ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SCO ಶೃಂಗಸಭೆಯಲ್ಲಿ ವಿಶ್ವ ನಾಯಕರ ಸಮಾಗಮ: ಒಂದೇ ಫ್ರೇಮ್‌ನಲ್ಲಿ ನರೇಂದ್ರ ಮೋದಿ, ವ್ಲಾಡಿಮಿರ್‌ ಪುಟಿನ್, ಷಿ ಜಿನ್‌ಪಿಂಗ್, ಶೆಹಬಾಜ್ ಶರೀಫ್

SCO Summit: ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆದ 26ನೇ SCO ಶೃಂಗಸಭೆಯ ಅಧಿಕೃತ ಫ್ಯಾಮಿಲಿ ಫೋಟೊದಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡರು. ಆ ಮೂಲಕ ಅಪರೂಪದ ಕ್ಷಣಕ್ಕೆ ಶೃಂಗಸಭೆ ಸಾಕ್ಷಿಯಾಯಿತು.

ಒಂದೇ ಫ್ರೇಮ್‌ನಲ್ಲಿ ಮೋದಿ, ಷಿ ಜಿನ್‌ಪಿಂಗ್, ಪುಟಿನ್, ಶೆಹಬಾಜ್ ಶರೀಫ್

ಎಸ್‌ಸಿಒ ಶೃಂಗಸಭೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಶ್ವ ನಾಯಕರು -

Profile
Sushmitha Jain Sep 1, 2026 4:39 PM

ಬಿಷ್ಕೆಕ್, ಸೆ. 1: ಶಾಂಘೈ ಸಹಕಾರ ಸಂಘಟನೆಯ 26ನೇ ಶೃಂಗಸಭೆಯ (SCO Summit) ಅಂಗವಾಗಿ ಮಂಗಳವಾರ (ಸೆಪ್ಟೆಂಬರ್‌ 1) ಕಿರ್ಗಿಸ್ತಾನದ (Kyrgyzstan) ಬಿಷ್ಕೆಕ್‌ನ ಯ್ರಿಸ್ ಓರ್ಡೊ ಕಾಂಗ್ರೆಸ್ ಹಾಲ್‌ನಲ್ಲಿ ನಡೆದ ಅಧಿಕೃತ ‘ಫ್ಯಾಮಿಲಿ ಫೋಟೊ’ದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್( Xi Jinping), ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹಾಗೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif) ಒಂದೇ ಚೌಕಟ್ಟಿನಲ್ಲಿ ಕಾಣಿಸಿಕೊಂಡರು.

ನಾಯಕರ ಗುಂಪು ಫೋಟೊಕ್ಕೆ ಪೋಸ್ ನೀಡುತ್ತಿದ್ದ ವೇಳೆ ಪ್ರಧಾನಿ ಮೋದಿ ಚೀನಾದ ಷಿ ಜಿನ್‌ಪಿಂಗ್ ಹಾಗೂ ಪುಟಿನ್ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದು ಗಮನ ಸೆಳೆಯಿತು.

ಶಾಂಘೈ ಸಹಕಾರ ಸಂಘಟನೆಯ 26ನೇ ಶೃಂಗಸಭೆಯಲ್ಲಿ ಗಮನ ಸೆಳೆದ ಮೋದಿ:



SCO ಶೃಂಗಸಭೆಯ ಆತಿಥ್ಯ ವಹಿಸಿರುವ ಕಿರ್ಗಿಸ್ತಾನದ ಅಧ್ಯಕ್ಷ ಸದಿರ್ ಜಪರೋವ್ ನೇತೃತ್ವದಲ್ಲಿ ಇದೇ ಸ್ಥಳದಲ್ಲಿ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ದುಂಡು ಮೇಜಿನ ಸಭೆಯೂ ನಡೆಯಿತು. ಸಭೆಯಲ್ಲಿ ಮೋದಿ, ಷಿ ಜಿನ್‌ಪಿಂಗ್, ಪುಟಿನ್ ಮತ್ತು ಶೆಹಬಾಜ್ ಶರೀಫ್ ಅವರೊಂದಿಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ, ಕಜಕಿಸ್ತಾನದ ಅಧ್ಯಕ್ಷ ಕಸ್ಸಿಂ-ಜೊಮಾರ್ಟ್ ಟೋಕಾಯೆವ್, ಉಜ್ಬೇಕಿಸ್ತಾನದ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಹಾಗೂ ತಜಿಕಿಸ್ತಾನದ ಅಧ್ಯಕ್ಷ ಎಮೋಮಾಲಿ ರಹಮೋನ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಪುಟಿನ್ ಜತೆ ಮೋದಿ ಮಾತುಕತೆ

ಸೋಮವಾರ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದರು. ವ್ಯಾಪಾರ, ಹೂಡಿಕೆ, ಇಂಧನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ ಸಹಕಾರ ಸೇರಿ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ರಷ್ಯಾ-ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಶಾಂತಿಯ ಪ್ರಯತ್ನಗಳನ್ನು ಮುಂದುವರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದರು.

‘ʼಮಹಿಳೆಯರು ಮನೆಗೇ ಸೀಮಿತವಾಗಿರಬೇಕು’ʼ: ಮುಸ್ಲಿಂ ಮುಖಂಡ ಅಬೂಬಕರ್ ಮುಸ್ಲಿಯಾರ್

ಈ ವೇಳೆ “ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದತ್ತ ಸಾಗಬೇಕಾಗಿದೆ” ಎಂದು ಮೋದಿ ಹೇಳಿದರು. ಭಾರತವು ಶಾಂತಿಗಾಗಿ ನಡೆಯುವ ಪ್ರತಿಯೊಂದು ಪ್ರಯತ್ನವನ್ನೂ ಬೆಂಬಲಿಸುತ್ತದೆ ಎಂದು ಅವರು ತಿಳಿಸಿದರು. ಪುಟಿನ್, “ನಾವು ಇದೇ ದಿಕ್ಕಿನಲ್ಲಿ ಸಾಗುತ್ತಿದ್ದೇವೆ” ಎಂದು ಪ್ರತಿಕ್ರಿಯಿಸಿದರು. ಭಾರತ ಮತ್ತು ರಷ್ಯಾ ನಡುವಿನ ಕಾರ್ಯತಂತ್ರದ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ಅವರು ಹೇಳಿದರು.

ಇರಾನ್ ಅಧ್ಯಕ್ಷರೊಂದಿಗೆ ಮೋದಿ ಭೇಟಿ

ಇದೇ ವೇಳೆ ಪ್ರಧಾನಿ ಮೋದಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಿದರು. ಎರಡು ವರ್ಷಗಳ ಬಳಿಕ ಉಭಯ ನಾಯಕರ ನಡುವಿನ ಮೊದಲ ಭೇಟಿಯಾಗಿದ್ದು, ಪ್ರಾದೇಶಿಕ ಹಾಗೂ ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚೆ ನಡೆಯಿತು.

26ನೇ SCO ಶೃಂಗಸಭೆ

26ನೇ SCO ಶೃಂಗಸಭೆಯಲ್ಲಿ 10 ಸದಸ್ಯ ರಾಷ್ಟ್ರಗಳು, 15 ಪಾಲುದಾರ ರಾಷ್ಟ್ರಗಳು ಮತ್ತು 2 ವೀಕ್ಷಕ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಸಂವಾದ ಹಾಗೂ ಸಹಕಾರ ಬಲಪಡಿಸುವುದು ಶೃಂಗಸಭೆಯ ಪ್ರಮುಖ ಉದ್ದೇಶ. 10 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ SCO, ಜಾಗತಿಕ GDPಯ ಸುಮಾರು 25% ಪಾಲನ್ನು ಹೊಂದಿದೆ. ನೆರೆಹೊರೆಯ ಸ್ನೇಹ, ಸಹಕಾರ ಮತ್ತು ಪರಸ್ಪರ ಹಿತಾಸಕ್ತಿಗಳ ಕ್ಷೇತ್ರಗಳಲ್ಲಿ ದೀರ್ಘಕಾಲೀನ ಸಂಬಂಧಗಳನ್ನು ಬಲಪಡಿಸುವತ್ತ ಸಂಘಟನೆ ಗಮನಹರಿಸಿದೆ.