ಸ್ತ್ರೀಯರಿಗೆ ಸುರಕ್ಷತೆ ಏಲ್ಲಿದೆ? ದೆಹಲಿಯಲ್ಲಿ ತಡರಾತ್ರಿ ಮಹಿಳೆಯ ವೇಷ ಧರಿಸಿ ಸ್ಕೂಟರ್ ಚಲಾಯಿಸಿದ ವ್ಯಕ್ತಿ ಹೇಳಿದ್ದೇನು ಗೊತ್ತಾ?
Viral News: ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬುದನ್ನು ಅರಿಯಲು ಕಂಟೆಂಟ್ ಕ್ರಿಯೇಟರ್ ವೊಬ್ಬರು ವಿಶೇಷ ಪ್ರಯೋಗ ಮಾಡಿದ್ದಾರೆ. ಅವರು ಮಹಿಳೆಯ ಉಡುಪನ್ನು ಧರಿಸಿ, ಮೇಕಪ್ ಮಾಡಿಕೊಂಡು ದುಪಟ್ಟಾದಿಂದ ಮುಖವನ್ನು ಮುಚ್ಚಿಕೊಂಡು ಸುಮಾರು ಎರಡು ಗಂಟೆಗಳ ಕಾಲ ದೆಹಲಿಯ ರಸ್ತೆಗಳಲ್ಲಿ ಸ್ಕೂಟರ್ ಚಲಾಯಿಸಿದ್ದಾರೆ. ಈ ವೇಳೆ ತಮಗಾದ ಅನುಭವವನ್ನು ಸೆರೆಹಿಡಿದು ಶೇರ್ ಮಾಡಿದ್ದಾರೆ.
ಸುರಕ್ಷತೆ ಪರಿಶೀಲಿಸಲು ಮಹಿಳೆಯಂತೆ ವೇಷ ಧರಿಸಿ ರಾತ್ರಿ ಸ್ಕೂಟಿ ಸವಾರಿ ಮಾಡಿದ ವ್ಯಕ್ತಿ -
ನವದೆಹಲಿ,ಸೆ.18: ಇತ್ತೀಚೆಗೆ ಭಾರತದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುವಂತ ಅನೇಕ ಘಟನೆಗಳು ನಡೆದಿವೆ. ಇದೀಗ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬುದನ್ನು ಅರಿಯಲು ಕಂಟೆಂಟ್ ಕ್ರಿಯೇಟರ್‌ವೊಬ್ಬರು ವಿಶೇಷ ಪ್ರಯೋಗ ಮಾಡಿದ್ದಾರೆ. ಅವರು ಮಹಿಳೆಯ ಉಡುಪನ್ನು ಧರಿಸಿ, ಮೇಕಪ್ ಮಾಡಿಕೊಂಡು ದುಪಟ್ಟಾದಿಂದ ಮುಖವನ್ನು ಮುಚ್ಚಿಕೊಂಡು ಸುಮಾರು ಎರಡು ಗಂಟೆಗಳ ಕಾಲ ದೆಹಲಿಯ ರಸ್ತೆಗಳಲ್ಲಿ ಸ್ಕೂಟರ್ ಚಲಾಯಿಸಿ ದ್ದಾರೆ. ಈ ವೇಳೆ ತಮಗಾದ ಅನುಭವವನ್ನು ಸೆರೆಹಿಡಿದು ಶೇರ್ (Viral News) ಮಾಡಿದ್ದಾರೆ.
ಮಹಿಳೆಯರಿಗೆ ದೆಹಲಿ ಎಷ್ಟು ಸುರಕ್ಷಿತ? ಎಂದು ತಿಳಿಯಲು ಕಂಟೆಂಟ್ ಕ್ರಿಯೇಟರ್ ಒಬ್ಬರು, ನಿರ್ಧರಿಸಿದರು. ವಾಸ್ತವ ಸ್ಥಿತಿಯನ್ನು ಸ್ವತಃ ಅರಿಯಲು ಅವರು ಮಹಿಳೆಯ ಉಡುಪನ್ನು ಧರಿಸಿ ರಾತ್ರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ರಾಜಧಾನಿಯಲ್ಲಿ ಸ್ಕೂಟಿ ಸವಾರಿ ಮಾಡಿದ್ದಾರೆ.
ವಿಡಿಯೋ ನೋಡಿ:
ಮನೆಯಿಂದ ಹೊರಟ ತಕ್ಷಣವೇ ಜನರು ಹೆಚ್ಚಾಗಿ ಅವರನ್ನು ನೋಡುವುದಕ್ಕೆ ಶುರು ಮಾಡಿದರು. ಪೆಟ್ರೋಲ್ ಬಂಕ್‌ನಲ್ಲಿ ವಾಹನಕ್ಕೆ ಪೆಟ್ರೋಲ್ ಹಾಕಿಸುವಾಗಲೂ ಹಲವು ಪುರುಷರು ಗಮನಿ ಸುತ್ತಲೇ ಇದ್ದರು. ಪ್ರಯಾಣದ ಮಧ್ಯೆ ಇಬ್ಬರು ಆಟೋ ಚಾಲಕರು ತಮ್ಮ ವಾಹನಗಳನ್ನು ಸ್ಕೂಟರ್‌ಗೆ ಅಡ್ಡಲಾಗಿ ನಿಂತು ಜಗಳ ಮಾಡಲು ಬಂದಿದ್ದಾರೆ.
Viral Video: ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ
ಮತ್ತೊಬ್ಬ ಆಟೋ ಚಾಲಕ ಪದೇ ಪದೇ ಹತ್ತಿರ ಬರಲು ಯತ್ನಿಸಿದ. ಬೈಕ್ , ಸೈಕಲ್ ಹಾಗೂ ಕಾರುಗಳಲ್ಲಿ ಸಂಚರಿಸುತ್ತಿದ್ದ ಸವಾರರು ತಮ್ಮನ್ನು ಹಿಂಬಾಲಿಸಲು ಪ್ರಯತ್ನಿಸಿದರು ಎಂದು ಅವರು ತಿಳಿಸಿದ್ದಾರೆ. ಪರಿಸ್ಥಿತಿ ತೀವ್ರ ಅಹಿತಕರವೆನಿಸಿದಾಗ ಅವರು ಈ ಪ್ರಯೋಗವನ್ನು ನಿಲ್ಲಿಸಲು ನಿರ್ಧರಿಸಿದರು. ಕಳೆದ ಎರಡು ಗಂಟೆಗಳಲ್ಲಿ ನನಗೆ ಇದು ಅತ್ಯಂತ ಅಸಹ್ಯಕರ ಅನುಭವವನ್ನು ನೀಡಿತು ಅಂದಿದ್ದಾರೆ.
ಈ ವಿಡಿಯೋ ಜಾಲತಾಣಗಳಲ್ಲಿ 17 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. ರಾತ್ರಿ ವೇಳೆಯಲ್ಲಿ ಹೆಣ್ಣುಮಕ್ಕಳು ಒಂಟಿಯಾಗಿ ಹೊರಗೆ ಹೋಗುವುದು ಭಾರತದಲ್ಲಿ ಸುರಕ್ಷಿತ ಅಲ್ಲ, ಇದು ಭಾರತದಲ್ಲಿ ಮಹಿಳೆಯರು ಪ್ರತಿದಿನ ಎದುರಿಸುತ್ತಿರುವ ಕಟು ವಾಸ್ತವ ಎಂದು ಹಲವಾರು ಜನ ಪ್ರತಿಕ್ರಿಯೆ ನೀಡಿದ್ದಾರೆ.