Viral News: ಕಾಣೆಯಾದ ಪತ್ನಿ ತಾಜ್ ಮಹಲ್‍ನಲ್ಲಿ ಪ್ರಿಯಕರನೊಂದಿಗೆ ಪತ್ತೆ; ವಿಡಿಯೋ ನೋಡಿ ಪತಿಗೆ ಶಾಕ್!
40 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ ನಂತರ ಅವಳು ತಾಜ್ ಮಹಲ್‍ನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಓಡಾಡುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಕಂಡುಕೊಂಡಿದ್ದಾನೆ.ಇದೀಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.


ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧ ಪ್ರಕರಣಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದೀಗ ಪತಿಯೊಬ್ಬ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ ನಂತರ ಅವಳು ತಾಜ್ ಮಹಲ್‍ನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಓಡಾಡುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಕಂಡು ಶಾಕ್ ಆಗಿದ್ದಾನೆ. ಏಪ್ರಿಲ್ 15ರಿಂದ ಪತ್ನಿ ಅಂಜುಮ್ ಕಾಣೆಯಾಗಿದ್ದು, ಆಕೆಯ ಪತಿ ಶಕೀರ್ ಕೆಲವು ದಿನ ಅವಳನ್ನು ಹುಡುಕಾಡಿದ ನಂತರ ಏಪ್ರಿಲ್ 18 ರಂದು ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ ಆಕೆ ತನ್ನ ಪ್ರೇಮಿಯೊಂದಿಗೆ ಮನೆಬಿಟ್ಟು ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ವಿವಾಹ ಕಾರ್ಯಕ್ರಮಕ್ಕೆ ಶಕೀರ್ ಹಾಗೂ ಮನೆಯವರು ಹೊರಗೆ ಹೋಗಿ ಮನೆಗೆ ಬಂದಾಗ ಆತನ ಪತ್ನಿ ಮತ್ತು ನಾಲ್ಕು ಮಕ್ಕಳು ಮನೆಯಲ್ಲಿ ಇರಲಿಲ್ಲ. ಅದೂ ಅಲ್ಲದೇ, ಮನೆಗೆ ಬೀಗ ಹಾಕಲಾಗಿತ್ತು. ವರದಿ ಪ್ರಕಾರ ಅವನ ಪತ್ನಿ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ನೆರೆಹೊರೆಯವರು ಅತನಿಗೆ ಮಾಹಿತಿ ನೀಡಿದ್ದಾರೆ. ಕೆಲವು ದಿನಗಳವರೆಗೆ ಅವಳನ್ನು ಹುಡುಕಿದ ನಂತರ, ಶಕೀರ್ ಪೊಲೀಸರನ್ನು ಸಂಪರ್ಕಿಸಿದ್ದಾನೆ.
ನಂತರ, ಅವನ ಸಂಬಂಧಿಕರು ವಾಟ್ಸಾಪ್‍ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಪತ್ನಿ ಅಂಜುಮ್ ಅವಳನ್ನು ನೋಡಿ ಶಾಕ್ ಆಗಿದ್ದಾನೆ. ವಿಡಿಯೊದಲ್ಲಿ, ಅವಳು ಅಪರಿಚಿತ ವ್ಯಕ್ತಿಯೊಂದಿಗೆ ತಾಜ್ ಮಹಲ್‍ನಲ್ಲಿ ಕಾಣಿಸಿಕೊಂಡಿದ್ದಾಳೆ. ಶಕೀರ್ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿದ್ದ ಆ ವ್ಯಕ್ತಿಯನ್ನು ಗುರುತಿಸಿದ್ದಾನೆ. ಅಂಜುಮ್ ಮತ್ತು ಆ ವ್ಯಕ್ತಿ ನಡುವೆ ಸಂಬಂಧವಿತ್ತು. ಹೀಗಾಗಿ ಶಕೀರ್ ಇಲ್ಲದ ಸಮಯದಲ್ಲಿ ಆತನೊಂದಿಗೆ ಓಡಿಹೋಗಿದ್ದಾಳೆ. ಈ ಘಟನೆಯ ಬಗ್ಗೆ ಜಿಲ್ಲಾ ಪೊಲೀಸರು ಆಗ್ರಾದಲ್ಲಿನ ಇತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಜೋಡಿಗಾಗಿ ಶೋಧ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಬರೋಬ್ಬರಿ 7 ವರ್ಷಗಳ ನಂತರ ಹಳೆಯ ದೋಸ್ತ್‌ಗಳ ಭೇಟಿ? ಹೃದಯಸ್ಪರ್ಶಿ ವಿಡಿಯೊ ಫುಲ್ ವೈರಲ್
ಮಹಿಳೆಯರು ಪತಿಗೆ ತಿಳಿಯದಂತೆ ಅನೈತಿಕ ಸಂಬಂಧ ಇಟ್ಟುಕೊಂಡು ನಂತರ ಪತಿಯ ಕೈಗೆ ಸಿಕ್ಕಿಕೊಡ ಘಟನೆ ಈ ಹಿಂದೆ ಹಲವು ವರದಿಯಾಗಿತ್ತು. ಇತ್ತೀಚೆಗೆ ಗುರುಗ್ರಾಮದ ವ್ಯಕ್ತಿಯೊಬ್ಬ ಆತನ ಪತ್ನಿಯನ್ನು ಆಕೆಯ ಪ್ರಿಯಕರ ಜೊತೆ ತನ್ನ ನಿವಾಸದಲ್ಲಿ ಒಟ್ಟಿಗೆ ಇರುವಾಗ ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾನೆ. ನಂತರ ಪತಿಯ ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ. ವರದಿಗಳ ಪ್ರಕಾರ, ಗುರುಗ್ರಾಮದ ಬಸಾಯಿ ಎನ್ಕ್ಲೇವ್ ನಿವಾಸಿ ಮೌಸಮ್ ಕೆಲಸದಿಂದ ಹಿಂದಿರುಗಿದಾಗ ತನ್ನ ಹೆಂಡತಿಯನ್ನು ಅವಳ ಪ್ರಿಯಕರನೊಂದಿಗೆ ತನ್ನ ಮನೆಯಲ್ಲಿ ಹಿಡಿದಿದ್ದಾನೆ. ಮೌಸಮ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಾನೆ. ಅವರನ್ನು ಒಟ್ಟಿಗೆ ಹಿಡಿದ ನಂತರ, ಅವನ ಪತ್ನಿ ಮತ್ತು ಪ್ರೇಮಿ-ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ.