ಚಾಟ್ ಅಂಗಡಿಯಲ್ಲಿ ಕಾಲಿನಿಂದ ಆಲೂಗಡ್ಡೆ ಸ್ವಚ್ಛ ಗೊಳಿಸಿದ ಸಿಬ್ಬಂದಿ: ಆಕ್ರೋಶ ಹೊರಹಾಕಿದ ನೆಟ್ಟಿಗರು
Viral Video: ಉತ್ತರ ಪ್ರದೇಶದ ಗಾಜಿಯಾಬಾದ್ ನ ಲೋನಿಯದ ಚಾಟ್ ಅಂಗಡಿಯಲ್ಲಿ ಅಸಹ್ಯಕರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪಾದಗಳಿಂದ ಆಲೂಗಡ್ಡೆ ತೊಳೆಯುತ್ತಿರುವುದು ಕಂಡು ಬಂದಿದೆ. ಸದ್ಯ ಈ ದೃಶ್ಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲಿನಿಂದ ಆಲೂಗಡ್ಡೆ ಸ್ವಚ್ಛ ಗೊಳಿಸಿದ ಸಿಬ್ಬಂದಿ -
ಗಾಜಿಯಾಬಾದ್, ಮಾ.25: ಆಹಾರ ಸುರಕ್ಷತೆ ಉಲ್ಲಂಘನೆ ಎಸಗುವಂತಹ ಅನೇಕ ಘಟನೆಗಳು ಇತ್ತೀಚೆಗೆ ನಡೆದಿವೆ. ಕೊಳೆತ ಆಹಾರ ಪದಾರ್ಥ ಬಳಕೆ, ನೈರ್ಮಲ್ಯ ಕಾಪಾಡದೇ ಇರುವುದು ಇತ್ಯಾದಿ..ಈ ನಡುವೆ ಉತ್ತರ ಪ್ರದೇಶದ ಗಾಜಿಯಾಬಾದ್ ನ ಲೋನಿಯದ ಚಾಟ್ ಅಂಗಡಿಯಲ್ಲಿ ಅಸಹ್ಯಕರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪಾದಗಳಿಂದ ಆಲೂಗಡ್ಡೆ ತೊಳೆ ಯುತ್ತಿರುವುದು ಕಂಡು ಬಂದಿದೆ. ಸದ್ಯ ಈ ದೃಶ್ಯ (Viral News) ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಲೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಡಿಎಲ್‌ಎಫ್ ಅಂಕುರ್ ವಿಹಾರ್ -3 ರ ಎಟಿಎಂ ಚೌಕ್ ಬಳಿ ಇರುವ ಕೃಷ್ಣ ಚಾಟ್ ಭಂಡಾರ್‌ನಲ್ಲಿ ಈ ಘಟನೆ ಕಂಡು ಬಂದಿದೆ. ಈ ಕೃತ್ಯವು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಬಗ್ಗೆ ಜನರು ಆಹಾರ ನೈರ್ಮಲ್ಯ ಮಾನದಂಡಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ:
Hello Guys, Kis Kisko Tikki Khani h? Abhi Aalu ki Kutai chal rahi h !!
— Sachin Gupta (@Sachingupta) March 23, 2026
📍 Ghaziabad, Uttar Pradesh pic.twitter.com/73UdveqFul
41 ಸೆಕೆಂಡುಗಳ ದೃಶ್ಯವನ್ನು ಗ್ರಾಹಕರೊಬ್ಬರು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ, ಸಿಬ್ಬಂದಿಯೊಬ್ಬರು ಆಲೂಗಡ್ಡೆ ತುಂಬಿದ ದೊಡ್ಡ ಅಲ್ಯೂಮಿನಿಯಂ ಪಾತ್ರೆಯೊಳಗೆ ಕಾಲಿಟ್ಟು ತಮ್ಮ ಪಾದಗಳಿಂದ ತೊಳೆಯುವುದನ್ನು ಕಾಣಬಹುದು. ಅದರಲ್ಲೂ ಆ ವ್ಯಕ್ತಿ ಚಪ್ಪಲಿಗಳನ್ನು ಕೂಡ ಸ್ವಚ್ಛ ಗೊಳಿಸಿದ್ದಾನೆ.
Viral Video: ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಹೈರಾಣ
ನನ್ನ ತಾಯಿಯೂ ಇಲ್ಲಿಂದ ಆಲೂ ಟಿಕ್ಕಿ ಚಾಟ್ ತಿನ್ನುತ್ತಾರೆ. ಇದರ ರುಚಿ ಎಲ್ಲಿಂದ ಬರುತ್ತದೆ ಎಂದು ನಾನು ಅವಳಿಗೆ ತೋರಿಸಬೇಕು. ಅವನು ತನ್ನ ಕಾಲಿನಿಂದ ಆಲೂಗಡ್ಡೆಯನ್ನು ತೊಳೆಯುತ್ತಿದ್ದಾನೆ ... ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ವಿಡಿಯೊ ಮಾಡಿದ ವ್ಯಕ್ತಿ ಹೇಳುತ್ತಿರುವುದು ನೋಡಬಹುದು.
ವೀಡಿಯೊ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ, ಇದು ಬಳಕೆದಾರರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ನೆಟ್ಟಿಗರೊಬ್ಬರು ಜನರ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬರು ಜನರು ಇದನ್ನು ಆಸೆಪಟ್ಟು ತಿನ್ನುತ್ತಾರೆ..ಆದರೆ ಇವರು ನಂಬಿಕೆ ದ್ರೋಹ ಮಾಡುತ್ತಿದ್ದಾರೆ ಎಂದಿದ್ದಾರೆ.