ಲುಂಗಿ ಡ್ಯಾನ್ಸ್.. ಲುಂಗಿ ಡ್ಯಾನ್ಸ್; ಮದುವೆಯಲ್ಲಿ ಪಂಚೆಯುಟ್ಟು ಭರ್ಜರಿ ಸ್ಟೆಪ್ಸ್ ಹಾಕಿದ ಇಟಲಿ ಪ್ರವಾಸಿಗರು! ವಿಡಿಯೋ ನೋಡಿ
Viral Video: ಭಾರತೀಯ ಮದುವೆಯಲ್ಲಿ ಹಿಟ್ ಟ್ರ್ಯಾಕ್ ಲುಂಗಿ ಡ್ಯಾನ್ಸ್ ಗೆ ಇಟಾಲಿಯನ್ ಅತಿಥಿಗಳ ಗುಂಪೊಂದು ಭರ್ಜರಿ ನೃತ್ಯ ಮಾಡಿದೆ. ಸಾಂಪ್ರದಾಯಿಕ ಲುಂಗಿಗಳನ್ನು ಧರಿಸಿ, ಅವರು ತಮ್ಮ ಉತ್ಸಾಹ ಭರಿತ ನೃತ್ಯದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ.
ಲುಂಗಿ ತೊಟ್ಟು ಭರ್ಜರಿ ಸ್ಟೆಪ್ಸ್ ಹಾಕಿದ ಇಟಲಿ ಪ್ರವಾಸಿಗರು -
ನವದೆಹಲಿ,ಫೆ.9: ಭಾರತೀಯ ಮದುವೆ ಸಂಭ್ರಮದ ವಿಡಿಯೊಗಳು ಆಗಾಗ ವೈರಲ್ ಆಗುತ್ತವೆ. ವಿಭಿನ್ನ ಆಚರಣೆಯ ಸಂಪ್ರದಾಯಗಳು ಹೆಚ್ಚು ಜನರ ಗಮನ ಸೆಳೆಯುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ,ಭಾರತೀಯ ಮದುವೆಯಲ್ಲಿ ಹಿಟ್ ಟ್ರ್ಯಾಕ್ ಲುಂಗಿ ಡ್ಯಾನ್ಸ್ ಗೆ ಇಟಾಲಿ ಯನ್ ಅತಿಥಿಗಳ ಗುಂಪೊಂದು ಭರ್ಜರಿ ನೃತ್ಯ ಮಾಡಿದೆ. ಸಾಂಪ್ರದಾಯಿಕ ಲುಂಗಿಗಳನ್ನು ಧರಿಸಿ, ಅವರು ತಮ್ಮ ಉತ್ಸಾಹಭರಿತ ನೃತ್ಯದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತದೆ.
ಬಾಲಿವುಡ್ ಹಾಡುಗಳಿಗೆ ವಿದೇಶಿಯರು ಆಗಾಗ್ಗೆ ಡ್ಯಾನ್ಸ್ ಮಾಡಿ ಗಮನ ಸೆಳೆಯುತ್ತಾರೆ. ಈ ಬಾರಿಯೂ ಇದಕ್ಕೆ ಹೊರತಾಗಿಲ್ಲ. ದೆಹಲಿಯಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಇಟಲಿಯಿಂದ ಬಂದಿದ್ದ ಅತಿಥಿಗಳು ಲುಂಗಿ ಧರಿಸಿ ಬಾಲಿವುಡ್ ಹಾಡಿಗೆ ಜಬರ್ದಸ್ತ್ ಆಗಿ ಸ್ಟೆಪ್ ಹಾಕಿದ್ದಾರೆ. ಮ್ಯುಸಿಕ್ ಪ್ರಾರಂಭವಾದ ತಕ್ಷಣ, ಅವರು ಸೂಪರ್‌ಸ್ಟಾರ್ ರಜನಿಕಾಂತ್ , ಶಾರುಖ್ ಖಾನ್ ಮತ್ತು ಹನಿ ಸಿಂಗ್ ಒಳಗೊಂಡ ಜನಪ್ರಿಯ ಹಾಡಿನ ಸಿಗ್ನೇಚರ್ ಸ್ಟೆಪ್ ಗಳನ್ನು ಹಾಕಿದ್ದಾರೆ.
ವಿಡಿಯೋ ನೋಡಿ:
ಕೇವಲ ನೃತ್ಯ ಮಾತ್ರವಲ್ಲದೆ, ಸಾಂಪ್ರದಾಯಿಕವಾಗಿ ಬಿಳಿ ಲುಂಗಿ ಉಟ್ಟು ರಜನಿಕಾಂತ್ ಶೈಲಿಯ ಕಪ್ಪು ಕನ್ನಡಕ ಧರಿಸಿ ಎನರ್ಜಿಟಿಕ್ ಆಗಿ ಪ್ರದರ್ಶನ ನೀಡಿದ್ದಾರೆ. ಸದ್ಯ ಇವರ ನೃತ್ಯ ಮದುವೆಗೆ ಬಂದಿದ್ದವರ ಮನ ಗೆದ್ದಿದೆ. ಈ ವಿಡಿಯೊಗೆ ನೆಟ್ಟಿಗರು ಲೈಕ್, ಕಾಮೆಂಟ್ ನೀಡಿ ಪ್ರೋತ್ಸಾಹಿಸಿದ್ದಾರೆ. ವಿದೇಶಿಯರು ಬಾಲಿವುಡ್ ನೃತ್ಯದ ಮೇಲಿನ ಪ್ರೀತಿಯಿಂದ ಭಾರತೀಯರನ್ನು ಅಚ್ಚರಿಗೊಳಿಸಿದ್ದು ಇದೇ ಮೊದಲಲ್ಲ.ಈ ಹಿಂದೆಯೂ ಇಂತಹ ನೃತ್ಯ ವೈರಲ್ ಆಗಿವೆ.
Viral Video: ಮರವೇರಿ ಹಾಯಾಗಿ ಕುಳಿತ ಹುಲಿ; AI ವಿಡಿಯೊ ಎಂದ ನೆಟ್ಟಿಗರು
ಮತ್ತೊಂದು ಕುತೂಹಲಕಾರಿ ಘಟನೆಯಲ್ಲಿ ಅಮೆರಿಕದ ವರನೊಬ್ಬ ತನ್ನ ಸಂಗೀತ್ ಕಾರ್ಯಕ್ರಮ ದಲ್ಲಿ 'ಬೀಡಿ ಜಲೈಲೆ' ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಆರಂಭದಲ್ಲಿ ಕುಡಿದವನಂತೆ ವೇದಿಕೆಯ ಮೇಲೆ ಮಲಗುವಂತೆ ನಟನೆ ಮಾಡಿದ್ದು ನಂತರ ಎದ್ದು ನಿಲ್ಲುವ ಮೂಲಕ ಭರ್ಜರಿ ಡಾನ್ಸ್ ಮಾಡಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ.