ಬಾಯಾರಿದ ಮರಿಗೆ ಹಾಲುಣಿಸಲು ರಸ್ತೆ ಮಧ್ಯೆಯೇ ನಿಂತ ತಾಯಿ ಜಿಂಕೆ; ವಾಹನ ಸವಾರರು ಮಾಡಿದ್ದೇನು?
Viral Video: ತಾಯಿ ಜಿಂಕೆಯೂ ತನ್ನ ಮಗುವಿಗೆ ಹಾಲುಣಿಸಲು ರಸ್ತೆ ಮಧ್ಯಯೇ ನಿಂತುಕೊಂಡಿದೆ. ಇದರಿಂದಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಈ ಸಂದರ್ಭದಲ್ಲಿ ವಾಹನ ಸವಾರರು ತೋರಿದ ಮಾನವೀಯತೆ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.
ಮರಿಗೆ ಹಾಲುಣಿಸಲು ರಸ್ತೆ ಮಧ್ಯೆಯೇ ನಿಂತ ತಾಯಿ ಜಿಂಕೆ -
ಚೆನ್ನೈ,ಮಾ.25: ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೊಗಳು ವೈರಲ್ (Viral Video) ಆಗುತ್ತವೆ. ಅದರಲ್ಲಿ ಕೆಲವೊಂದು ದೃಶ್ಯಗಳು ಗಮನ ಸೆಳೆದರೆ ಇನ್ನೂ ಕೆಲವೊಂದು ಆಶ್ಚರ್ಯ ಉಂಟುಮಾಡುತ್ತವೆ. ಇದೀಗ ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ಹೃದಯಸ್ಪರ್ಶಿ ಘಟನೆವೊಂದು ಕಂಡು ಬಂದಿದೆ. ತಾಯಿ ಜಿಂಕೆ ಯೊಂದು ರಸ್ತೆಯ ಮಧ್ಯದಲ್ಲಿಯೇ ತನ್ನ ಮರಿಯನ್ನು ಶಾಂತವಾಗಿ ಪೋಷಿಸಿ ಹಾಲುಣಿಸುತ್ತಿದೆ.
ತಾಯಿ ಜಿಂಕೆಯೂ ತನ್ನ ಮಗುವಿಗೆ ಹಾಲುಣಿಸಲು ರಸ್ತೆ ಮಧ್ಯಯೇ ನಿಂತುಕೊಂಡಿದೆ. ಇದ ರಿಂದಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಈ ಸಂದರ್ಭದಲ್ಲಿ ವಾಹನ ಸವಾರರು ತೋರಿದ ಮಾನವೀಯತೆ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.
ವಿಡಿಯೋ ನೋಡಿ:
ಚೆನ್ನೈನ ಐಐಟಿ ಮದ್ರಾಸ್ ಕ್ಯಾಂಪಸ್‌ನ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ತಾಯಿ ಜಿಂಕೆಯೊಂದು ತನ್ನ ಮರಿಗೆ ಹಾಲುಣಿಸಲು ರಸ್ತೆಯ ಮಧ್ಯದಲ್ಲೇ ನಿಂತಿದೆ. ಆದರೆ ಅಲ್ಲಿನ ವಾಹನ ಸವಾರರು ತೋರಿದ ಮಾನವೀಯತೆ ಎಲ್ಲರ ಮನ ಗೆದ್ದಿದೆ. ವಾಹನ ಸವಾರರು ಹಾರ್ನ್ ಮಾಡುವ ಬದಲು ಅಥವಾ ಹಾದು ಹೋಗಲು ಪ್ರಯತ್ನಿಸುವ ಬದಲು ತಾಳ್ಮೆಯಿಂದ ಕಾಯುತ್ತಿದ್ದರು.
Viral Video: ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು; ವಿಡಿಯೊ ವೈರಲ್
ವೈರಲ್ ಆದ ದೃಶ್ಯದಲ್ಲಿ ತಾಯಿ ಜಿಂಕೆಯೂ ಶಾಂತವಾಗಿ ತನ್ನ ಮರಿಗೆ ಹಾಲುಣಿಸುತ್ತಿದೆ. ಕಿಕ್ಕಿರಿದ ವಾಹನಗಳು ಸೇರಿದರೂ ಜಿಂಕೆ ಭಯಗೊಳ್ಳುವ ಬದಲು ಮರಿಯ ಪೋಷಣೆ ಮಾಡುವಲ್ಲಿ ಗಮನಹರಿಸಿದೆ. ಸಾಲುಗಟ್ಟಿ ನಿಂತಿದ್ದ ಸ್ಕೂಟರ್, ಕಾರು ಚಾಲಕರು ಹಾರ್ನ್ ಮಾಡದೆಯೇ ತಾಳ್ಮೆಯಿಂದ ಕಾಯುತ್ತಿದ್ದಾರೆ.
ಸುಮಾರು 18 ಸೆಕೆಂಡುಗಳ ವರೆಗೆ ರಸ್ತೆಯ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು ಸೃಷ್ಟಿಕರ್ತ ವೈಭವ್ ಗುರ್ಜರ್ ಹಂಚಿಕೊಂಡ ಈ ಕ್ಲಿಪ್ ತ್ವರಿತವಾಗಿ ವೈರಲ್ ಆಗಿದ್ದು ಲಕ್ಷಾಂತರ ವೀಕ್ಷಣೆ ಗಳಿಸಿದೆ. ಐಐಟಿ ಮದ್ರಾಸ್ ಕ್ಯಾಂಪಸ್ ತನ್ನ ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿ ಯಾಗಿದೆ. ಚೆನ್ನೈನ ಅರಣ್ಯ ಪ್ರದೇಶದಲ್ಲಿ ಹರಡಿ ರುವ ಇದು ಚುಕ್ಕೆ ಜಿಂಕೆ, ಕೃಷ್ಣಮೃಗಗಳು ಮತ್ತು ಹಲವಾರು ಪಕ್ಷಿಗಳಂತಹ ಪ್ರಭೇದಗಳಿಗೆ ನೆಲೆಯಾಗಿದೆ.