ಹೃದಯಾಘಾತಕ್ಕೆ ಮತ್ತೊಂದು ಬಲಿ; ನೋಡನೋಡುತ್ತಿದ್ದಂತೆ ಕುಸಿದು ಬಿದ್ದು 14 ವರ್ಷದ ಬಾಲಕಿ ಸಾವು
ರೆಸ್ಟೋರೆಂಟ್ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. 14 ವರ್ಷದ ಆನಂದಿ ಮೋದಿ ಮೃತಪಟ್ಟ ಬಾಲಕಿ. ಆಕೆಗೆ ಹೃದಯಾಘಾತವಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಆಕೆ ಮಾವನ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ.
ಸಂಗ್ರಹ ಚಿತ್ರ -
ಗುಜರಾತ್: ಬಾಲಕಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಗುಜರಾತ್‌ನ (Gujarat) ರಾಜ್‌ಕೋಟ್‌ನಲ್ಲಿ(Rajkot) ನಡೆದಿದೆ. ಪವಿತ್ರ ಹೆಚ್ಚುವರಿ ಚಾಂದ್ರಮಾನ ಪುರುಷೋತ್ತಮ ಮಾಸ ಹಾಗೂ ಬೇಸಗೆ ರಜೆಯ ಹಿನ್ನೆಲೆಯಲ್ಲಿ 14 ವರ್ಷದ ಆನಂದಿ ಮೋದಿ ಮಾವನ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಆನಂದಿ ಮೋದಿಗೆ ಹೃದಯಾಘಾತವಾಗಿರುವ (cardiac arrest) ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಆನಂದಿ ಮೋದಿ ರಾತ್ರಿ ಊಟದ ಬಳಿಕ ರೆಸ್ಟೋರೆಂಟ್ ಆವರಣದಲ್ಲಿ ತನ್ನದೇ ಪ್ರಾಯದ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ಕುಸಿದು ಬಿದ್ದಿದ್ದಾಳೆ.
ಗುಜರಾತ್‌ನ ಜಾಮ್‌ನಗರದ ಆನಂದಿ ಮೋದಿ ರಾಜ್‌ಕೋಟ್‌ನಲ್ಲಿರುವ ತನ್ನ ಮಾವನ ಮನೆಗೆ ಬಂದಿದ್ದಳು. ಭಾನುವಾರ ಸಂಜೆ ಕುಟುಂಬದೊಂದಿಗೆ ಸ್ಟೋರೆಂಟ್‌ನಲ್ಲಿ ಊಟ ಮಾಡಲು ಹೋಗಿದ್ದಾಳೆ.
Yadgir News: ಯಾದಗಿರಿಯಲ್ಲಿ ಕ್ವಾರಿಗೆ ಬಿದ್ದು ಇಬ್ಬರು ಬಾಲಕಿಯರು ಸೇರಿ ಮೂವರ ಸಾವು; ಬಟ್ಟೆ ತೊಳೆಯುವ ವೇಳೆ ದುರಂತ!
ಊಟದ ಬಳಿಕ ಆನಂದಿ ರೆಸ್ಟೋರೆಂಟ್ ಆವರಣದಲ್ಲಿ ಇತರ ಮಕ್ಕಳೊಂದಿಗೆ ಆಟವಾಡಲು ನಿರ್ಧರಿಸಿದರು. ಮಕ್ಕಳು ಓಡುತ್ತಾ ಒಬ್ಬರನ್ನೊಬ್ಬರು ಹಿಡಿಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಆನಂದಿ ನಿಕುಸಿದು ಬಿದ್ದಿದ್ದಾಳೆ. ಇದರ ವಿಡಿಯೋ ರೆಸ್ಟೋರೆಂಟ್ ನ ಸಿಸಿಟಿವಿಯಲ್ಲಿ ದಾಖಲಾಗಿದೆ.
ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ಸಮಯದಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಬಾಲಕಿಗೆ ಹೃದಯಾಘಾತವಾಗಿದೆ ಎಂದು ಶಂಕಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ತನಿಖೆಯ ಅನಂತರವೇ ಸಾವಿನ ಕಾರಣವನ್ನು ದೃಢಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಲಿಗಢದಲ್ಲಿ 2024ರ ಡಿಸೆಂಬರ್ ತಿಂಗಳಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು. 14 ವರ್ಷದ ಬಾಲಕನೊಬ್ಬ ಶಾಲೆಯಲ್ಲಿ ಸ್ಪರ್ಧೆಯಲ್ಲಿ ಓಡುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದನು. ಮೋಹಿತ್ ಚೌಧರಿ ಮೃತಪಟ್ಟ ಬಾಲಕ. ಆತ ತನ್ನ ಸ್ನೇಹಿತರೊಂದಿಗೆ ಓಡುತ್ತಿದ್ದಾಗ ಕುಸಿದು ಬಿದ್ದಿದ್ದನು. ತಕ್ಷಣವೇ ಮೋಹಿತ್‌ನ ಸ್ನೇಹಿತರು ಅವನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಆತ ಸಾವನ್ನಪ್ಪಿರುವುದಾಗಿ ಘೋಷಿಸಿದರು.
ಇದೇ ರೀತಿ ಇನ್ನೊಂದು ಘಟನೆ 2024 ರ ನವೆಂಬರ್‌ನಲ್ಲಿ ಅಲಿಗಢದ ಅರ್ರಾನಾ ಗ್ರಾಮದಲ್ಲಿ ನಡೆದಿದ್ದು, 20 ವರ್ಷದ ಮಮತಾ ಎಂಬಾಕೆ ಸಾವನ್ನಪ್ಪಿದ್ದಳು.