Viral Video: ಬೀದಿ ನಾಯಿಯನ್ನು ಕೊಂದು, ಬೈಕ್‍ಗೆ ಕಟ್ಟಿ ಎಳೆದೊಯ್ದ ಕಿಡಿಗೇಡಿ- ಆಘಾತಕಾರಿ ವಿಡಿಯೊ ಇಲ್ಲಿದೆ
Man Kills Stray Dog: ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕೊಂದು ಬೈಕ್‍ಗೆ ಕಟ್ಟಿ ಅದನ್ನು ಹಿಂದೆಯಿಂದ ಎಳೆದುಕೊಂಡು ಹೋಗಿದ್ದಾನೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.

-

ನಾಸಿಕ್: ನಾಯಿ ಅಂದ್ರೆ ನಾರಾಯಣ ದೇವರು ಅಂತಾ ಹಿರಿಯರು ಹೇಳುವ ಮಾತನ್ನು ನೀವು ಕೇಳಿರಬಹುದು. ಏನೂ ಅರಿಯದ ಮೂಕ ಪ್ರಾಣಿಗಳಿಗೆ ಹಿಂಸೆ ಮಾಡಬಾರದು. ಆದರೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊ (Viral Video) ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು (Stray dog) ಕೊಂದು ಬೈಕ್‍ಗೆ ಕಟ್ಟಿ ಅದನ್ನು ಹಿಂದೆಯಿಂದ ಎಳೆದುಕೊಂಡು ಹೋಗಿದ್ದಾನೆ. ನಾಸಿಕ್‍ನ ಸತ್ಪುರ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಆ ವ್ಯಕ್ತಿ ಬೈಕನ್ನು ಮುಂದೆ ಓಡಿಸುತ್ತಿದ್ದಂತೆ, ಶ್ವಾನವನ್ನು ರಸ್ತೆಯ ಉದ್ದಕ್ಕೂ ಎಳೆದೊಯ್ಯಲಾಯಿತು. ಈ ವೇಳೆ ಇತರ ಬೀದಿ ನಾಯಿಗಳು ಬೆನ್ನಟ್ಟುವುದನ್ನು ಘಟನೆಯ ವಿಡಿಯೊದಲ್ಲಿ ನೋಡಬಹುದು. ಆರೋಪಿ ವಿರುದ್ಧ ಸತ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು, ಪ್ರಾಣಿ ಪ್ರಿಯರು ಕಿಡಿಕಾರಿದ್ದಾರೆ. ಆತನ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
#WATCH: महाराष्ट्र के नासिक के सतपुर इलाके से एक परेशान करने वाला वीडियो आया सामने
— Times Now Navbharat (@TNNavbharat) September 3, 2025
◆ कुत्ते के भौंकने पर नाराज एक शख्स ने उसे बाइक से बांधकर घसीटा
◆ घटना का वीडियो वायरल होने के बाद पशु प्रेमियों ने इसकी शिकायत पुलिस में दर्ज कराई#Maharashtra #Nashik #Dog pic.twitter.com/y0C9e8AgsH
ಇನ್ನು ಪುಣೆಯಲ್ಲಿ ನಡೆದ ಪ್ರತ್ಯೇಕ ಘಟನೆಯೊಂದರಲ್ಲಿ ಮತ್ತೊಬ್ಬ ಬೈಕ್ ಸವಾರನು ತನ್ನ ಸಾಕು ನಾಯಿಯ ಸರಪಳಿಯನ್ನು ಬೈಕ್‍ನ ಹ್ಯಾಂಡಲ್‍ಗೆ ಕಟ್ಟಿ ಎಳೆದೊಯ್ಯುತ್ತಿರುವ ದೃಶ್ಯದ ವಿಡಿಯೊ ವೈರಲ್ ಆಗಿತ್ತು. ಸವಾರ ಬೈಕ್ ಅನ್ನು ಚಲಾಯಿಸುತ್ತಿದ್ದಂತೆ ಅಸಹಾಯಕತೆಯಿಂದ ನಾಯಿ ಪ್ರತಿರೋಧ ವ್ಯಕ್ತಪಡಿಸಿತ್ತು. ಇದು ಕೂಡ ಪ್ರಾಣಿ ಪ್ರಿಯರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಬೀದಿ ನಾಯಿಗಳ ನಿರ್ವಹಣೆ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ತನ್ನ ಹಿಂದಿನ ನಿರ್ದೇಶನವನ್ನು ಮಾರ್ಪಡಿಸಿದ ಸಮಯದಲ್ಲಿ ಈ ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿದೆ. ಆಗಸ್ಟ್ 11ರ ಆದೇಶದಡಿಯಲ್ಲಿ ಸಂಗ್ರಹಿಸಲಾದ ಬೀದಿ ನಾಯಿಗಳನ್ನು ಸಂತಾನಹರಣ ಚಿಕಿತ್ಸೆ ಮತ್ತು ಲಸಿಕೆ ಹಾಕಿದ ನಂತರ ಹಿಂತಿರುಗಿಸಲಾಗುವುದು ನ್ಯಾಯಪೀಠ ಸ್ಪಷ್ಟಪಡಿಸಿದೆ. ರೇಬಿಸ್‍ನಿಂದ ಬಳಲುತ್ತಿರುವ ಅಥವಾ ಆಕ್ರಮಣಕಾರಿ ಎಂದು ಪರಿಗಣಿಸಲಾದ ಶ್ವಾನಗಳನ್ನು ಹೊರಟುಪಡಿಸಿ ಉಳಿತ ಶ್ವಾನಗಳಿಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಪ್ರಕರಣದ ವ್ಯಾಪ್ತಿಯನ್ನು ದೆಹಲಿ-ಎನ್‌ಸಿಆರ್ ಮೀರಿ ವಿಸ್ತರಿಸಿ, ದೇಶಾದ್ಯಂತ ಅನ್ವಯಿಸುತ್ತದೆ ಎಂದು ಹೇಳಿದೆ. ಪ್ರಾಣಿ ಹಕ್ಕುಗಳ ಹೋರಾಟಗಾರರು ಇಂತಹ ಕ್ರೌರ್ಯವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿವೆ.
ಈ ಸುದ್ದಿಯನ್ನೂ ಓದಿ: ವಿದ್ಯಾರ್ಥಿನಿಯ ಜೀವ ಉಳಿಸಿದ ಇನ್‌ಸ್ಟಾಗ್ರಾಮ್! ಹೇಗೆ ಅಂತೀರಾ?