Viral News: ಇಂಡಿಗೋ ವಿಮಾನದ ಕಿಟಕಿ ಸೀಟ್ ಮಾಯ! ನಿರಾಸೆಗೊಂಡ ಪ್ರಯಾಣಿಕನ ಪೋಸ್ಟ್ ವೈರಲ್
ಚೆನ್ನೈ ಮೂಲದ ಕ್ರೀಡಾ ನಿರೂಪಕ ಪ್ರದೀಪ್ ಇಂಡಿಗೋ ವಿಮಾನದ ಕಿಟಕಿ ಬಳಿಯ ಆಸನ ಪಡೆಯಲು ಹೆಚ್ಚುವರಿ ಹಣ ನೀಡಿ ಬುಕ್ ಮಾಡಿದ್ದರು. ಆದರೆ ಅಲ್ಲಿ ಕಿಟಕಿಯೇ ಮಾಯವಾಗಿದೆ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್ ಪೋಸ್ಟ್ ಹಂಚಿಕೊಂಡಿದ್ದು, ವೈರಲ್ ಆಗಿದೆ.
ನವದೆಹಲಿ: ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಇಂಡಿಗೋ ಗ್ರಾಹಕರಿಗೆ ಸೇವೆ ಒದಗಿಸುವ ವ್ಯವಸ್ಥೆಯಲ್ಲಿ ಒಂದಲ್ಲ ಒಂದು ನ್ಯೂನ್ಯತೆ ಕಂಡು ಬರುತ್ತಿದ್ದು, ಇತ್ತೀಚೆಗೆ ಬಹಳ ಸುದ್ದಿಯಾಗುತ್ತಿದೆ. ಇದೀಗ ವಿಂಡೋ ಸೀಟ್ ವಿಚಾರದಲ್ಲಿ ಇಂಡಿಗೋ ಸಂಸ್ಥೆ ಎಡವಟ್ಟು ಮಾಡಿಕೊಂಡಿದ್ದು, ಸಂಸ್ಥೆ ವಿರುದ್ಧದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ(Viral News). ಚೆನ್ನೈ ಮೂಲದ ಕ್ರೀಡಾ ನಿರೂಪಕರೊಬ್ಬರು ಇಂಡಿಗೋ ವಿಮಾನದಲ್ಲಿ ಕಿಟಕಿ ಬಳಿಯ ಆಸನ ಪಡೆಯಲು ಹೆಚ್ಚುವರಿ ಹಣವನ್ನು ಪಾವತಿ ಮಾಡಿದ್ದರು. ವಿಮಾನವೇರಿ ಆಸನದ ಬಳಿ ಬಂದಾಗ ಪಕ್ಕದಲ್ಲಿ ಕಿಟಕಿಯೇ ಇರಲಿಲ್ಲ. ಇದರಿಂದ ತಬ್ಬಿಬ್ಬಾದ ಅವರು ಸೋಶಿಯಲ್ ಮೀಡಿಯಾದಲ್ಲಿ ಇಂಡಿಗೋ ಸಂಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಎಕ್ಸ್‌ನಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದು ಇಂಡಿಗೋ ಸಂಸ್ಥೆ ಮುಜುಗರಕ್ಕೆ ಒಳಗಾಗಿದೆ.
ಚೆನ್ನೈ ಮೂಲದ ಕ್ರೀಡಾ ನಿರೂಪಕ ಪ್ರದೀಪ್ ಇಂಡಿಗೋ ಪ್ರಯಾಣದಲ್ಲಿ ಕಿಟಕಿ ಬಳಿಯ ಆಸನ ಪಡೆಯಲು ಹೆಚ್ಚುವರಿ ಹಣ ನೀಡಿ ಸೀಟ್ ಬುಕ್ ಮಾಡಿದ್ದರು. ಆದರೆ ಅಲ್ಲಿ ಕಿಟಕಿಯೇ ಮಾಯವಾಗಿದೆ ಎಂದು ನಿರಾಸೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದು, ಕಿಟಕಿ ಇರಲಿದೆ ಎಂದು ನಿರೀಕ್ಷಿಸಿದ ಜಾಗದಲ್ಲಿ ಗೋಡೆ ಇತ್ತು ಬರೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿರಾಸೆ ವ್ಯಕ್ತಪಡಿಸಿದ್ದಾರೆ.
Dei @IndiGo6E I paid for a window seat da.. where is the window 😁 #TravelParithabangal pic.twitter.com/Uk4qKXpQRk
— Pradeep Muthu (@muthupradeep) February 6, 2025
ವೈರಲ್ ಆಗಿದ್ದ ಪೋಸ್ಟ್‌ನಲ್ಲಿ ಶೀರ್ಷಿಕೆ ಕೂಡ ಹೈಲೈಟ್ ಆಗುತ್ತಿದೆ. ʼʼನಾನು ಕಿಟಕಿ ಸೀಟಿಗೆ ಹಣ ನೀಡಿದ್ದು! ಕಿಟಕಿ ಎಲ್ಲಿದೆ?ʼʼ ಎಂದು ಶೀರ್ಷಿಕೆ ನೀಡಿ ಫೋಟೊವನ್ನು ತಮ್ಮಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದದ್ದು ಬಳಕೆದಾರರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: Viral Video: ಜನ ಸಂದಣಿಯ ರೈಲಿನಲ್ಲಿ ಪ್ರಯಾಣಿಕರ ಅಪಾಯಕಾರಿ ಸಾಹಸ ಹೇಗಿತ್ತು? ವಿಡಿಯೊ ನೋಡಿ
ಕೆಲವು ಬಳಕೆದಾರರು ತಮಗೂ ಪ್ರಯಾಣದಲ್ಲಿ ಇಂತಹದ್ದೇ ಅನುಭವ ಆಗಿದೆ ಎಂದು ತಿಳಿಸಿದ್ದಾರೆ. ನಾನೂ ಕೂಡ ಇಂಥದೇ ಸನ್ನಿವೇಶವನ್ನು ಎದುರಿಸಿದ್ದೇನೆ ಎಂದು ನೆಟ್ಟಿಗರೊಬ್ಬರು ಕಿಟಕಿರಹಿತ ವಿಮಾನ ಪ್ರಯಾಣದ ಫೋಟೊ ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ತುರ್ತು ನಿರ್ಗಮ ವ್ಯವಸ್ಥೆ ಮಾಡಿದ್ದರೆ ಈ ರೀತಿ ವಿಂಡೋ ಸೀಟ್ ಇರಲಾರದು ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ. ಪ್ರದೀಪ್ ಅವರ ಈ ಪೋಸ್ಟ್‌ಗೆೆ ಇಂಡಿಗೋ ಸಂಸ್ಥೆ ಯಾವುದೇ ಸ್ಪಷ್ಟನೆ ನೀಡಿಲ್ಲ.