ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಅಜಿತ್‌ ಅಗರ್ಕರ್‌! ಇದಕ್ಕೆ ಕಾರಣವೇನು?

ಭಾರತ ಕ್ರಿಕೆಟ್‌ ತಂಡದ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ಅವರ ಹುದ್ದೆ ಬಗ್ಗೆ ಬಿಸಿಸಿಐ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಚರ್ಚೆ ಮಾಡುವ ಸಾಧ್ಯತೆ ಇದೆ. ಅವರನ್ನು ಮುಂದುವರಿಸುವ ಸಾಧ್ಯತೆ ಇದೆ, ಆದರೆ, ಈ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಬಾಕಿ ಇದೆ.

ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಅಗರ್ಕರ್‌!

ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಅಗರ್ಕರ್‌. -

Profile
Ramesh Kote Sep 1, 2026 4:37 PM

ನವದೆಹಲಿ: ಭಾರತ ಪುರುಷರ ಕ್ರಿಕೆಟ್‌ ತಂಡದ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ (Ajit Agarkar) ಅವರ ಭವಿಷ್ಯದ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಅತಿ ಶೀಘ್ರದಲ್ಲಿಯೇ ನಿರ್ಧರಿಸುವ ಸಾಧ್ಯತೆ ಇದೆ. ಅವರನ್ನು ಮುಂದುವರಿಸಬೇಕೇ? ಅಥವಾ ಹುದ್ದೆಯಿಂದ ತೆಗೆಯಬೇಕೇ ಎಂಬ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ, ಬಿಸಿಸಿಐನ ಮುಂದಿನ ಸೆಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ.

ಮುಖ್ಯ ಆಯ್ಕೆದಾರ ಹುದ್ದೆಯಲ್ಲಿ ಮುಂದುವರಿಸುವ ಅಥವಾ ತೆಗೆಯುವ ಬಗ್ಗೆ ಬಿಸಿಸಿಐನ ಉನ್ನತ ಮಟ್ಟದ ಅಧಿಕಾರಿಗಳು ಅಜಿತ್‌ ಅಗರ್ಕರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆಂದು ಮೂಲಗಳು ಹೇಳಿರುವುದನ್ನು ಸ್ಪೋರ್ಟ್ಸ್‌ ತಕ್‌ ವರದಿ ಮಾಡಿದೆ. ಅಗರ್ಕರ್‌ ಅವರನ್ನು ಮುಂದುವರಿಸುವ ಬಗ್ಗೆ ಬಿಸಿಸಿಐ ಹಾಗೂ ಭಾರತ ತಂಡ ಒಲವು ಹೊಂದಿದೆ, ಆದರೆ ಬಿಸಿಸಿಐ ಸಭೆಯಲ್ಲಿ ಏನು ಚರ್ಚೆ ನಡೆಯಲಿದೆ ಎಂಬುದರ ಬಗ್ಗೆ ಇದು ಅವಲಂಭಿಸಿದೆ.

ಹಾರ್ದಿಕ್‌ ಪಾಂಡ್ಯಗೆ ಮತ್ತೆ ಗಾಯ; ಆಫ್ಘಾನ್‌ ಸರಣಿಗೆ ಅನುಮಾನ

ಭಾರತ ತಂಡದ ಮಾಜಿ ವೇಗಿಯನ್ನು ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಹುದ್ದೆಯಲ್ಲಿ ಮುಂದುವರಿಸಲು ರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಆಸಕ್ತಿಯನ್ನು ಹೊಂದಿದೆ. ಆದರ, ಈ ಹುದ್ದೆಯನ್ನು ಮುಂದುವರಿಯಬೇಕೇ ಅಥವಾ ತೊರೆಯಬೇಕೇ ಎಂಬ ನಿರ್ಧಾರವನ್ನು ಸ್ವತಃ ಅಜಿತ್‌ ಅಗರ್ಕರ್‌ ಅವರೇ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

ಸೆಪ್ಟಂಬರ್‌ ತಿಂಗಳಲ್ಲಿ ಅಜಿತ್‌ ಅಗರ್ಕರ್‌ ಅವರ ಚೀಫ್‌ ಸೆಲೆಕ್ಟರ್‌ ಹುದ್ದೆ ಅಂತ್ಯವಾಗಲಿದೆ. ಹಾಗಾಗಿ ಅವರ ಹುದ್ದೆ ಸದ್ಯ ಅತಂತ್ರದಲ್ಲಿದೆ. ಆದರೆ, ಬಿಸಿಸಿಐ ಅವರಿಗೆ ಇನ್ನೂ ಒಂದು ವರ್ಷ ಅವಧಿಯನ್ನು ವಿಸ್ತರಿಸಲು ಬಯಸುತ್ತಿದೆ. ಆದರೆ, ಇನ್ನೂ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.

ರೋಹಿತ್ ಶರ್ಮಾ ವಿಚಾರದಲ್ಲಿ ಬಿಸಿಸಿಐ–ಆಯ್ಕೆ ಸಮಿತಿ ನಡುವೆ ಭಿನ್ನಾಭಿಪ್ರಾಯ?

ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯವನ್ನು ನಿಭಾಯಿಸುವ ವಿಚಾರದಲ್ಲಿ ಬಿಸಿಸಿಐನ ಕೆಲವು ವಿಭಾಗಗಳು ಹಾಗೂ ಆಯ್ಕೆ ಸಮಿತಿ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳು ಕೇಳಿಬಂದಿವೆ. ಇದರಿಂದ ಈಗಾಗಲೇ ಗೊಂದಲದಲ್ಲಿರುವ ಪರಿಸ್ಥಿತಿಗೆ ಮತ್ತೊಂದು ಆಯಾಮ ಸೇರ್ಪಡೆಯಾಗಿದೆ.

5 ವರ್ಷಗಳ ಬಳಿಕ ಭಾರತ ಕ್ರಿಕೆಟ್‌ ತಂಡಕ್ಕೆ ಆರ್‌ಸಿಬಿ ಸ್ಟಾರ್‌ ಕೃಣಾಲ್‌ ಪಾಂಡ್ಯಗೆ ಕಮ್‌ಬ್ಯಾಕ್‌?

ಸದ್ಯ ಅಜಿತ್ ಅಗರ್ಕರ್ ಅವರೇ ಭಾರತ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಆದರೆ ಮುಂಬರುವ ಸಭೆಯಲ್ಲಿ ಬಿಸಿಸಿಐನ ಉನ್ನತ ಅಧಿಕಾರಿಗಳೊಂದಿಗೆ ನಡೆಯಲಿರುವ ಚರ್ಚೆ ಮಹತ್ವದ್ದಾಗಿದ್ದು, ಅಗರ್ಕರ್ ಅವರು ಮುಖ್ಯ ಆಯ್ಕೆಗಾರರಾಗಿ ಮುಂದುವರಿಯುತ್ತಾರೆಯೇ ಅಥವಾ ಅವರ ಸ್ಥಾನದಲ್ಲಿ ಬದಲಾವಣೆ ಮಾಡಲಾಗುತ್ತದೆಯೇ ಎಂಬುದನ್ನು ಈ ಸಭೆ ನಿರ್ಧರಿಸುವ ಸಾಧ್ಯತೆಯಿದೆ.

ಭಾರತ ತಂಡ ಎಲ್ಲಾ ಮಾದರಿಗಳಲ್ಲೂ ಮಹತ್ವದ ಅವಧಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಅಗರ್ಕರ್ ಅವರ ಭವಿಷ್ಯದ ಕುರಿತು ಬಿಸಿಸಿಐನ ನಿರ್ಧಾರ ಶೀಘ್ರದಲ್ಲೇ ಸ್ಪಷ್ಟವಾಗುವ ನಿರೀಕ್ಷೆಯಿದೆ.