ಗ್ರಾಹಕನಂತೆ ಮದ್ಯದ ಅಂಗಡಿಗೆ ನುಗ್ಗಿ ಸಾರಾಯಿ ಕುಡಿದು ನಿದ್ದೆಗೆ ಜಾರಿದ ಕೋತಿ; ವಿಡಿಯೊ ನೋಡಿ
Viral News: ಕೋತಿಯೊಂದು ಮದ್ಯದ ಅಂಗಡಿಗೆ ನುಗ್ಗಿ ಸಾರಾಯಿ ಕುಡಿದ ವಿಡಿಯೊವೊಂದು ವೈರಲ್ ಆಗುತ್ತಿದೆ. ಜಾರ್ಖಂಡ್ ರಾಜಧಾನಿ ರಾಂಚಿಯ ಹತ್ತಿರ ಇರುವ ಓರ್ಮಂಜಿಯ ಬ್ಲಾಕ್ ಚೌಕ್‌ನಲ್ಲಿ ಈ ಘಟನೆ ನಡೆದಿದ್ದು ಅಲ್ಲಿನ ಜನರನ್ನು ಅಚ್ಚರಿಗೆ ದೂಡಿದೆ. ಜನ ಸೇರಿದ್ದರೂ ಕೋತಿ ಯಾವುದೇ ರೀತಿ ಕಂಗಲಾಗದೇ ಸೀದಾ ಮದ್ಯದ ಅಂಗಡಿಗೆ ಒಳಹೊಕ್ಕಿದೆ.
ಜಾರ್ಖಂಡ್‌ನ ರಾಂಚಿಯ ಮದ್ಯದ ಅಂಗಡಿಗೆ ನುಗ್ಗಿ ಮದ್ಯ ಕುಡಿದ ಕೋತಿ -
ರಾಂಚಿ, ಸೆ. 26: ಇಂದು ಸೋಷಿಯಲ್ ಮೀಡಿಯಾದಲ್ಲಿ ವಿಚಿತ್ರ ಘಟನೆಗಳು ವೈರಲ್ (Viral News) ಆಗುತ್ತಿರುತ್ತವೆ. ಅದೇ ರೀತಿ ಕೋತಿಯೊಂದು ಮದ್ಯದ ಅಂಗಡಿಗೆ ತೆರಳಿ ಸಾರಾಯಿ ಕುಡಿದ ವಿಡಿಯೊವೊಂದು ವೈರಲ್ ಆಗುತ್ತಿದೆ. ಜಾರ್ಖಂಡ್ ರಾಜಧಾನಿ ರಾಂಚಿಯ ಹತ್ತಿರ ಇರುವ ಓರ್ಮಂಜಿಯ ಬ್ಲಾಕ್ ಚೌಕ್‌ನಲ್ಲಿ ಈ ಘಟನೆ ನಡೆದಿದೆ. ಕೋತಿಯು ಜನ ಸೇರಿದ್ದರೂ ಯಾವುದೇ ಅಳುಕು ಪ್ರದರ್ಶಿಸದೆ ಸೀದಾ ಮದ್ಯದ ಅಂಗಡಿಗೆ ಒಳಹೊಕ್ಕಿದೆ.
ಮದ್ಯದ ಅಂಗಡಿಗೆ ಕೋತಿ ಗ್ರಾಹಕನಂತೆ ಬಂದಿದೆ. ಆರಂಭದಲ್ಲಿ ಅಂಗಡಿಯ ಮಾಲಕ ಕೋತಿ ಆಚೆ- ಇಚೆ ಓಡಾಡುವುದನ್ನು ಕಂಡು ನೋಡುತ್ತಾ ನಿಂತಿದ್ದ. ಕೂಡಲೇ ಅದು ಮದ್ಯದ ಬಾಟಲಿ ನೋಡಿ ಕೈಗೆತ್ತಿಕೊಂಡು ಕುಡಿಯಲು ಪ್ರಾರಂಭಿಸಿತು.
ವಿಡಿಯೊ ನೋಡಿ:
रांची: ठेके में घुसा नया VIP कस्टमर! दारु पीकर बंदर हुआ 'फुल टाइट', बीयर की पेटियों पर बेसुध सोने का वीडियो वायरल
— Arun Shivhare (@ArunShivhare100) September 26, 2026
> रांची के ओरमांझी ब्लॉक चौक के पास एक हैरान कर देने वाली घटना घाटी
> दरअसल रांची के ओरमांझी ब्लॉक चौक के पास वाले दारू दुकान में एक बन्दर घूंस गया
> बन्दर अंदर… pic.twitter.com/BEWDbMvOnl
ಬಾಟಲಿಯಿಂದ ಮದ್ಯ ಸೇವಿಸಿದ್ದಲ್ಲದೆ ನಂತರ ಅಂಗಡಿಯ ಒಳಗೆಯೇ ನಿದ್ದೆ ಮಾಡುವ ಮೂಲಕ ನೆರೆದವರನ್ನು ಅಚ್ಚರಿಗೆ ದೂಡಿತು. ಮದ್ಯದ ಅಮಲು ತಟ್ಟುತ್ತಿದ್ದಂತೆ ಕೋತಿಗೆ ತೀವ್ರ ತೂಕಡಿಕೆ ಏರತೊಡನತು. ಕುಡಿದ ಮತ್ತಿನಲ್ಲಿ ಅದು ಅಂಗಡಿಯ ಮೇಜಿನ ಮೇಲೆಯೇಆರಾಮವಾಗಿ ನಿದ್ರಿಸಿತು.
ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ; 20 ಮಂದಿಗೆ ಗಾಯ
ಈ ಘಟನೆಯು ಸ್ಥಳೀಯರಿಗೆ ತಮಾಷೆಯಾಗಿ ಕಂಡಿತು. ಕೋತಿ ಮದ್ಯ ಸೇವಿಸಿ ನಿದ್ರೆಗೆ ಜಾರಿದ ವಿಷಯ ತಿಳಿದ ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಅಂಗಡಿಯ ಮಾಲೀಕರು ಪ್ರಾಣಿ ರಕ್ಷಣಾ ತಂಡಕ್ಕೆ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ, ಕೋತಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರ ವಹಿಸಿ, ಅಂಗಡಿಯಿಂದ ಹೊರಗೆ ಕರೆದೊಯ್ದರು.