ಮಧ್ಯರಾತ್ರಿಯಲ್ಲೂ ದೆಹಲಿಯ ಪಾರ್ಕ್‌ನಲ್ಲಿ ಜನ ಜಂಗುಳಿ; ರಾತ್ರಿ 12ರ ಬಳಿಕ ಸಾರ್ವಜನಿಕರಿಗೆ ಇಲ್ಲೇನು ಕೆಲಸ ಅಂತೀರಾ? ಈ ಸ್ಟೋರಿ ಓದಿ
Viral News: ದೆಹಲಿಯಲ್ಲಿ ತಾಪಮಾನ ಮಿತಿ ಮೀರಿದ್ದು, ವೃದ್ಧರು, ಮಕ್ಕಳು, ಪೋಷಕರು ಸೇರಿ ರಾತ್ರಿ ಕೂಡ ಪಾರ್ಕ್‌ನಲ್ಲೇ ಸಮಯ ಕಳೆಯುತ್ತಿದ್ದಾರೆ. ದೆಹಲಿಯಲ್ಲಿ ವಾಸಿಸುತ್ತಿರುವ ಮೆಕ್ಸಿಕೋದ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಮಧ್ಯರಾತ್ರಿ ಸ್ಥಳೀಯ ಪಾರ್ಕ್‌ಗೆ ವಾಕಿಂಗ್ ಹೋದಾಗ ಕಂಡ ಈ ದೃಶ್ಯವನ್ನು ಶೇರ್ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಪ್ರಸ್ತುತ ತಾಪಮಾನವು 40°Cನಿಂದ 43°C ಆಸುಪಾಸಿನಲ್ಲಿದೆ. ಇದರಿಂದ ಮಧ್ಯರಾತ್ರಿಯೂ ಜನರು ಪಾರ್ಕ್‌ಗೆ ಭೇಟಿ ನೀಡುತ್ತಿದ್ದಾರೆ.
ಮಧ್ಯರಾತ್ರಿಯೂ ಪಾರ್ಕ್‌ನಲ್ಲಿ ಕಾಲ ಕಳೆದ ಸಾರ್ವಜನಿಕರು -
ನವದೆಹಲಿ, ಜೂ. 8: ಸಾಮಾನ್ಯವಾಗಿ ಜನರು ಪಾರ್ಕ್‌ಗೆ ಮುಂಜಾನೆ ಅಥವಾ ಸಂಜೆ ತಂಪಾದ ವಾತಾವರಣ ಆನಂದಿಸಲು ಹೋಗುತ್ತಾರೆ. ಆದರೆ ದೆಹಲಿಯಲ್ಲಿ ಈಗ ವೃದ್ಧರು, ಮಕ್ಕಳು, ಪೋಷಕರು ರಾತ್ರಿ ಕೂಡ ಪಾರ್ಕ್‌ನಲ್ಲೇ ಸಮಯ ಕಳೆಯುವಂತಾಗಿದೆ. ದೆಹಲಿಯಲ್ಲಿ ವಾಸಿಸುತ್ತಿರುವ ಮೆಕ್ಸಿಕೋದ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಮಧ್ಯರಾತ್ರಿ ಸ್ಥಳೀಯ ಪಾರ್ಕ್‌ಗೆ ವಾಕಿಂಗ್ ಹೋದಾಗ ಕಂಡ ಈ ದೃಶ್ಯವನ್ನು ಶೇರ್ (Viral News) ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಪ್ರಸ್ತುತ ತಾಪಮಾನವು 40°Cನಿಂದ 43°C ಆಸುಪಾಸಿನಲ್ಲಿದೆ. ಇದರಿಂದ ಮಧ್ಯರಾತ್ರಿಯೂ ಜನರು ಪಾರ್ಕ್‌ಗೆ ಭೇಟಿ ನೀಡುತ್ತಿದ್ದಾರೆ.
ತನ್ನ ಪತಿಯೊಂದಿಗೆ ಉದ್ಯಾನವನದಲ್ಲಿ ನಡೆಯುತ್ತಿದ್ದ ಮೆಕ್ಸಿಕನ್ ಮಹಿಳೆ ಈ ದೃಶ್ಯವನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ʼʼಮೆಕ್ಸಿಕೋ ಅಥವಾ ಬೇರೆಲ್ಲಿಯೂ ಮಧ್ಯ ರಾತ್ರಿ ಉದ್ಯಾನವನದಲ್ಲಿ ಕುಟುಂಬಗಳು ಕಾಲ ಕಳೆಯುವುದನ್ನು ನೋಡಿಲ್ಲ. ಇಲ್ಲಿನ ದೃಶ್ಯ ನನ್ನು ಅಚ್ಚರಿಗೆ ದೂಡಿದೆʼʼ ಎಂದು ಹೇಳಿದ್ದಾರೆ. ಮಕ್ಕಳು ಉದ್ಯಾನವನದಲ್ಲಿ ಆಟವಾಡುತ್ತಿದ್ದರೆ ಅವರ ಪೋಷಕರು ಉತ್ತಮ ಹವಾಮಾನ ಆನಂದಿಸುತ್ತಿದ್ದರು.
ವಿಡಿಯೊ ನೋಡಿ:
ಈ ಅನುಭವ ಶೇರ್ ಮಾಡಿದ ಮಹಿಳೆ, ''ಮಧ್ಯರಾತ್ರಿ 12 ಗಂಟೆಯಾಗಿದ್ದರೂ ಭಾರತದಲ್ಲಿ ಜನರು ಪಾರ್ಕ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ದೆಹಲಿಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಹೀಗಾಗಿ, ರಾತ್ರಿಯ ತಂಪಾದ ವಾತಾವರಣವನ್ನು ಆನಂದಿಸಲು ಜನರು ಮಧ್ಯ ರಾತ್ರಿಯಾದರೂ ಪಾರ್ಕ್‌ಗಳಿಗೆ ಲಗ್ಗೆ ಇಡುತ್ತಿದ್ದಾರೆ'' ಎಂದು ಹೇಳಿದ್ದಾರೆ.
ವೇದಿಕೆಯಲ್ಲೇ ಆ್ಯಂಕರ್‌ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ
''ಭಾರತದಲ್ಲಿ ವಾಸಿಸುತ್ತಿರುವ ವಿದೇಶಿ ವ್ಯಕ್ತಿಯಾಗಿ ಇದು ನನಗೆ ಶಾಕಿಂಗ್ ಆಗಿತ್ತು. ದೆಹಲಿಯ ಇಷ್ಟು ಭೀಕರ ಬಿಸಿಲಿನ ಧಗೆಗೆ ಭಾರತೀಯ ಕುಟುಂಬದೊಂದಿಗೆ ಹೇಗೆ ಸಮಯ ಕಳೆಯುತ್ತಾರೆ ಎಂದು ನಾನು ಯೋಚಿಸುತ್ತಿದ್ದೆ. ಆದರೆ ಹೆಚ್ಚಿನ ತಾಪಮಾನದಿಂದಾಗಿ ಜೀವನವನ್ನು ನಡೆಸುವುದು ತುಂಬಾ ಕಷ್ಟವಾಗಿದೆ. ಆದ್ದರಿಂದ ಭಾರತೀಯರು ಮನೆಯಿಂದ ಹೊರಗೆ ಕುಟುಂಬದೊಂದಿಗೆ ಕಳೆಯಲು ಪಾರ್ಕ್‌ನಲ್ಲೇ ಸಮಯ ಕಳೆಯುತ್ತಿದ್ದಾರೆʼʼ ಎಂದಿದ್ದಾರೆ.
ಪೋಸ್ಟ್‌ನ ಶೀರ್ಷಿಕೆಯಲ್ಲಿ, ಅವರು ಹೀಗೆ ಬರೆದಿದ್ದಾರೆ, "ನಾವು ಶನಿವಾರ ಮಧ್ಯರಾತ್ರಿ ದೆಹಲಿಯ ಉದ್ಯಾನವನಕ್ಕೆ ಹೋಗಿದ್ದೆವು. ಈ ಅಪರೂಪ ದೃಶ್ಯ ಕಂಡುಕೊಂಡೆವು. ನಾನು ಇದನ್ನು ಮೆಕ್ಸಿಕೊದಲ್ಲಿ ಎಂದಿಗೂ ನೋಡಿಲ್ಲʼʼ ಎಂದು ತಿಳಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼಇದು ನಿಜವಾಗಿಯೂ ಉತ್ತಮ ಉಪಾಯʼʼ ಎಂದು ಹೇಳಿದ್ದಾರೆ. ಮತ್ತೊಬ್ಬರು, ʼʼನಿಜವಾಗಿಯೂ ದೆಹಲಿಯ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆʼʼ ಎಂದು ವಿವರಿಸಿದ್ದಾರೆ.