರಾಣಿಗಳಿಗೆ ಹಾನಿಯನ್ನುಂಟುಮಾಡುವುದಲ್ಲದೆ ವನ್ಯಜೀವಿ ಸಂರಕ್ಷಣೆಯ ನೈತಿಕ ಮತ್ತು ಕಾನೂನು ಮಾನದಂಡಗಳನ್ನು ಉಲ್ಲಂಘಿಸುತ್ತವೆ. ಹಾಗಾಗಿ ಅಧಿಕಾರಿಗಳು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ತಡೆಗಟ್ಟಲು ಕಣ್ಗಾವಲು ಹೆಚ್ಚಿಸಬೇಕು ಎನ್ನಲಾಗಿದೆ. ಹಾಗೇ ಸಂದರ್ಶಕರು ಪ್ರಾಣಿಗಳನ್ನು ಗೌರವಿಸಬೇಕು ಮತ್ತು ಯಾವುದೇ ಕ್ರೌರ್ಯದ ಕೃತ್ಯಗಳನ್ನು ತಕ್ಷಣ ವರದಿ ಮಾಡಬೇಕು ಎಂಬುದಾಗಿ ಮಾಹಿತಿ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಛೇ..ಎಂಥಾ ಪೈಶಾಚಿಕ ಕೃತ್ಯ! ರೀಲ್ ಕ್ರೇಜ್‌ಗಾಗಿ ಬೆಕ್ಕುಗಳನ್ನು ಕಟ್ಟಿಹಾಕಿ ಕೊಂದ ಪಾಪಿ- ಬೆಚ್ಚಿ ಬೀಳಿಸುವ ವಿಡಿಯೊ ವೈರಲ್
ಪಂಜಾಬ್‍ನ ಜಲಂಧರ್‌ನಲ್ಲಿ ರೀಲ್ ಕ್ರೇಜ್‌ಗೆ ಬಿದ್ದ ವ್ಯಕ್ತಿಯೊಬ್ಬ ಬೆಕ್ಕುಗಳನ್ನು ದಾರುಣವಾಗಿ ಹತ್ಯೆಮಾಡಿರುವ ಘಟನೆ ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಅಪ್‌ಲೋಡ್ ಮಾಡುವುದಕ್ಕಾಗಿ ಮನ್‌ದೀಪ್ ಎಂಬಾತ ನಾಯಿಗಳ ಮುಂದೆ ಬೆಕ್ಕುಗಳನ್ನು ಕಟ್ಟಿ ಹಾಕಿ ನಾಯಿ ಬೆಕ್ಕುಗಳ ಮೇಲೆ ದಾಳಿ ಮಾಡಿ ಕೊಂದು ಹಾಕುವಂತೆ ಮಾಡಿದ್ದಾನೆ. ಇಂತಹ ಭಯಾನಕ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮನ್‌ದೀಪ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ಉತ್ತೇಜಿಸುವ ಹಲವಾರು ಪೋಸ್ಟ್‌ಗಳಿವೆ. ಒಂದು ವಿಡಿಯೊದಲ್ಲಿ, ಅವನು ತನ್ನ ಸಾಕು ನಾಯಿಗಳಲ್ಲಿ ಒಂದನ್ನು ಹಗ್ಗದಿಂದ ಕಟ್ಟಿ ಎಳೆದಿದ್ದಾನೆ. ಈ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ನೆಟ್ಟಿಗರು ಅವನ ಅಮಾನವೀಯ ಕೃತ್ಯವನ್ನು ಖಂಡಿಸಿದ್ದಾರೆ ಮತ್ತು ಪ್ರಾಣಿಗಳನ್ನು ಈ ಅನ್ಯಾಯದಿಂದ ಕಾಪಾಡುವಂತೆ ಕರೆ ನೀಡಿದ್ದಾರೆ.